Crop Insurance : ರೈತರ ಖಾತೆಗೆ ಡಿಬಿಟಿ ಆಗಿದೆ ಬೆಳೆ ವಿಮೆ ಹಣ
(Crop Insurance ) ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡ ಎಂಟು ಲಕ್ಷ ರೈತರಿಗೆ 600 ಕೋಟಿಯನ್ನು ಬಿಡುಗಡೆ ಮಾಡಿದ್ದು, ಉಳಿದ 800 ಕೋಟಿಯನ್ನು ಮಾರ್ಚ್ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.
ಈ ಕುರಿತು ಕೃಷಿ ಸಚಿವ ಎಲ್ ಚೆಲುವರಾಯಸ್ವಾಮಿ ಮಾಹಿತಿ ನೀಡಿದ್ದು,ದೇಶದಲ್ಲಿರುವ 19 ಲಕ್ಷ ರೈತರಿಗಾಗಿ 14 ಕೋಟಿ ರೂಪಾಯಿಗಳ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಳೆ ವಿಮೆ ಹಣ ಬಿಡುಗಡೆ ಮಾಡಿದ ಸರ್ಕಾರ ! :
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ರೈತರು ನೋಂದಾಯಿಸಿಕೊಂಡಿದ್ದು,ಮಾರ್ಚ್ 31 2024, ಒಳಗೆ ಲಕ್ಷ ರೈತರ ಖಾತೆಗೆ ಹಣ ಬಿಡುಗಡೆ ಆಗಲಿದೆ.ಬೆಳೆ ವಿಮೆ (Crop Insurance ) ಹಣವನ್ನು ಶೇಕಡ 25 ರಷ್ಟು ರೈತರಿಗೆ ಲಭ್ಯವಾಗಿದ್ದು,ಇನ್ನೂ 75 ರಷ್ಟು ಹಣವನ್ನು ರೈತರಿಗೆ ತಲಿಪಿಸುವುದು ಬಾಕಿ ಇದೆ. ಈ ಕೆಲಸ ಈ ತಿಂಗಳು ಅಂತ್ಯದೊಳಗೆ ಆಗಲಿದೆ.
ನಿಮ್ಮ ಖಾತೆಗೆ ಹಣ ಬಂದಿದ್ಯಾ ಚೆಕ್ ಮಾಡಿ !:
ಈ ಯೋಜನೆಯ ಅಡಿಯಲ್ಲಿ ನೀವು ಹೆಸರನ್ನು ನೋಂದಾಯಿಸಿಕೊಂಡಿದ್ದರೆ ನಿಮ್ಮ ಖಾತೆಗೆ ಹಣ ಬಂದಿದ್ಯಾ ಎಂಬುದು ಈ ರೀತಿ ಚೆಕ್ ಮಾಡಿಕೊಳ್ಳಿ.
* https://samrakshane.karnataka.gov.in/ ಕರ್ನಾಟಕ ಸರ್ಕಾರದ ಈ ಅಧಿಕೃತ ಸೈಟ್ ಗೆ ಭೇಟಿ ನೀಡಿ.
* ಅಲ್ಲಿಯ ಅಗತ್ಯ ಇರುವ ನಿಮ್ಮ ವೈಯಕ್ತಿಕ ವಿವರಗಳನ್ನು ನೀಡಿ.
* ನಂತರ ನಿಮ್ಮ ಖಾತೆಗೆ ಬೆಳೆ ವಿಮೆ (Crop Insurance ) ಡಿಬಿಟಿ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿಯಬಹುದು.
Tags
Govt.scheme