ಅಪ್ರೆಂಟಿಸ್ ಶಿಪ್ ಯೋಜನೆಯಡಿ 47 ಲಕ್ಷ ಯುವಕರಿಗೆ ಸ್ಟೈಫಂಡ್ ನೆರವು !
2023-24 ನೇ ಬಜೆಟ್ ಮಂಡಿಸಿದ ಸಚಿವ ನಿರ್ಮಲಾ ಸೀತಾರಾಮನ್, 'ಪ್ಯಾನ್-ಇಂಡಿಯಾ ನ್ಯಾಷನಲ್ ಅಪ್ರೆಂಟಿಸ್ ಶಿಪ್ ಪ್ರಮೋಷನ್ ಸ್ಕೀಮ್' ಅಡಿಯಲ್ಲಿ 3 ವರ್ಷಗಳಲ್ಲಿ 47 ಲಕ್ಷ ಯುವಕರಿಗೆ ಸ್ಟೈಫಂಡ್ ಬೆಂಬಲವನ್ನು ಒದಗಿಸುವುದಾಗಿ ಘೋಷಿಸಿದರು.
ದೇಶದ ಯುವಜನತೆಗೆ ಅರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಾಗೂ ಅವರ ಕನಸುಗಳನ್ನು ನನಸಾಗಿಸುವ ಮೂಲಕ 'ಅಮೃತ ಪೀಳಿಗೆ' ಸೃಷ್ಟಿಸಲು ಅಪ್ರೆಂಟಿಸ್ ಶಿಪ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಾಗಿದೆ.
ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ 4.0 ಯೋಜನೆಯಡಿ ಮುಂದಿನ ಮೂರೂ ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯ, ಉದ್ಯೋಗ, ಉದ್ಯಮ, ಪಾಲುದಾರಿಕೆ ಕುರಿತ ವಿವಿಧ ತರಬೇತಿಯನ್ನು ನೀಡಲಾಗುವುದು. ಕೋರ್ಸ್ ಗಳ ಜೊತೆಗೆ ಕೌಶಲ್ಯ ಮೂಡಿಸಲಾಗುವುದು.
ಈ ಯೋಜನೆಯಡಿ ಕೋಡಿಂಗ್, ರೊಬೊಟಿಕ್ಸ್, ಮೆಕಾಟ್ರಾನಿಕ್ಸ್, ಇಓಟಿ, ೩ಡಿ ಪ್ರಿಂಟಿಂಗ್, ಡ್ರೋನ್ ಗಳು ಮತ್ತು ಮೃದು ಕೌಶಲ್ಯಗಳಂತಹ ಕೋರ್ಸಗಳನ್ನು ಜಾರಿಗೆ ತರಲಾಗುವುದು ಎಂದು ಸೀತಾರಾಮನ್ ತಿಳಿಸಿದರು.
ರಾಷ್ಟೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಇದರಿಂದ ಕೌಶಲ್ಯ, ಆರ್ಥಿಕತೆ, ವ್ಯಾಪಾರ, ಅವಕಾಶಗಳ ಕುರಿತು ಮಾಹಿತಿ ಒದಗಿಸುವುದರಿಂದ ಯುವಜನತೆಗೆ ಉದ್ಯೋಗ ಸೃಷ್ಟಿಸಲು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.