ಗೃಹಲಕ್ಷ್ಮಿ 7 ನೇ ಕಂತಿನ ಹಣಕ್ಕೆ ಬ್ಯಾಂಕಿನಿಂದ ಎಸ್ ಎಂ ಎಸ್ ಬಾರದೆ ಇದ್ರೆ ಈ ರೀತಿ ಮಾಡಿ !
ಗೃಹಲಕ್ಷ್ಮಿ ಯೋಜನೆ ಮೂಲಕ ಇಲ್ಲಿವರೆಗೆ 12,000 ರೂಪಾಯಿ ಹಣ ಸಾಕಷ್ಟು ಮಹಿಳೆಯರ ಖಾತೆಯನ್ನು ( Bank Account ) ತಲುಪಿದೆ.
ರಾಜ್ಯ ಸರ್ಕಾರ ಮಹಿಳೆಯರಿಗಾಗಿ,ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಅವರ ಆರ್ಥಿಕ ಸ್ವಾವಲಂಬನೆಯನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ಗೃಹಲಕ್ಷ್ಮಿ ಯೋಜನೆ ( Gruha Lakshmi Scheme ) ಅಡಿಯಲ್ಲಿ ಎರಡು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ನೀಡುತ್ತಿದೆ.
ಇಲ್ಲಿವರೆಗೆ 12,000 ರೂಪಾಯಿ ಹಣ ಸಾಕಷ್ಟು ಮಹಿಳೆಯರ ಖಾತೆಯನ್ನು ( Bank Account ) ತಲುಪಿದೆ.ಅರ್ಜಿ ಸಲ್ಲಿಸಿದ ಒಂದಷ್ಟು ಜನರಿಗೆ ಇಲ್ಲಿಯವರೆಗೆ ಹಣ ವರ್ಗಾವಣೆ ಆಗಿಲ್ಲ.ಇದಕ್ಕೆ ಕಾರಣಗಳು ಕೂಡ ತಿಳಿದು ಬಂದಿದ್ದು ಸರ್ಕಾರ ಅವುಗಳ ಪರಿಹಾರಕ್ಕಾಗಿ ಕೆಲವು ಉಪಕ್ರಮಗಳನ್ನು ಕೈಗೊಂಡಿದೆ.
ನಿಮ್ಮ ಖಾತೆಗೆ ಯಾಕೆ ಹಣ ಬರ್ತಿಲ್ಲ ಗೊತ್ತಾ ?
* ನೀವು ಬ್ಯಾಂಕ್ ನಲ್ಲಿ ಖಾತೆ ಹೋದಿದ್ರೆ ಸಾಲೋದಿಲ್ಲ,ಅದು ಆಕ್ಟಿವ್ ಆಗಿರಬೇಕು.ಜೊತೆಗೆ ಆ ಬ್ಯಾಂಕ್ ಖಾತೆಗೆ ಈಕೆವೈಸಿ ಹಾಗೂ ಎನ್ ಪಿಸಿಐ ಮ್ಯಾಪಿಂಗ್ ಆಗಿರಬೇಕು.
* ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಹೆಸರು ಇದ್ದರೆ ಮಾತ್ರ ಸಾಕಾಗೋದಿಲ್ಲ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
* ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಮಾತ್ರ ಸಾಕಾಗುವುದಿಲ್ಲ,ನೀವು ಸಲ್ಲಿಸಿದ ಅರ್ಜಿ ಸರಿಯಾಗಿರಬೇಕು ಸರಿಯಾದ ದಾಖಲೆಗಳನ್ನು ನೀವು ನೀಡಿರಬೇಕು.
* ಇದೆಲ್ಲದ್ರ ಹೊರತಾಗಿ ಸರ್ವರ್ ಸಮಸ್ಯೆ, ತಾಂತ್ರಿಕ ದೋಷಗಳು ಕೂಡ ನಿಮ್ಮ ಖಾತೆಗೆ ಹಣ ಬಾರದೆ ಇರುವುದಕ್ಕೆ ಕರಣ ಆಗಿರಬಹುದು.
ಮಾರ್ಚ್ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ ! ನಿಮ್ಮ ಖಾತೆ ಚೆಕ್ ಮಾಡಿಕೊಂಡ್ರಾ !
ಇಷ್ಟೆಲ್ಲಾ ಸಮಸ್ಯೆ ಇದ್ದಮೇಲೆ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ ಅಂತ ಅಂದ್ಕೊಂಡ್ರೆ ಏನು ಪ್ರಯೋಜನ ಅಲ್ವಾ ? ಹಾಗಾಗಿ ಈಗ ಹೇಳಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ನೀವು ಪ್ರಯತ್ನಿಸಬೇಕು. ಅದಾದ ನಂತರ ನಿಮ್ಮ ಖಾತೆಗೆ ತಪ್ಪದೆ ಹಣ ವರ್ಗಾವಣೆ ಆಗುತ್ತದೆ.
ಏಳನೇ ಕಂತಿನ ಹಣ ಬಿಡುಗಡೆ !
ಮಾರ್ಚ್ 15 ರಿಂದ 7ನೇ ಕಂತಿನ ಹಣ ಬಿಡುಗಡೆಯಾಗಿದೆ. ಹಣ ಬಿಡುಗಡೆ ಆದ ನಂತರ ಒಂದೊಂದೇ ಜಿಲ್ಲೆಗೆ ಹಣ ಬಂದು ತಲುಪುತ್ತದೆ. ಅಂದ್ರೆ ಆರ್ ಬಿ ಐ ನಿಯಮದ ಪ್ರಕಾರ ಒಂದಷ್ಟು ಲಿಮಿಟ್ ಇರುವುದರಿಂದ ಎಲ್ಲ ಜಿಲ್ಲೆಗೂ ಒಂದೇ ದಿನ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ.
ರದ್ದು ಮಾಡಲಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ! ಮಾರ್ಚ್ ತಿಂಗಳ ಲಿಸ್ಟ್ ಇಲ್ಲಿದೆ
ನಿಮ್ಮ ಖಾತೆಗೆ ಒಂದು ವೇಳೆ ಹಣ ಬಂದಿದ್ಯ ಇಲ್ವಾ ? ಅನ್ನುವುದಕ್ಕೆ ಮೊಬೈಲ್ ಗೆ ಎಸ್ ಎಂ ಎಸ್ ಬಾರದೆ ಇದ್ರೆ ಟೆನ್ಶನ್ ಮಾಡಿಕೊಳ್ಳುವ ಅಗತ್ಯ ಇಲ್ಲ. ಮಾರ್ಚ್ 31 ರ ಒಳಗೆ ಎಲ್ಲರಿಗೂ ಹಣ ವರ್ಗಾವಣೆ ಆಗುತ್ತದೆ ಅಥವಾ ನೀವು ಬ್ಯಾಂಕಿಗೆ ಹೋಗಿ ನಿಮ್ಮ ಬ್ಯಾಂಕ್ ಪಾಸ್ ಬುಕ್ ಅಪಡೇಟ್ ಮಾಡಿಸಿ ಮಾಹಿತಿ ತಿಳಿದುಕೊಳ್ಳಬಹುದು.
DBT Karnataka mobile ಅಪ್ಲಿಕೇಶನ್ ಮೂಲಕವೂ ನಿಮ್ಮ ಖಾತೆಗೆ ಜಮಾ ಆಗಿರುವ ಡಿ ಬಿ ಟಿ ಮೊತ್ತದ ಬಗ್ಗೆ ತಿಳಿದುಕೊಳ್ಳಬಹುದು.
Tags
Govt.scheme