ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ ಭಕ್ಷ್ಯ ಭೋಜನ್ !
86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಜನೆವರಿ 6, 7 ಮತ್ತು 8 - 2023
ಹಾವೇರಿ ಸಾಹಿತ್ಯ ಜಾತ್ರೆಗೆ ಇನ್ನೆರಡು ದಿನಗಳಷ್ಟೇ ಬಾಕಿಯಿದೆ. ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಸಾಹಿತ್ಯದ ಔತಣದೊಂದಿಗೆ ಸಿಹಿ ಭೋಜನ ಉಣಬಡಿಸಲಾಗುತ್ತಿದ್ದು, ಸಿಹಿ ಶೇಂಗಾ ಹೋಳಿಗೆ ಸಿದ್ದಪಡಿಸುವ ಕಾರ್ಯ ಶುರುವಾಗಿದೆ.
PS_155_ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಹೊಲಿಗೆ ಯಂತ್ರಕ್ಕೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.।।
ಜನೆವರಿ 6 ರಿಂದ ೩ ದಿನಗಳ ಕಾಲ ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಸಮ್ಮೇಳನಕ್ಕೆ ಬರುವ ಲಕ್ಷಾಂತರ ಜನ ಸಾಹಿತ್ಯಾಸಕ್ತರಿಗೆ ಭಾರಿ ಭೋಜನ ಸಿದ್ಧಪಡಿಸಲು ನಿರ್ಧರಿಸಲಗಿದೆ. ನಿತ್ಯವೂ ಭೋಜನದೊಂದಿಗೆ ವಿಶೇಷ ಸಿಹಿ ಖಾದ್ಯ ಇರಲಿದೆ. ಬಾಯಲ್ಲಿ ನೀರೂರಿಸುವ ಗೋಧಿ ಹುಗ್ಗಿ, ಲಕಡಿ ಪಾಕ್, ಹೆಸರು ಬೇಳೆ ಪಾಯಸ, ರವೆ ಉಂಡೆ, ಮೈಸೂರ್ ಪಾಕ್, ಮೋತಿಚೂರು ಲಾಡು........ಹೀಗೆ ತರಹೇವಾರಿ ಸಿಹಿ ತಿಂಡಿ ಸಮ್ಮೇಳನದ ವೇಳೆ ಬಡಿಸಲಾಗುತ್ತಿದೆ. ಸಮ್ಮೇಳನದ ವೇದಿಕೆ ಸಮೀಪದಲ್ಲೇ ಅಡುಗೆ ವಿಭಾಗ ತೆರೆಯಲಾಗಿದ್ದು, ಹುಬ್ಬಳ್ಳಿಯ ಕ್ಯಾಟರಿಂಗ್ ಸಂಸ್ಥೆಯೊಂದು ಈಗಾಗಲೇ ಆಗಮಿಸಿ ಸಿಹಿ ತಿನಿಸು ಸಿದ್ಧಪಡಿಸುವ ಕಾರ್ಯ ಶುರು ಮಾಡಿದೆ. ಮಂಗಳವಾರದಿಂದಲೇ ಶೇಂಗಾ ಹೋಳಿಗೆ ಮಾಡುವ ಕಾರ್ಯ ಆರಂಭಿಸಲಾಗಿದೆ. ಲಕ್ಷಾಂತರ ಜನರಿಗೆ ಹೋಳಿಗೆ ಸಿದ್ಧಪಡಿಸಬೇಕಿರುವುದರಿಂದ ಮುರು ದಿನ ಮುಂಚಿತವಾಗಿಯೇ ನೂರಾರು ಜನ ಹೋಳಿಗೆ ಸಿದ್ಧಪಡಿಸುವ ಕಾರ್ಯದಲ್ಲೇ ಮಗ್ನರಾಗಿದ್ದಾರೆ. ದಿನಕ್ಕೊಂದು ವಿಶೇಷ: ಮೂರು ದಿನಗಳ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರಿಗೆ ಏನೇನು ಊಟೋಪಹಾರ ನೀಡಲಾಗುತ್ತದೆ ಎಂಬ ಮೆನು ಸಿದ್ಧಪಡಿಸಲಾಗಿದೆ. ಸಮ್ಮೇಳನದಲ್ಲಿಸಮ್ಮೇಳನದ ಮೊದಲ ದಿನ ಬೆಳಗಿನ ಉಪಹಾರಕ್ಕೆ ಶಿರಾ, ಉಪಿಟ್ಟು ಮತ್ತು ಬೆಲ್ಲದ ಚಹಾ ನೀಡಲಾಗುತ್ತಿದೆ. ಮಧ್ಯಾಹ್ನ ಭೋಜನಕ್ಕೆ ಶೇಂಗಾ ಹೋಳಿಗೆ, ಬದನೆ ಕಾಯಿ ಪಲ್ಯ, ಚಪಾತಿ, ಶೇಂಗಾ ಚಟ್ನಿ, ಮೊಸರು, ಅನ್ನ ಸಾಂಬಾರು ನೀಡಲಾಗುತ್ತಿದೆ, ಅಂದು ರಾತ್ರಿ ಊಟಕ್ಕೆ ಹೆಸರು ಬೇಳೆ ಪಾಯಸ, ಪುಳಿಯೋಗರೆ, ಅನ್ನ ಸಾಂಬಾರು, ನೀಡಲು ನಿರ್ಧರಿಸಲಾಗಿದೆ.
ಜನೆವರಿ 7ರಂದು 2ನೇ ದಿನ ಬೆಳಿಗ್ಗಿನ ಉಪಹಾರಕ್ಕೆ ರವಾ ಉಂಡೆ, ವೆಜ್ ಫಲಾವ್, ಮತ್ತು ಬೆಲ್ಲದ ಚಹಾ ನೀಡಲಾಗುತ್ತಿದೆ. ಮಧ್ಯಾಹ್ನ ಭೋಜನಕ್ಕೆ ಲಡಾಕಿಪಾಕ್ ಮಿಕ್ಸ್ ವೆಜ್ ಪಲ್ಯ, ಚಪಾತಿ, ಭಿರಂಜಿ ರೈಸ್, ಮಾದಲಿ, ಶೇಂಗಾ ಚಟ್ನಿ, ಮೊಸರು, ಅನ್ನ ಸಾಂಬಾರ್ ನೀಡಲಾಗುತ್ತಿದೆ. ಅಂದು ರಾತ್ರಿ ಶಾವಿಗೆ ಪಾಯಸ, ಬಿಸಿ ಬೇಳೆ ಬಾತ್, ಅನ್ನ ಸಾಂಬಾರ್ ನೀಡಲಾಗುತ್ತಿದೆ.
ಮೂರನೇ ದಿನ ಜನೆವರಿ 8ರಂದು ಬೆಳಗ್ಗೆ ಮೈಸೂರು ಪಾಕ್, ವಾಂಗಿ ಬಾತ್, ಬೆಲ್ಲದ ಚಹಾ, ಮಧ್ಯಾಹ್ನ ಮೋತಿಚೂರು ಲಡ್ಡು, ಕಾಳು ಪಲ್ಯ, ಚಪಾತಿ, ಶೇಂಗಾ ಚಟ್ನಿ, ಮೊಸರು, ಅನ್ನ ಸಾಂಬಾರ ನೀಡಲಾಗುತ್ತಿದೆ. ರಾತ್ರಿ ಊಟಕ್ಕೆ ಗೋಧಿ ಹುಗ್ಗಿ, ಚಿತ್ರಾನ್ನ, ಅನ್ನ, ಸಾಂಬಾರ್ ನೀಡಲಾಗುತ್ತಿದೆ.
PS_156_ಲೇಬರ್ ಕಾರ್ಡ ಇದ್ದವರಿಗೆ ಭರ್ಜರಿ ಗಿಫ್ಟ್ ‼ 20,000 ಸಾವಿರ ಪಡೆಯಿರಿ ಇಂದೇ ಅರ್ಜಿ ಸಲ್ಲಿಸಿ ಪಡೆಯಿರಿ ...‼‼
ನಿತ್ಯ 1.5 ಲಕ್ಷ ಜನರಿಗೆ ಊಟ: ಹಾವೇರಿ ನುಡಿ ಜಾತ್ರೆಗೆ ನಾಡಿನ ಎಲ್ಲೆಡೆಯಿಂದ ಬರಲು ಉತ್ಸುಕರಾಗಿದ್ದಾರೆ. ಅದಕ್ಕಾಗಿ ಮೊದಲ ದಿನ ಹೆಚ್ಚಿನ ಸಾಹಿತ್ಯಾಸಕ್ತರು ಬರುವ ನಿರೀಕ್ಷೆ ಇದೆ. ಮೊದಲ ದಿನ 1.5 ಲಕ್ಷ ಜನ, 2 ನೇ ದಿನ 1 ಲಕ್ಷ ಜನ ಹಾಗೂ ಕೊನೆ ದಿನ 1.5 ಲಕ್ಷ ಜನರಿಗೆ ಊಟೋಪಹಾರದ ವ್ಯವಸ್ಥೆ ಮಾಡಲು ಆಹಾರ ಸಮಿತಿ ನಿರ್ಧರಿಸಿದೆ.
ಸಾಮಾನ್ಯರು ಗಣ್ಯರು, ಅತಿಗಣ್ಯರು ಹೀಗೆ ಮೂರು ಶ್ರೇಣಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. 35 ಎಕರೆ ಪ್ರದೇಶದಲ್ಲಿ ಕಿಚನ್, ಡೈನಿಂಗ್ ವ್ಯವಸ್ಥೆ ಕೈಗೊಳ್ಳಲಾಗಿದ್ದು, ನೂಕು ನುಗ್ಗಲಾಗುವುದನ್ನು ತಪ್ಪಿಸಲು 200 ಕೌಂಟರ್ ತೆರೆಯಲಾಗುತ್ತಿದೆ. ಮಹಿಳೆಯರು, ವೃದ್ಧರು, ವಿಶೇಷಚೇತನರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಆಹಾರ ಸಮಿತಿ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಪಂಚಾಯ್ತಿ ಸಿಇಓ ಮಹಮ್ಮದ್ ರೋಷನ್ ತಿಳಿಸಿದರು.
ಪ್ರಮುಖ ವಿಡಿಯೋ ಗಳು
1)PS_127_ಬಸವ ವಸತಿ ಯೋಜನೆ ಯಲ್ಲಿ ಉಚಿತವಾಗಿ ಹೊಸ ಮನೆ ನಿರ್ಮಿಸಿಕೊಳ್ಳಿ ।।BASAVA VASATI YOJANE||
2)PS_148_ಮನೆಯಲ್ಲಿ ಕುಳಿತು ತಿಂಗಳಿಗೆ 10,000 ರಿಂದ 25000 ಗಳಿಸಿ SBI ನೀಡುತ್ತಿದೆ ಉದ್ಯೋಗಾವಕಾಶ || SBI OUTLET ||
3)PS_147_ಕರ್ನಾಟಕ ರಾಜ್ಯದಲ್ಲಿ "ಗ್ರಾಮ ಕಾಯಕ ಮಿತ್ರ " ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.।।GRAMA KAYAKA MITRA ||
4)PS_141_ಮನೆಯಲ್ಲೇ ಅಥವಾ ಸ್ವ ಉದ್ಯೋಗ ಮಾಡಿ ಅದೇ ಫೋಟೋ ಶಾಪ್ ಉದ್ಯೋಗ ।। PHOTO SHOP UDYOG ||