ಫೋನ್ ಪೇ, ಪೇಟಿಎಂ ಈಗ ಸಿಂಗಾಪುರಕ್ಕೂ ಮಾಡಿ

ಫೋನ್ ಪೇ, ಪೇಟಿಎಂ ಈಗ ಸಿಂಗಾಪುರಕ್ಕೂ ಮಾಡಿ


 

ಮೊದಲ ಬಾರಿ ಗಡಿಯಾಚೆಗೂ ಯುಪಿಐ ವಿಸ್ತರಣೆ :

          7 ವರ್ಷಗಳ ಹಿಂದೆ ದೇಶದಲ್ಲಿ ಆರಂಭವಾಗಿ ಇದೀಗ ಭರ್ಜರಿ ಯಶಸ್ಸು ಕಂಡಿರುವ ಮೊಬೈಲ್ ಮೂಲಕ ತತ್ ಕ್ಷಣದ ಹಣ ಪಾವತಿ ವ್ಯವಸ್ಥೆಯಾದ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಇದೀಗ ಗಡಿಯಾಚೆಗೂ ಕಾಲಿಟ್ಟಿದೆ. ಭಾರತ ಮತ್ತು ಸಿಂಗಾಪುರ ನಡುವೆ ಯುಪಿಐ ಮೂಲಕ ಹಣಕಾಸು ವರ್ಗಾವಣೆ ಅವಕಾಶ ನೀಡುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಲ್ಲಿ ಚಾಲನೆ ನೀಡಿದರು. 
              

ಇದರಿಂದ ಭಾರತದಲ್ಲಿನ ಯುಪಿಐ App ಗಳಾದ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ ನಂತಹ App ಗಳ ಮೂಲಕ ಸಿಂಗಪುರಕ್ಕೆ ಕ್ಷಣಾರ್ಧದಲ್ಲಿ ಹಣ ರವಾನಿಸಬಹುದಾಗಿದೆ ಹಾಗೂ ಅಲ್ಲಿಂದ ಹಣ ಸ್ವೀಕರಿಸಬಹುದಾಗಿದೆ. ಈ ಮೂಲಕ ಮೊದಲ ಬಾರಿ ಯುಪಿಐ ವ್ಯವಹಾರ ವಿದೇಶಕ್ಕೆ ವಿಸ್ತರಣೆಯಾಗಿದೆ. 


     ಈ ವಹಿವಾಟಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಭಾರತದಲ್ಲಿ 2022ರಲ್ಲಿ 74 ಶತಕೋಟಿ ಯುಪಿಐ ವಹಿವಾಟು ನಡೆದಿದ್ದು, ಇದರ ಒಟ್ಟಾರೆ ಮೌಲ್ಯ 126 ಲಕ್ಷ ಕೋತಿ ರೂ ಗಳಾಗಿದೆ. ಅನೇಕ ತಜ್ಞರು ಶೀಘ್ರದಲ್ಲೇ ನಗದು ವಹಿವಾಟನ್ನು ಯುಪಿಐ ಮೀರಿಸಲಿದೆ ಎಂದು ಅಂದಾಜಿಸಿದ್ದಾರೆ. ಈಗ ಸಿಂಗಾಪುರದೊಡನೆ ಯುಪಿಐ ವ್ಯವಹಾರ ಆರಂಭವಾಗಲಿದ್ದು, ಇದೊಂದು ಮೈಲಿಗಲ್ಲು. ಇದರಿಂದ ಉಭಯ ದೇಶಗಳ ಜನರು, ಅದರಲ್ಲೂ ವಿಶೇಷವಾಗಿ ಸಿಂಗಾಪುರದಲ್ಲಿನ ಭಾರತೀಯ ಸಂಜಾತರು ನಿರಾಂತಕವಾಗಿ ಸುರಕ್ಷಿತ ವಿಧಾನ ಬಳಸಿ ಹಣದ ವ್ಯವಹಾರ ನಡೆಸಬಹುದು. ಭಾರತವು ಇದೇ ಮೊದಲ ಬಾರಿ ಇಂಥ ಪರ್ಸನ್ ಟು ಪರ್ಸನ್ (ಪಿ೨ಪಿ) ಪೇಮೆಂಟ್ ಆರಂಭಿಸುತ್ತಿದೆ' ಎಂದರು.

ಸಿಂಗಾಪುರ ಜತೆ ಯುಪಿಐ ವ್ಯವಹಾರ ಹೇಗೆ?

ಬಳಕೆದಾರರು ತಮ್ಮ ಯುಪಿಐ App ಬಳಸಿ ಸಿಂಗಾಪುರದಿಂದ ಭಾರತಕ್ಕೆ ಹಾಗೂ ಭಾರತದಿಂದ  ಸಿಂಗಪುರಕ್ಕೆ ಹಣ ವರ್ಗಾಯಿಸಬಹುದು. 


          ಮೊಬೈಲ್ ನಂಬರ್, ಯುಪಿಐ ಐಡಿ ಅಥವಾ ವರ್ಚುವಲ್ ಪಾವತಿ ವಿಳಾಸ (ವಿಪಿಎ) ಬಳಸಿ ಹಣ ವರ್ಗಾಯಿಸಬಹುದು. ಮೊದಲಿಗೆ ಎಸ್.ಬಿ.ಐ ಇಂಡಿಯನ್ ಓವರ್ ಸಿಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರು ಹಣ ಕಳಿಸಬಹುದು ಹಾಗೂ ಪಡೆಯಲೂಬಹುದು. ಎಕ್ಸಿಸ್ ಬ್ಯಾಂಕ್ ಹಾಗೂ ಡಿಬಿಎಸ್ ಇಂಡಿಯಾ ಖಾತೆಗಳಲ್ಲಿ ಸಿಂಗಾಪುರದಿಂದ ಹಣ ಪಡೆಯಬಹುದು. 
ಸಿಂಗಾಪುರದಲ್ಲಿನ ಬಳಕೆದಾರರಿಗೆ ಈ ಸೇವೆಯು ಡಿಬಿಎಸ್ ಸಿಂಗಾಪುರ ಹಾಗೂ ಲಿಕ್ವಿಡ್ ಗ್ರೂಪ್ ಎಂಬ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಈ ಸೇವೆ ಲಭ್ಯವಿರುತ್ತದೆ. ಕಾಲಕ್ರಮೇಣ ಹೆಚ್ಚಿನ ಬ್ಯಾಂಕ್ ಗಳನ್ನು ಲಿಂಕ್ 
ಮಾಡಾಲಾಗುತ್ತದೆ.


        ಆರಂಭದಲ್ಲಿ  ಭಾರತೀಯ ಬಳಕೆದಾರರು ಒಂದು ದಿನದಲ್ಲಿ ರೂ 60,000 ವರೆಗೆ (ಸಿಂಗಾಪುರ ಕರೆನ್ಸಿ ಮೌಲ್ಯ ಸುಮಾರು 1,000) ರವಾನೆ ಮಾಡಬಹುದು. ವಹಿವಾಟು ಮಾಡುವ ಸಮಯದಲ್ಲಿ, ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ಹಾಗೂ ಸಿಂಗಾಪುರ ಕರೆನ್ಸಿಗಳಲ್ಲೆರಡರಲ್ಲೂ App ನಲ್ಲಿ ಲೆಕ್ಕಾಚಾರ ಸಿಗುತ್ತದೆ.


ಏನಿದರ ಲಾಭ ?

✔ ಈ ವರೆಗೆ ಭಾರತದೊಳಗೆ ಮಾತ್ರ ಯುಪಿಐ ಮೂಲಕ ಹಣ ಕಳಿಸಬಹುದಿತ್ತು.

✔ ಇನ್ನುಮುಂದೆ ಸಿಂಗಪುರಕ್ಕೆ ಹಾಗೂ ಅಲ್ಲಿಂದ ಭಾರತಕ್ಕೆ ಹಣ ಕಳಿಸಬಹುದು.

✔ ಸಿಂಗಪುರದ ಭಾರತೀಯರು ಬ್ಯಾಂಕ್ ಮೂಲಕ ತವರಿಗೆ ಹಣ ಕಲಿಸುತ್ತಿದ್ದರು. 

✔ ಒಟ್ಟು ಮೊತ್ತಕ್ಕೆ 10% ಸೇವಾ ಶುಲ್ಕ ಕಟ್ಟುತ್ತಿದ್ದರು. ತಕ್ಷಣ ಹಣ ವರ್ಗ ಆಗುತ್ತಿರಲಿಲ್ಲ.

✔ ಯುಪಿಐ ನಿಂದಾಗಿ ಸೇವಾ ಶುಲ್ಕ ಕಡಿತವಾಗಲಿದೆ. ತಕ್ಷಣವೇ ಹಣ ವರ್ಗ ಆಗಲಿದೆ.
















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು