Free Bus Pass : ಎಪ್ರಿಲ್‌ 1 ರಿಂದ ದುಡಿಯೋ ಹೆಣ್ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ ಪಾಸ್‌ !

ಎಪ್ರಿಲ್‌ 1 ರಿಂದ ದುಡಿಯೋ ಹೆಣ್ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ ಪಾಸ್‌ !

ಈ ಬಾರಿಯ ಬಜೆಟ್ ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಗುಡ್ ನ್ಯೂಸ್ ಗಳು ಸಿಕ್ಕಿದ್ದು, ಉಚಿತ ಬಸ್ ಪಾಸ್ ಯೋಜನೆ ಘೋಷಣೆ ಮಾಡಲಾಗಿದೆ. 'ವಿದ್ಯಾವಾಹಿನಿ' ಯೋಜನೆಯಡಿ 350 ಕೋಟಿ ರೂ. ವೆಚ್ಚದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಇದರಿಂದ 8 ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ಇನ್ನೊಂದು ಕಡೆ, ರಾಜ್ಯದ ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೂ ಉಚಿತ ಬಸ್ ಸೌಕರ್ಯ ಸಿಗಲಿದೆ. 30 ಲಕ್ಷ ಮಹಿಳೆಯರಿಗೆ ನೆರವಾಗಲಿರುವ ಈ ಯೋಜನೆಗೆ ಬಜೆಟ್ ನಲ್ಲಿ 1 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. 

ಈ ಮೊದಲು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಾತ್ರ ಪಾಸ್ ನೀಡಲಾಗುತ್ತಿತ್ತು. ಈಗ ಸಂಘಟಿತ ವಲಯದವರಿಗೂ ವಿಸ್ತರಿದೆ. ಇನ್ನೂ ವಿಶೇಷ ಚೇತನರು ಸ್ವತಂತ್ರವಾಗಿ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಹಾಗೂ ಸ್ವಾವಲಂಭಿ ಜೀವನ ನಡೆಸಲು ಅನುಕೂಲವಾಗುವಂತೆ 'ಸ್ವ ಚೇತನ' ಯೋಜನೆಯಡಿ 5 ಸಾವಿರ ಅರ್ಹ ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 50 ಕೋಟಿ ರೂ. ವೆಚ್ಚದಲ್ಲಿ ನೀಡಲು ಸರ್ಕಾರ ನಿರ್ಧರಿಸಲಿದೆ.

ಉಚಿತ ಬಸ್ ಪಾಸ್ ಸೌಕರ್ಯ 



ದುಡಿಯುವ ಹೆಣ್ಣು ಮಕ್ಕಳಿಗೆ, ಶಾಲಾ ವಿದ್ಯರ್ಥಿನಿಯರಿಗೆ ಏಪ್ರಿಲ್ ೧ ರಿಂದ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು. 

       ಮಂಗಳವಾರ ವಿಧಾನಸೌಧದ ಎದುರು ಕೆ ಎಸ್ ಆರ್ ಟಿ ಸಿ 50 ವೋಲ್ವೋ ಮಲ್ಟಿ ಆಕ್ಸೆಲ್ ಬಿ ಎಸ್ 4-9600 ಸ್ಲೀಪರ್ ಬಸ್ ಗಳ ಪೈಕಿ 15 'ಅಂಬಾರಿ ಉತ್ಸವ' ಬಸ್ ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
        ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭನೆ ಸಾಧಿಸಬೇಕು ಎಂಬ ಉದ್ದೇಶದಿಂದ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್   ರೂಪಿಸಲಾಗಿದೆ.ಹಾಗೆಯೇ ಪ್ರತಿ ತಾಲೂಕಿನಲ್ಲಿ ಕನಿಷ್ಠ ಐದು ಬಸ್ ಸಂಚಾರ ಆರಂಭ ಮಾಡಬೇಕು. ಅಗತ್ಯ ಬಿದ್ದರೆ ಇನ್ನಷ್ಟು ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ವೋಲ್ವೋ ಅಂಬಾರಿ ಸ್ಲೀಪರ್ ನ ಬಸ್ ಲೋಕಾರ್ಪನೆ ದೂರ ಪ್ರಯಾಣಕ್ಕೆ ಅಗತ್ಯವಿರುವ ರೈಲ್ವೆ ಮಾದರಿಗಿಂತ ಉತ್ತಮ ವ್ಯವಸ್ಥೆ ಹೊಂದಿದೆ ಎಂದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು