ತಿರುಪತಿಯಲ್ಲಿ ನಿಮ್ಮ ಹೆಸರಲ್ಲಿ ಒಂದು ದಿನ ಅನ್ನ ದಾನ ಮಾಡಲು ತಗಲುವ ಖರ್ಚೆಷ್ಟು? ಈ ಬಗ್ಗೆ ಇಲ್ಲಿದೆ ಮಾಹಿತಿ
ತಿರುಮಲ ಕ್ಷೇತ್ರದಲ್ಲಿ ಅಣ್ಣ ದಾನ ಮಾಡಿದರೆ ಪುಣ್ಯ ಸಿಗುತ್ತದೆ. ಆದ್ದರಿಂದಲೇ ಅನ್ನದಾನದಲ್ಲಿ ಭಾಗವಹಿಸಲು ಅನೇಕರು ಮುಂದೆ ಬರುತ್ತಾರೆ. ತಿರುಮಲದಲ್ಲಿ ನಿಮ್ಮ ಹೆಸರಿನಲ್ಲಿ ಒಂದು ದಿನ ಅನ್ನ ಮಾಡಲು ಎಷ್ಟು ವೆಚ್ಚವಾಗುತ್ತದೆ ಎಂದು ನಿಮಗೆ ತಿಳಿದಿದಿಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.
ತಿರುಮಲ ತಿಮ್ಮಪ್ಪನ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಶ್ರೀ ವೆಂಕಟೇಶ್ವರನಿಗೆ ಮುಡಿಯನ್ನು ಅರ್ಪಿಸಿ ಪ್ರಾರ್ಥನೆ ಸ;ಲ್ಲಿಸುತ್ತಾರೆ. ಆದರೆ ಶ್ರೀವಾರಿ ದರ್ಶನಕ್ಕೆ ಬರುವ ಭಕ್ತರಿಗೆ ಟಿಟಿಡಿ ಉಚಿತವಾಗಿ ಅನ್ನ ಪ್ರಸಾದ ನೀಡುತ್ತದೆ.
ತಿರುಮಲದಲ್ಲಿರುವ ತಾರಿಗೊಂಡ ವೆಂಗಮಾಂಬ ನಿತ್ಯ ಅನ್ನಪ್ರಸಾದ ಕೇಂದ್ರದ ಮೂಲಕ ಪ್ರತಿದಿನ 60 ರಿಂದ 70 ಸಾವಿರ ಜನರಿಗೆ ಅನ್ನ ಪ್ರಸಾದವನ್ನು ನೀಡುಲಾಗುತ್ತದೆ. ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಭವನದ ಜೊತೆಗೆ ಹಳೆಯ ಅನ್ನದಾನ ಕಾಂಪ್ಲೆಕ್ಸ , ಪಿಎಸಿ -2 ನಲ್ಲೂ ಅನ್ನಪ್ರಸಾದ ವಿತರಣೆ ನಡೆಯಲ್ಲಿಯೇ
ರಾಮಭಗೀಚ ಬಸ್ ನಿಲ್ದಾಣ, ಕೇಂದ್ರೀಯ ವಿಚಾರಣಾ ಕಚೇರಿ, ಪಿಎಸಿ -1 ರಲ್ಲಿಯೂ ಆಹಾರ ಪಡಿತರ ಚೀಟಿಯನ್ನು ಪಡೆಯುವ ಸ್ಥಳವನ್ನು ಸ್ಥಾಪಿಸಲಾಗಿದೆ. ತಿರುಮಲಕ್ಕೆ ಬರುವ ಭಕ್ತರು ಹಸಿವಿನಿಂದ ಬಳಲಬಾರದೆಂದು ಎಲ್ಲೆಡೆ ಅಣ್ಣಪೆಅಸದ ನೀಡಲಾಗುತ್ತದೆ. ತಾರಿಗೊಂಡ ವೆಂಗಮಾಂಬ ನಿತ್ಯ ಅನ್ನಪ್ರಸಾದ ಕೇಂದ್ರ ಈ ಜವಾಬ್ದಾರಿತನ್ನು ನಿರ್ವೀಹಿಯುತ್ತದೆ.
ವೆಂಗಮಾಂಬ ಕೇಂದ್ರದಲ್ಲಿ ಅನ್ನಪ್ರಸಾದದೊಂದಿಗೆ ಭಕ್ತರು ದೇವರ ದರ್ಶನಕ್ಕಾಗಿ ಕಾಯುವ ಸರತಿ ಸಾಲು ಮತ್ತು ಕಂಪಾರ್ಟಮೆಂಟಗಳಲ್ಲಿ ಭಕ್ತರಿಗೆ ಅಣ್ಣ ಸಾಂಬಾರ, ಮೊಸರನ್ನ, ಉಪ್ಪಿಟ್ಟು, ಪೊಂಗಲ್, ಮಜ್ಜಿಗೆ, ಹಾಲು, ಚಹಾ ಮತ್ತು ಕಾಫಿಯನ್ನು ಟಿಟಿಡಿಸರಬರಾಜು ಮಾಡುತ್ತದೆ. ಬೆಳಗ್ಗೆ8 ರಿಂದ ಆರಂಭಗೊಂಡು ಮಧ್ಯಾಹ್ನ್ 12 ಗಂಟೆಗೆ ಮುಕ್ತಾಯವಾಗುತ್ತದೆ.
ತಿರುಮಲ ಭಕ್ತರಿಗೆ ಒಂದು ದಿನ ಅಣ್ಣ ದಾನಕ್ಕೆ ಸುಮಾರು 38 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಬೆಳಗಿನ ಉಪಹಾರಕ್ಕೆ 8 ಲಕ್ಷ, ಮಧ್ಯಾಹ್ನ ಊಟಕ್ಕಾಗಿ 15 ಲಕ್ಷ ಮತ್ತು ರಾತ್ರಿ ಊಟಕ್ಕಾಗಿ 15 ಲಕ್ಷ ರೂ ಖರ್ಚಾಗುತ್ತಿದೆ.
ಅನ್ನದಾನ ಮಾಡುವವರು ಹಣವನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ ಕೊಟ್ಟರೆ. ನಿಮ್ಮ ಹೆಸರಿನಲ್ಲಿ ಅನ್ನದನ ಮಾಡಲಾಗುತ್ತದೆ. ಇದನ್ನು ದೇವಸ್ಥಾನದಲ್ಲಿ ಆಸುಪಾಸಿನಲ್ಲಿರುವ ಡಿಸ್ಪ್ಲೇ ಬೋರ್ಡನಲ್ಲಿ ಪ್ರದಶ್ರಿಸಲಾಗುತ್ತದೆ. ಅನ್ನದನಕ್ಕೆ ೩೮ ಲಕ್ಷ ಹಣ ಪಾವತಿಸಿದ ದಾನಿಗಳು ಸ್ವತಃ ಭಕ್ತರಿಗೆ ಪ್ರಸಾದವನ್ನು ಭಡಿಸಬಹುದು.
ದೇಣಿಗೆಗಳನ್ನು ಯಾವುದೇ ಬ್ಯಾಂಕನ ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ನೀಡಬಹುದು, ಕಾರ್ಯನಿರ್ವಾಹಕ ಅಧಿಕರೀ, ಶ್ರೀ ವೆಂಕಟೇಶ್ವರ ಅಣ್ಣ ಪ್ರಸಾದ ಟ್ರಸ್ಟ, ಟಿಟಿಡಿ, ತಿರುಪತಿ ಪಾರವಾಗಿ ಡ್ರಾ ಮಾಡಬಹುದು. ಇನ್ನು ತಿರುಮಲದಲ್ಲಿರುವ ಮಾತೃಶ್ರೀ ತರಿಗೊಂಡ ವೆಂಗೆಮಾಂಬ ಅನ್ನಪ್ರಸಾದ ಭವನದಲ್ಲಿ ವೈಯಕ್ತಿಕವಾಗಿಯೂ ದೇಣಿಗೆ ನೀಡಬಹುದು.
ಇಂದು ಚಂದ್ರಬಾಬು ನಾಯ್ಡು ಅವರ ಮೊಮ್ಮಗನ ಹಾಗು ಲೋಕೇಶ್ ನಾಯ್ಡು ಪುತ್ರ ದೇವಾಂಶ್ ಹುಟ್ಟುಹಬ್ಬವಿದ್ದು ದೇವಾಂಶ್ ಹುಟ್ಟುಹಬ್ಬದ ಸಂದರ್ಭದಲ್ಲಿ, ನಾರಾ ಅವರ ಕುಟುಂಬದ ಸದಸ್ಯರು ತಿರುಮಲದಲ್ಲಿ ಆತನ ಹೆಸರಿನಲ್ಲಿ ಅನ್ನದಾನ ಮಾಡಿದ್ದಾರೆ. 35 ಲಕ್ಷ ಪಾವತಿಸಿ ದೇಣಿಗೆ ನೀಡಲಾಗಿದೆ ಎಂದು ಟಿಟಿಡಿ ಡಿಸ್ಪ್ಲೇ ಬೋರ್ಡನಲ್ಲಿ ತೋರಿಸಿದೆ.