PM ಕಿಸಾನ್ 13ನೇ ಕಂತು: ಬೆಳಗಾವಿಯಲ್ಲಿ ನಡೆಯಲಿರುವ ಪ್ರಧಾನಿ ಮೋದಿಯಯವರ ಕಾರ್ಯಕ್ರಮದಲ್ಲಿ PM ಕಿಸಾನ್ 13ನೇ ಕಂತು ಬಿಡುಗಡೆ!!!!!!!!!!!
ಪಿಎಂ ಕಿಸಾನ್ ಎಂದರೇನು?
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ರೈತರ ಆರ್ಥಿಕ ಸಂಕಷ್ಟಗಳನ್ನು ದೂರ ಮಾಡುವ ವೇದಿಕೆಯಾಗಿದೆ. ಪಿಎಂ ಕಿಸಾನ್ ಅಡಿಯಲ್ಲಿ, ಪಿಎಂ ಕಿಸಾನ್ ಯೋಜನೆಯ ಮೂಲಕ ರೈತರಿಗೆ ಸಹಾಯ ಮಾಡಲು ಸ್ವಲ್ಪ ಹಣವನ್ನು ನೀಡಲಾಗುತ್ತದೆ. ಈ ಮೊತ್ತದ 6000 ರೂಗಳನ್ನು ರೈತರ ಜೀವನೋಪಾಯಕ್ಕಾಗಿ ನೀಡಲಾಗುತ್ತದೆ. ಯೋಜನೆಯ ಹಣವನ್ನು ರೈತರ ಖಾತೆಗೆ ನೇರವಾಗಿ ಕಳುಹಿಸುವುದರಿಂದ ಯಾವುದೇ ಮಧ್ಯವರ್ತಿಯು ಪಿಎಂ ಕಿಸಾನ್ ಯೋಜನೆಯ ಹಣವನ್ನು ತಿನ್ನುವುದಿಲ್ಲ.
ಇದುವರೆಗೆ ರೂ 24,000 ಮೊತ್ತವು 12ಕಂತುಗಳ ಅಡಿಯಲ್ಲಿ ರೈತರ ಖಾತೆಗಳನ್ನು ತಲುಪಿದೆ. ಪಿಎಂ ಕಿಸಾನ್ 13ನೇ ಕಂತಿನ ಬಿಡುಗಡೆ ದಿನಾಂಕ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಪಟ್ಟಿ ಮಾಡಲಾದ ಪ್ರತಿಯೊಬ್ಬ ರೈತನು ಇದನ್ನು ತಿಳಿದುಕೊಳ್ಳಬೇಕು. ಪ್ರತಿ 4 ತಿಂಗಳ ನಂತರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೂಪಾಯಿ ಮೊತ್ತವು ಹೋಗುತ್ತದೆ.
ನೀವು ಇನ್ನೂ EKYC ಮಾಡಿಲ್ಲದಿದ್ದರೆ, ಸಾಧ್ಯವಾದಷ್ಟು ಬೇಗ KYC ಅನ್ನು ಮಾಡಬೇಕು. ಏಕೆಂದರೆ ಸರ್ಕಾರದ ಹೊಸ ನಿಯಮಗಳ ಪ್ರಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಇ-ಕೆವೈಸಿ ಮಡಿದ ರೈತರ ಖಾತೆಗೆ ಮಾತ್ರ ನಾಲ್ಕನೇ ಕಂತು ಬರುತ್ತದೆ.
ಪಿಎಂ ಕಿಸಾನ್ ಯೋಜನೆಯಡಿ ವರ್ಷದ ಮೊದಲ ಕಂತನ್ನು ಏಪ್ರಿಲ್ ಒಂದರಿಂದ ಜುಲೈ 31ರವರೆಗೆ ರೈತರಿಗೆ ನೀಡಲಾಗುತ್ತದೆ. ಮತ್ತು ಎರಡನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 31 ರವರೆಗೆ ನೀಡಲಾಗುತ್ತದೆ. ಅದೇ ಸಮಯದಲ್ಲಿ ಮೂರನೇ ಕಂತಿನ ಹಣವನ್ನು ಡಿಸೇಂಬರ್ ೧ ಮತ್ತು ಮಾರ್ಚ್ 31ರ ನಡುವೆ ವರ್ಗಾಯಿಸಲಾಗುತ್ತದೆ. ಇದರ ಪ್ರಕಾರ ಪಿಎಂ ಕಿಸಾನ್ 12ನೇ ಕಂತು ಅಕ್ಟೊಬರ್ 17ರಂದು ರೈತರ ಖಾತೆಗೆ ಬಂದಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ ವರ್ಗಾವಣೆಯಾಗಲಿದೆ. ಅಕ್ಟೊಬರ್ 17ರಂದು ಪೂಸಾದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ರೈತರ ಖಾತೆಗೆ ಯೋಜನೆಯ 12ನೇ ಕಂತು ಬಿಡುಗಡೆ ಮಾಡಿದ್ದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ 2000 ರೂ ಸಹಾಯಧನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಅಂತೆಯೇ ಈಗಾಗಲೇ 12 ಕಂತುಗಳಲ್ಲಿ ರೈತರು ಹಣವನ್ನು ಪಡೆಡಿದ್ದಾರೆ.
ಇನ್ನು13ನೇ ಕಂತು ಫೆಬ್ರುವರಿ 27ರಂದು ಪ್ರಧಾನಿ ಮೋದಿಯವರಿಂದ ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಿಎಂ ಕಿಸಾನ್ 13ನೇ ಕಂತಿನ ಬಿಡುಗಡೆ ನಿಮ್ಮ ಖಾತೆಗೆ ಬರಲಿದೆ ಎಂದು ಕೃಷಿ ಸಚಿವಾಲಯದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಈ ಯೋಜನೆಯಂತೆ ವಾರ್ಷಿಕ 6000 ರೂಗಳನ್ನು ರೈತರ ಖಾತೆಗೆ ಕೇಂದ್ರ ನೇರವಾಗಿ ಜಮೆ ಮಾಡುತ್ತದೆ. ಇದರಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ಇದರ ನೆರವನ್ನು ಪಡೆಯುತ್ತಿದ್ದಾರೆ. ಮೂರೂ ಕಂತುಗಳಲ್ಲಿ ತಲಾ ಎರಡು ಸಾವಿರ ರೂಗಳಂತೆ ವಾರ್ಷಿಕ ನಗದನ್ನು ನೀಡಲಾಗುತ್ತದೆ. ಈ ಬರಿ ಅಕ್ಟೊಬರ್ 17ರಂದು ರೈತರ ಖಾತೆಗೆ ನೇರವಾಗಿ 2000 ರೂ ಹಣ ಬಂದಿದೆ.