ಏಪ್ರಿಲ್.1 ರಿಂದ UPI ವಹಿವಾಟಿಗೆ ಹೆಚ್ಚುವರಿ ಶುಲ್ಕ.

 ಏಪ್ರಿಲ್.1 ರಿಂದ UPI ವಹಿವಾಟಿಗೆ ಹೆಚ್ಚುವರಿ ಶುಲ್ಕ.


ಕರ್ನಾಟಕ ವಿಧಾನಸಭೆ ಚುನಾವಣೆ 2023 :

UPI ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಏಪ್ರಿಲ್ 1 ರಿಂದ ಯುಪಿಐ ಅಪ್ಲಿಕೇಶನ್ ಗಳಲ್ಲಿ ನಡೆಸುವ ರೂ. 2 ಸಾವಿರಕ್ಕಿಂತ ಮೇಲಿನ ಎಲ್ಲಾ ವಹಿವಾಟುಗಳ ಮೇಲೆ ಗರಿಷ್ಠ 11. ಪ್ರತಿಶತ ಇಂಟರ್ ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಎಂದು ಸರ್ಕಾರ ಹೇಳಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಪ್ ಇಂಡಿಯಾ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಅದರಂತೆ, ವ್ಯಾಪಾರಿ ವಹಿವಾಟಿನ ಮೇಲೆ ಶುಲ್ಕ ವಿಧಿಸಲಾಗುತ್ತದೆ.

RBI Guidelines for UPI Transaction Charges

ಏಪ್ರಿಲ್ 1 ರಿಂದ ಯುಪಿಐ ವಹಿವಾಟುಗಳಿಗೆ ಬಳಸುವ ಪ್ರಿಪೇಯ್ಡ್ ವ್ಯಾಲೆಟ್ ಗಳಿಗೆ ಇಂಟರ್ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಪ್ ಇಂಡಿಯಾ ಹೇಳಿದೆ. ವಹಿವಾಟು ಮೊತ್ತ 2,000 ರೂ. ಗಿಂತ ಹೆಚ್ಚಿದ್ದರೆ, ಶೇ. 1.1 ರಷ್ಟು ಶುಲ್ಕ ವಿಧಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.


ಟೆಲಿಕಾಂ, ಶಿಕ್ಷಣ, ಮತ್ತು ಯುಟಿಲಿಟೀಸ್/ ಪೋಸ್ಟ್ ಅಫೀಸ್ ಗಳಿಗೆ ಇಂಟರ್ ಚೇಂಜ್ ಶುಲ್ಕವು ಶೇ. 0.7 ಆಗಿದ್ದರೆ, ಸೂಪರ್ ಮಾರ್ಕೆಟ್ ಗಳಿಗೆ ಶುಲ್ಕವು ವಹಿವಾಟಿನ ಮೌಲ್ಯದ ಶೇ.೦.೯ ಆಗಿದೆ.  ವಿಮೆ,ಸರ್ಕಾರ, ಮ್ಯೂಚವಲ್ ಫಂಡ್ ಗಳು ಮತ್ತು ರೈಲ್ವೇಗಳಿಗೆ ಶೇ. 1 ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಇಂಧನಕ್ಕಾಗಿ ಶೇ. 0.5 ಮತ್ತು ಕೃಷಿಗೆ ಶೇ.0.7 ರಷ್ಟು ಶುಲ್ಕ ವಿಧಿಸಲಾಗುತ್ತದೆ.

ಯುಪಿಐ ವಹಿವಾಟುಗಳಿಗೆ ಬಳಸುವ ಪ್ರಿಪೆಯ್ಡ್ ಪಾವತಿ ಉಪಕರಣ (ಪಿಪಿಐ) ಗಳಿಗೆ ಇಂಟರ್ ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಎನ್ ಪಿ ಸಿ ಐ ಹೇಳಿದೆ. ವಹಿವಾಟು 2000 ರೂ. ಗಿಂತ ಹೆಚ್ಚಿದ್ದರೆ, ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಪೇಮೆಂಟ್ಸ್ ಕಾರ್ಪೊರೇಷನ್ ಸ್ಪಷ್ಟಪಡಿಸಿದೆ.

ವಿವಿಧ ವರ್ಗದ ವ್ಯಾಪಾರಿಗಳಿಗೆ ವಿನಿಮಯ ಶುಲ್ಕ ( ಇಂಟರ್ ಚೇಂಜ್ ಫೀ ) ಭಿನ್ನವಾಗಿದ್ದು, ಶೇ. 0.5 ರಿಂದ ಶೇ. 1.1 ರವರೆಗೆ ಇರಲಿದೆ. ನಿರ್ಧಿಷ್ಟ ವರ್ಗಗಳಲ್ಲಿ ಮಿತಿ ಸಹ ಅನ್ವಯಿಸುತ್ತದೆ ಎಂದು ಎನ್ ಪಿ ಸಿ ಐ ವಿವರ ನೀಡಿದೆ.

ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ ಈ ಶುಲ್ಕವು ಪ್ರಿಪೆಯ್ಡ್ ಪಾವತಿ ಸಾಧನಗಳ ಮೂಲಕ ಮಾಡಿದ ವ್ಯಾಪಾರೀ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಎನ್ ಪಿ ಸಿ ಐ ತಿಳಿಸಿದ್ದು, ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ, ಸಾಮಾನ್ಯ ಯುಪಿಐ ಪಾವತಿಗಳ ಮೇಲೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅದೇ ರೀತಿ ಜನರು ವ್ಯಾಪಾರಿಗಳಿಗೆ ಪಾವತಿಸುವ ಹಣಕ್ಕೂ ಯಾವುದೇ ಶುಲ್ಕ ಇರುವುದಿಲ್ಲ.


ಈ ಹೊಸ ಶುಲ್ಕಗಳು ಇದೆ ಬರುವ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಪೀರ್ ಟು ಪೀರ್ ( ಪಿ೨ಪಿ) ಮತ್ತು ಪೀರ್ ಟು ಪೀರ್ ಮರ್ಚೆಂಟ್ (ಪಿ೨ಪಿಎಂ) ವಹಿವಾಟುಗಳ ಸಂದರ್ಭದಲ್ಲಿ ಇಂಟರ್ ಚೇಂಜ್ ಶುಲ್ಕ  ಅನ್ವಯಿಸಲಾಗುವುದಿಲ್ಲ.ಪಿಪಿಪಿ ವಿತರಕರು 2000 ಗಿಂತ ಹೆಚ್ಚಿನ ವಹಿವಾಟುಗಳಿಗೆ ವಾಲೆಟ್ ಲೋಡಿಂಗ್ ಶುಲ್ಕವಾಗಿ ರವಾನೆ ಮಾಡುವ ಬ್ಯಾಂಕ್ ಗೆ ೧೫ ಮೂಲ ಅಂಶಗಳಷ್ಟು (ಬಿಪಿಎಸ್) ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಸರಳವಾಗಿ ಹೇಳಬೇಕೆಂದರೆ ಯಾವುದೇ ಗ್ರಾಹಕರು ಬ್ಯಾಂಕ್ ಖಾತೆಯಿಂದ 2000 ರೂ. ಗಿಂತ ಹೆಚ್ಚಿನ ಮೊತ್ತವನ್ನು ವ್ಯಾಲೆಟ್ ಗೆ ವರ್ಗಾಯಿಸಿದರೆ ಆಗ ಈ ವ್ಯಾಲೆಟ್ ನಿರ್ವಹಿಸುವ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಮೊದಲಾದ ಸಂಸ್ಥೆಗಳು ಬ್ಯಾಂಕ್ ಗಳಿಗೆ ಸಣ್ಣ ಮೊತ್ತವನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

ಸೆಪ್ಟೆಂಬರ್ 30, 2023 ರಂದು ಅಥವಾ ಅದಕ್ಕೂ ಮೊದಲು ಈ ಶುಲ್ಕಗಳನ್ನುಪರಿಶೀಲಿಸಬೇಕಾಗುತ್ತದೆ ಎಂದು ಎನ್ ಪಿ ಸಿ ಐ ಹೇಳಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿ ಹಣಕಾಸು ಸಚಿವಾಲಯವು ಯುಪಿಏ ಡಿಜಿಟಲ್ ಸಾರ್ವಜನಿಕ ಸರಕು ಆಗಿದ್ದು, ಇದರ ಮೂಲಕ ಮಾಡಿದ ವಹಿವಾಟುಗಳ ಮೇಲೆ ಯಾವುದೇ ಶುಲ್ಕವನ್ನು ವಿಧಿಸುವುದನ್ನು ಪರಿಗಣಿಸುತ್ತಿಲ ಎಂದು ಹೇಳಿತ್ತು.


UPI ಸಾರ್ವಜನಿಕರಿಗೆ ಅಪಾರ ಅನುಕೂಲತೆ ಮತ್ತು ಆರ್ಥಿಕತೆಗೆ ಉತ್ಪಾದಕತೆಯ ಲಾಭಗಳೊಂದಿಗೆ ಡಿಜಿಟಲ್ ಸಾರ್ವಜನಿಕ ಉತ್ಪನ್ನವಾಗಿದೆ.ಯುಪಿಐ ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲು ಸರ್ಕಾರ ಚಿಂತನೆ ನಡೆಸುತ್ತಿಲ್ಲ. ಸೇವಾ ಪೂರೈಕೆದಾರರ ವೆಚ್ಚ್ ವಸೂಲಿಯ ಕಳವಳವನ್ನು ಬೇರೆ ವಿಧಾನಗಳ ಮೂಲಕ ಪೂರೈಸಬೇಕಾಗಿದೆ. ಎಂದು ಸಚಿವಾಲಯ ಟ್ವೀಟ್ ಮಾಡಿತ್ತು.


ನಿಧಿ ವರ್ಗಾವಣೆ ವ್ಯವಸ್ಥೆಯಾಗಿ ಯುಪಿಐ ಐಎಂಪಿಎಸ್ ( ತಕ್ಷಣದ ಪಾವತಿ ಸೇವೆ ) ಯಂತಿದೆ ಎಂದು ಆರ್ ಬಿ ಐ ಹೇಳಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿತ್ತು. ಯುಪಿಐ ನಲ್ಲಿನ ಶುಲ್ಕಗಳು ಐಎಂಪಿಎಸ್ ನಿಧಿ ವರ್ಗಾವಣೆಯ ಮೇಲೆ ವಿಧಿಸುವ ಶುಲ್ಕಗಳಿಗೆ ಹೋಲುತ್ತವೆ ಎಂದು ಆರ್ ಬಿ ಐ ಹೇಳಿತ್ತು. 



ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@










ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು