ಅಗ್ನಿಪಥ ಯೋಜನೆಯಡಿ ಅಗ್ನಿವಿರರ ನೇಮಕಾತಿ - ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
ಕರ್ನಾಟಕ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ವಿದ್ಯಾಥಿವೇತನ .....ಇಂದೇ ಅರ್ಜಿ ಸಲ್ಲಿಸಿ 3 ವರ್ಷದ ವರೆಗೆ ರೂ. ಸಾವಿರ ಸ್ಕಾಲರ್ಶಿಪ್ :
ಏಪ್ರಿಲ್ ನಲ್ಲಿ ಸೇನಾ ನೇಮಕ ರ್ಯಾಲಿ
ಭಾರತೀಯ ಸೇನೆಯು ಅಗ್ನಿಪಥ ಯೋಜನೆಯಡಿ ಅಗ್ನಿಪಥ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದೆ. ಮಂಗಳೂರು ಸೇನಾ ನೇಮಕ ಕಚೇರಿ ಇದೀಗ ಅಧಿಸೂಚನೆ ಪ್ರಕಟಿಸಿದ್ದು, ಗುರುವಾರದಿಂದಲೇ ಆನ್ ಲೈನ್ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಾರ್ಚ್ 15 ನೋಂದಣಿಗೆ ಕೊನೆಯ ದಿನಾಂಕವಾಗಿರುತ್ತದೆ. ಏಪ್ರಿಲ್ ೧೭ ರಿಂದ ಸೇನಾ ರ್ಯಾಲಿ ನಡೆಯಲಿದೆ.
ಮಂಗಳೂರು ಸೇನಾ ಕಚೇರಿ ವ್ಯಾಪ್ತಿಯಲ್ಲಿ ನಡೆಯುವ ನೇಮಕ ಪ್ರಕ್ರಿಯೆಯಲ್ಲಿ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು. ಈ ಜಿಲ್ಲೆಗಳ ಅಭ್ಯರ್ಥಿಗಳು ಮಾತ್ರ ರ್ಯಾಲಿಗೆ ನೋಂದಾಯಿಸಬಹುದಾಗಿದೆ. ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಆನ್ ಲೈನ್ ಪರೀಕ್ಷೆ ನಡೆಸಿ ನೂತನ ನೇಮಕ ರ್ಯಾಲಿ ಕೈಗೊಳ್ಳಾಗುತ್ತದೆ ಎಂದು ಸೇನೆಯು ಅಧಿಸೂಚನೆಯಲ್ಲಿ ತಿಳಿಸಿದೆ. ಜನರಲ್ ಡ್ಯೂಟಿ, ಟೆಕ್ನಿಕಲ್ , ಕ್ಲರ್ಕ್ ಸ್ಟೋರ್, ಕೀಪರ್ ಟೆಕ್ನಿಕಲ್ ಹಾಗೂ ಟ್ರೇಡ್ಸ್ ಮನ್ ವಿಭಾಗದಲ್ಲಿ ಅಗ್ನಿಪಥ ನೇಮಕಾತಿ ನಡೆಯಲಿದೆ.
ಅರ್ಹತೆಗಳು
ಜನರಲ್ ಡ್ಯೂಟಿ ವಿಭಾಗದ ಅಗ್ನಿಪಥ ಹುದ್ದೆಗಳಿಗೆ ಹೆಸರು ನೋಂದಾಯಿಸುವ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ ಶೇಕಡಾ ೪೫ ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು. ಲಘು ಮೋಟಾರ್ ವಾಹನ ಚಲನ ಪರವಾನಗಿ ಹೊಂದಿರಬೇಕು. ಟೆಕ್ನಿಕಲ್ ವಿಭಾಗದ ಅಗ್ನಿಪಥದ ಹುದ್ದೆಗಳನ್ನು ಬಯಸುವ ಅಭ್ಯರ್ಥಿಗಳು ವಿಜ್ಞಾನದಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಟ ಶೇಕಡಾ 50% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಪಾಸಾಗಿರಬೇಕು. ಕ್ಲರ್ಕ್ / ಸ್ಟಾರ್, ಕೀಪರ್/ಟೆಕ್ನಿಕಲ್ ವಿಭಾಗದ ಅಗ್ನಿಪಥದ ಹುದ್ದೆಗೂ ದ್ವಿತೀಯ ಪಿಯುಸಿ (ಕಲೆ, ವಾಣಿಜ್ಯ ಅಥವಾ ವಿಜ್ಞಾನ )ವಿದ್ಯಾರ್ಹತೆ ಇರುವವರು ಹೆಸರು ನೋಂದಾಯಿಸಬಹುದು. ಅಭ್ಯರ್ಥಿಗಳು ಕನಿಷ್ಟ ಶೇಕಡೆ 40%ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಪಾಸಾಗಿರಬೇಕು. ಟ್ರೇಡ್ಸ್ ಮನ್ ವಿಭಾಗದಲ್ಲಿನ ಅಗ್ನಿವಿರರ ಹುದ್ದೆಗಳನ್ನು ಬಯಸುವ ಅಭ್ಯರ್ಥಿಗಳು ೮ ನೇ ತರಗತಿ ತೇರ್ಗಡೆ ಅಥವಾ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು. ಆದರೆ ಪ್ರತಿ ವಿಷಯದಲ್ಲಿಯೂ ಕನಿಷ್ಟ ಶೇ 33 ಅಂಕಗಳೊಂದಿಗೆ ತೇರ್ಗಡೆಯಾಗಿರುವುದು ಕಡ್ಡಾಯ.
ವಯೋಮಿತಿ
ಅಭ್ಯರ್ಥಿಗಳ ಕನಿಷ್ಟ ವಯಸ್ಸು 17 ವರ್ಷ ಹಾಗೂ 6 ತಿಂಗಳು, ಗರಿಷ್ಟ 28 ವರ್ಷ, ಅಂದರೆ ಅಭ್ಯರ್ಥಿಗಳು 2002 ರ ಅಕ್ಟೊಬರ್ 1 ಮತ್ತು 2004 ರ ಏಪ್ರಿಲ್ 1 ರ ನಡುವೆ ಜನಿಸಿರಬೇಕು.
ದೈಹಿಕ ಅರ್ಹತೆ
ಜನರಲ್ ಡ್ಯೂಟಿ ಮತ್ತು ಟ್ರೇಡ್ಸ್ ಮನ್ ವಿಭಾಗದಲ್ಲಿನ ಹುದ್ದೆಗಳಿಗೆ ನೋಂದಾಯಿಸುವ ಅಭ್ಯರ್ಥಿಗಳು 166 ಸೇಂ. ಮೀ ಎತ್ತರ ಟೆಕ್ನಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು 165 ಸೇಂ.ಮೀ. ಹಾಗೂ ಕ್ಲರ್ಕ್/ಸ್ಟಾರ್, ಕೀಪರ್/ಟೆಕ್ನಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು 162 ಸೇಂ.ಮೀ. ಎತ್ತರ ಹೊಂದಿರಬೇಕು. ಈ ಅಭ್ಯರ್ಥಿಗಳ ಎದೆಯಳತೆ 72 ಸೇಂ.ಮೀ ಇರಬೇಕು.
Tags
Govt JOB