HSRP Number Plate : ಇದುವರೆಗೂ HSRP ನಂಬರ್ ಪ್ಲೇಟ್ ಹಾಕದವರಿಗೆ, RTO ಹೊಸ ನಿರ್ಧಾರವನ್ನು ಕೈಗೆತ್ತಿಕೊಂಡಿದೆ.
ದೇಶದಲ್ಲಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಾಗೆ ಸಾಕಷ್ಟು ಸರ್ಕಾರಿ ನಿಯಮಗಳು ತುಂಬಾ ಕಠಿಣಗೊಳ್ಳುತ್ತಿವೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರವು ತಿಳಿಸಿರುವ ಹಾಗೆ ಎಲ್ಲ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ( HSRP Number Plate ) ಇರಲೇಬೇಕು, ಒಂದು ವೇಳೆ ಇಲ್ಲವಾದಲ್ಲಿ ಆ ವಾಹನಗಳಿಗೆ ಭಾರಿ ಪ್ರಮಾಣದ ದಂಡ ಪಾವತಿ ಮಾಡಬೇಕಾಗುತ್ತದೆ.ಉಚಿತ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ
ದೆಹಲಿಯ ಎನ್ ಸಿ ಆರ್ ನ ಅಧಿಕಾರಿಗಳು ವಾಹನಗಳ ನಂಬರ್ ಪ್ಲೇಟ್ ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.ರಾಜಧಾನಿ ದೆಹಲಿ ಗ್ರೇಟರ್ ನೋಯಿಡಾ, ನೋಯಿಡಾ, ಫರೀದಾಬಾದ್, ಗೌತಮ್ ಬುದ್ಧ ನಗರ ಮೊದಲಾದ ಕಡೆ ಅಧಿಕಾರಿಗಳು ವಾಹನಗಳ ನಂಬರ್ ಪ್ಲೇಟ್ ಪರೀಕ್ಷೆಯಲ್ಲಿ ಸಿಕ್ಕಿದ, HSRP ನಂಬರ್ ಪ್ಲೇಟ್ ಇಲ್ಲದೇ ಇರುವ ವಾಹನಗಳನ್ನು ತಡೆಹಿಡಿದು, ಚಲನ್ ಕೊಡುತ್ತಿದ್ದಾರೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ :
ದೇಶದಾದ್ಯಂತ ಲೋಕಸಭಾ ಚುನಾವಣೆ ಹತ್ತಿರವಿರುವ ಕಾರಣದಿಂದಾಗಿ ಚುನಾವಣಾ ಮಾದರಿ ನೀತಿ ಸಹಿತ ಜಾರಿಯಾಗಿದ್ದು ಸಾಕಷ್ಟು ನಿಯಮಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ, ಈ ಹಿನ್ನಲೆಯಲ್ಲಿ HSRP ಇಲ್ಲದೆ ಇರುವ ವಾಹನಗಳ ಚಲಾವಣೆ ನಿರ್ಬಂಧಿಸಲಾಗುತ್ತಿದೆ.
10,000 ರೂಪಾಯಿಗಳ ದಂಡ ಪಾವತಿಸಬೇಕು.
ಸರ್ಕಾರವು 2019 ಕ್ಕಿಂತ ಮೊದಲು ಖರೀದಿ ಮಾಡಿದ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕು ಎನ್ನುವುದನ್ನು ಕಡ್ಡಾಯ ಮಾಡಲಾಗಿದೆ.ಇದಕ್ಕಾಗಿ ಸರ್ಕಾರವು ಗಡುವು ನೀಡಿದೆ, ಸಾಕಷ್ಟು ಜನರಿಗೆ ನಿಗದಿತ ದಿನಾಂಕದೊಳಗೆ ಈ ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಸಾಧ್ಯವಾಗದೆ ಇರುವ ಕಾರಣದಿಂದಾಗಿ, ಮೇ 31ರವರೆಗೆ ಮತ್ಯಾವಕಾಶವನ್ನು ಮಾಡಿಕೊಡಲಾಗಿದೆ. ರಾಜಧಾನಿ ದೆಹಲಿ ಹಾಗು ಮತಿತ ಪ್ರದೇಶಗಳಲ್ಲಿ ಈಗಾಗಲೇ ಈ ನಿಯಮಗಳು ಕಡ್ಡಾಯಗೊಳಿಸಿದ್ದು, ಒಂದು ವೇಳೆ HSRP ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುತ್ತಿರುವವರಿಗೆ,ಅಧಿಕಾರಿಗಳು 5 ರಿಂದ 10 ಸಾವಿರದವರೆಗೆ ದಂಡವನ್ನು ವಿಧಿಸುತ್ತಿದ್ದಾರೆ.
ಈ ನಿಯಮ ಸದ್ಯ ದೆಹಲಿಯಲ್ಲಿ ಜಾರಿಯಾಗಿದ್ದರು ಸಹ,ಇನ್ನು ಕೆಲವೇ ದಿನಗಳಲ್ಲಿ ದೇಶದಾದ್ಯಂತ ಜಾರಿಗೆ ಬರಲಿದೆ.ಹಾಗಾಗಿ HSRP ನಂಬರ್ ಪ್ಲೇಟ್ ಇಲ್ಲದೆ ಇರುವವರು ಬೇಗ ನಿಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಹಾಕಿಸಿಕೊಳ್ಳಿ ಇಲ್ಲವೇ 10,000 ದಂಡ ಪಾವತಿ ಮಾಡುವುದಕ್ಕೆ ಸಿದ್ಧರಾಗಿ!