ಕರ್ನಾಟಕ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ವಿದ್ಯಾಥಿವೇತನ .....ಇಂದೇ ಅರ್ಜಿ ಸಲ್ಲಿಸಿ 3 ವರ್ಷದ ವರೆಗೆ ರೂ. ಸಾವಿರ ಸ್ಕಾಲರ್ಶಿಪ್ :
ಡಿಬಿಎಸ್ ಬ್ಯಾಂಕ್ ಸ್ಕಾಲರ್ಶಿಪ್ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಬ್ ಇನ್ಸ್ಪೆಕ್ಟರ್ ಮತ್ತು ಅವರಿಗಿಂತ ಕೆಳಗಿನ ಶ್ರೇಣಿಗಳಲ್ಲಿನ ಸಿಬ್ಬಂದಿಗಳ ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸುವುದನ್ನು ಬೆಂಬಲಿಸಲು ಡಿಬಿಎಸ್ ಬ್ಯಾಂಕ್ ಪ್ರತಿ ವರ್ಷ ಈ ವಿದ್ಯಾರ್ಥಿವೇತನವನ್ನು ನೀಡುತ್ತಿದೆ.
ಈ ವಿದ್ಯಾರ್ಥಿವೇತನಕ್ಕೆ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪುದುಚೇರಿ ರಾಜ್ಯಗಳಲ್ಲಿ ನೆಲೆಸಿರುವ ಪೊಲೀಸ್ ಸಿಬ್ಬಂದಿಯ ಮಕ್ಕಳು ಅರ್ಜಿ ಸಲ್ಲಿಸಬಹುದು. ಪ್ರಸ್ತುತ 9 ಮತ್ತು 10 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಫೆಬ್ರವರಿ 28, 2023 ಕೊನೆಯ ದಿನಾಂಕವಾಗಿದೆ.
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
☆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಪೊಲೀಸ್ ಸಿಬ್ಬಂದಿಯ ಮಕ್ಕಳಾಗಿರಬೇಕು.
☆ ಸಬ್ ಇನ್ಸ್ಪೆಕ್ಟರ್ ಮತ್ತು ಕೆಳಗಿನ ಸಿಬ್ಬಂದಿಯ ಮಕ್ಕಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
☆ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪುದುಚೇರಿಯಲ್ಲಿ ನೆಲೆಸಿರಬೇಕು.
☆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಪ್ರಸ್ತುತ ೯ ಮತ್ತು 10 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
❋ ಕಳೆದ ಸಾಲಿನ ಅಂಕಪಟ್ಟಿ
❋ ಆಧಾರ್ ಕಾರ್ಡ್ ಪ್ರತಿ
❋ ಮಕ್ಕಳ ಪೋಷಕರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಉದ್ಯೋಗ ಗುರುತಿನ ಚೀಟಿ.
❋ ಪ್ರಸ್ತುತ ವರ್ಷದ ಪ್ರವೇಶ ಪ್ರತಿ (ಶುಲ್ಕ ರಶೀದಿ, ಪ್ರವೇಶ ಪತ್ರ, ವಿದ್ಯಾರ್ಥಿಯ ಶಾಲಾ ಗುರುತಿನ ಪತ್ರ, ಇತ್ಯಾದಿ)
❋ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಬ್ಯಾಂಕ್ ಡಿಟೇಲ್ಸ್ ಅಥವಾ ಪೋಷಕರ ಬ್ಯಾಂಕ್ ಡೀಟೇಲ್ಸ್
❋ ವಿದ್ಯಾರ್ಥಿಯ ಫೋಟೋ
Tags
Scholarship