ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಅಧಿಕಾರಿ:

ತಂದೆಯ ಕೆಲಸದ ಸ್ಫೂರ್ತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಪಡೆದ ಈ ಅಧಿಕಾರಿ...........



     ತಮಿಳು ನಾಡಿನಲ್ಲಿ ಹುಟ್ಟಿದರು ತಂದೆ ಸೇನೆಯಲ್ಲಿ ಇದ್ದಿದ್ದರಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಬೇರೆ ಬೇರೆ ಊರಿನಲ್ಲಿ ಆಯಿತು. ತಂದೆಯೊಂದಿಗೆ ನಾವೂ ಊರೂರು ಸುತ್ತುತ್ತಿದ್ದರಿಂದ ಎಲ್ಲ ಕಡೆ ಶಿಕ್ಷಣ ಪಡೆಯುವಂತಾಯಿತು. ಆದರೆ ಪೂರ್ತಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕೇಂದ್ರೀಯ ವಿದ್ಯಾಲಯದಲ್ಲೇ ಪೂರ್ಣಗೊಳಿಸಲಾಯಿತು. NTI ನಾಗ್ಪುರದಲ್ಲಿ ಬಿಟೆಕ್ ಕಂಪ್ಯೂಟರ್ ಸೈನ್ಸ್ ಮುಗಿಸಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ.

ಖಾಸಗಿ ಕಂಪನಿಯಲ್ಲಿ ಇದ್ದಾಗಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭವಾಗಿತ್ತು. ಪ್ರಾರಂಭದಲ್ಲಿ ಕೆಲಸ ಮಾಡಿಕೊಂಡು ಜೊತೆ ಜೊತೆಗೆ ಓದುವುದು ಕಷ್ಟ ಎನಿಸುತ್ತಿತ್ತು. 10 ನೇ ತರಗತಿಯಲ್ಲಿದ್ದಾಗ ನಾಗರೀಕ ಸೇವೆ ಪರೀಕ್ಷೆ ಬರೆಯಬೇಕು. ಎನ್ನುವ ಕನಸು ಇತ್ತಾದರೂ ಕನಸಿಗೆ ನೀರೆರೆದದ್ದು ಪದವಿ ಮುಗಿದ ಮೇಲೆಯೇ ಸಮಯವನ್ನು ಓದಿಗೆ ಮೀಸಲಿಡುತ್ತಿದ್ದೆ. ಆದರೂ ಕಷ್ಟ ಎನಿಸಿದಾಗ ಕಂಪನಿಯಿಂದ ಒಂದು ವರ್ಷದ ರಜೆ ತೆಗೆದುಕೊಂಡು ಸಂಪೂರ್ಣ ಸಮಯ ಓದಲು ಪ್ರಾರಂಭಿಸಿದೆ.

ಪರೀಕ್ಷೆ ತಯಾರಿ ಮಾಡಿದ ಅನುಭವ :

ಮೊದಲ ಪ್ರಯತ್ನ :

2014 ರಲ್ಲಿ ಮೊದಲು UPSC ಪರೀಕ್ಷೆ ಎದುರಿಸಿದೆ. ಮೊದಲ ಪ್ರಯತ್ನದಲ್ಲಿ 10  ಅಂಕ ಕಡಿಮೆ ಇದ್ದಿದ್ದರಿಂದ ಲಿಸ್ಟ್ ನಲ್ಲಿ ನನ್ನ ಹೆಸರು ಇರಲಿಲ್ಲ. ನಂತರ ರ್ಯಾಂಕ್ ಬೇಸ್ ನಲ್ಲಿ ರೈಲ್ವೆ ಟ್ರಾಫಿಕ್ ಸರ್ವಿಸ್ ನಲ್ಲಿ ಕೆಲಸ ಪಡೆದರು. ಕೆಲಸದೊಂದಿಗೆ ಓದು ಮುಂದುವರಿಸಿ ಮತ್ತೆ ಎದುರಿಸಿದಾಗ 2018 ರಲ್ಲಿ ಐಎಎಸ್ ತೇರ್ಗಡೆಯಾದೆ. ಕೋಚಿಂಗ್ ನೋಡ್ನಿಗೆ ನಮ್ಮ ಓದೂ ಇರುತ್ತಿತ್ತು. ಸಿಲಬಸ್ ಏನಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು ಬೇಸಿಕ್ ನಿಂದ ಓದಲು ಪ್ರಾರಂಭಿಸಿದ್ದರು.


ತರಬೇತಿ ಅಗತ್ಯವೇ? 

ಕೆಲವರು ಕೋಚಿಂಗ್ ಬೇಡ ಎಂದು ಹಿಂದೆ ಸರಿಯುವುದೂ ಇದೆ. ನನ್ನ ಪ್ರಕಾರ ತರಬೇತಿ ಅಗತ್ಯ. ಯಾವುದನ್ನೂ ಎಷ್ಟು ಸ್ಸಮಯದಲ್ಲಿ ಓದಬೇಕು?, ಹೇಗೆ ಓದಬೇಕು? ಎನ್ನುವುದನ್ನೆಲ್ಲ ತಿಳಿಸಲು ಒಳ್ಳೆಯ ಶಿಕ್ಷಕರ ಮಾರ್ಗದರ್ಶನ ಖಂಡಿತ ಅಗತ್ಯ. ಕರೋನ ನಂತರ ಆನ್ಲೈನ್ ಮೂಲಕವೇ ಎಲ್ಲ ಸೌಲಭ್ಯ ಸಿಗುತ್ತಿರುವುದರಿಂದ ಈಗ ಇನ್ಸ್ಟಿಟ್ಯೂಟ್ ಗಳಿಗೆ ಅಳೆಯುವ ಅಗತ್ಯತೆ ಇರುವುದಿಲ್ಲ. ಓದನ್ನು ಸೀಮಿತಗೊಳಿಸಿಕೊಳ್ಳಬಾರದು. ಪರೀಕ್ಷೆ ಸಮಯದಲ್ಲಿ ಯಾವ ಪ್ರಶ್ನೆ ಬೇಕಾದರೂ ಬರುವ ಸಾಧ್ಯತೆ ಇರುವುದರಿಂದ ನಮ್ಮ ಕವರೇಜ್ ಜಾಸ್ತಿ ಇರಬೇಕು. ಓದುವಾಗಲೇ ಬೇರೆ ಬೇರೆ ಆಯಾಮಗಳಲ್ಲಿ ಯೋಚಿಸಬೇಕು.

ರಾತ್ರಿಯಿಂದ ಬೆಳಗಿನವರೆಗೆ ಓದು:

ಇಷ್ಟು ಓದಿದರೂ ಯಾವತ್ತೂ ನನಗೆ ಹೊರೆ ಎನಿಸಲಿಲ್ಲ. ಕಾರಣ ನಾನು ಪ್ರತಿಯೊಂದನ್ನು ಇಷ್ಟ ಪಟ್ಟು ಓದುತ್ತಿದ್ದೆ. ಗುರಿಯನ್ನು ಬೆನ್ನಟ್ಟುವಗ ಇದ್ಯಾವುದೂ ಗಣನೆಗೆ ಬರುವುದಿಲ್ಲ. ಪ್ರಾರಂಭದಲ್ಲಿ ಕೆಲಸ ಮಾಡುತ್ತಲೇ ಓದುತ್ತಿದ್ದಾಗ ಪೂರ್ತಿ ರಾತ್ರಿ ಓದುತ್ತಿದ್ದರು. ನಂತರ ಕೆಲಸ ಬಿಟ್ಟು ಸಂಪೂರ್ಣ ಸಮಯವನ್ನು ಓದಿಗೆ ಮೀಸಲಿಟ್ಟರು. ದಿನಕ್ಕೆ ಕನಿಷ್ಠ 12 ರಿಂದ 14 ಗಂಟೆ ಓದು ಅವರದ್ದಾಗಿತ್ತು.

ಉತ್ತಮ ವೇದಿಕೆ :

ತಂದೆ ಆರ್ಮಿಯಲ್ಲಿ ಇದ್ದಿದ್ದರಿಂದ ಸರ್ಕಾರೀ ಸೇವೆಯಲ್ಲಿರುವವರು ಜನರ ಸೇವೆಯನ್ನು ಹೇಗೆ ಮಾಡಬಹುದು ಎಂಬ ಅರಿವು ಹೊಂದಿದ್ದರು. ಜನರನ್ನು ಹತ್ತಿರದಿಂದ ತಿಳಿದುಕೊಳ್ಳಲು ಸಿವಿಲ್ ಸರ್ವಿಸ್ ಒಂದು ಉತ್ತಮ ವೇದಿಕೆ ಎನ್ನುವುದು ಅವರಿಗೆ ಮನದಟ್ಟಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಏನಾಗುತ್ತದೆ ಎಂದು ಹೇಳುವುದು ಕಷ್ಟ. ಎಷ್ಟೇ ಕಷ್ಟ ಪಟ್ಟು ಓದಿದರೂ ಒಮ್ಮೊಮ್ಮೆ ಅವಕಾಶಗಳು ಸಿಗದೇ ಇರಬಹುದು. ಆದ್ದರಿಂದ ಒಂದು ಬ್ಯಾಕ್ ಅಪ್ ಪ್ಲಾನ್ ಇದ್ದರೆ ನಂತರ ಪ್ರಯತ್ನ ಮಾಡಬಹುದು ಎಂಬ ಕಾರಣದಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಅನುಭವ ಪಡೆದರು.

ಸಮಯ ಸದ್ಬಳಕೆಯಾಗಲಿ :

ಸ್ಪರ್ಧಾತ್ಮಕ ಪರೀಕ್ಷೆ ಎನ್ನುವುದಲ್ಲ. ಪರೀಕ್ಷೆ ಯಾವುದೇ ಇರಲಿ ಪ್ರಾರಂಭದಲ್ಲೇ ಓದಲು ತೊಡಗಬೇಕು. ಒಂದು ನಿರ್ದಿಷ್ಟ ಗುರಿಯೊಂದಿಗೆ ಓದು ಮುಂದುವರಿಸಬೇಕು. ವಿಷಯವನ್ನು ಅರ್ಥ ಮಾಡಿಕೊಳ್ಳದೆ ಓದಿದರೆ ಎಷ್ಟು ಓದಿದರೂ ವ್ಯರ್ಥ. ಯಾವ ಹಂತದಲ್ಲಿ ಓದು ಮುಗಿಸಬೇಕು? ಯಾವುದನ್ನೂ ನೋಟ್ಸ್ ಮಾಡಿಕೊಳ್ಳಬೇಕು? ಯಾವುದಕ್ಕೆ ಕೋಚಿಂಗ್ ಪಡೆಯಬೇಕು? ಎಂಬ ಜ್ಞಾನ ನಮಗಿರಬೇಕು. ಮಾಡೋಣ, ನೋಡೋಣ, ಬಂದರೆ ಬರಲಿ, ಇಲ್ಲದಿದ್ದರೆ ಇಲ್ಲ. ಇಂತಹ ದ್ವಂದ್ವ ಮನಸ್ಸಿನಲ್ಲಿ ಇದ್ದರೆ ಯಾವುದೂ ಪರಿಪೂರ್ಣ ಎನಿಸುವುದಿಲ್ಲ. ಒಂದು ಹಂತದಲ್ಲಿ ಓದು ಮುಗಿಸಿ ಪರೀಕ್ಷೆ ಎದುರಿಸಬಲ್ಲೆ ಎಂಬ ಆತ್ಮ ವಿಶ್ವಾಸ  ಬಂದ ಮೇಲಷ್ಟೇ ಓದಲು ಪ್ರಾರಂಭಿಸಿ. ಪ್ರಶ್ನೆ ಪತ್ರಿಕೆ ಅಷ್ಟೇ ಅಲ್ಲದೆ ಸೀನಿಯರ್ ಗಳು ಬರೆದ ಉತ್ತರ ಪತ್ರಿಕೆಗಳನ್ನು ನೋಡಬೇಕು. ಆಗ ಪರೀಕ್ಷೆ ಹೇಗೆ ಎದುರಿಸಬಹುದು ಎಂಬ ಐಡಿಯಾ ಬರುತ್ತದೆ.


ಸಂದರ್ಶನ ಅಲ್ಲ ವ್ಯಕ್ತಿತ್ವ ಪರೀಕ್ಷೆ:

 ಇದನ್ನು ಹೇಳಿ, ಅದನ್ನು ಹೇಳಿ ಎಂದು ಪುಸ್ತಕದಲ್ಲಿನ ಪ್ರಶ್ನೆಗಳನ್ನು ಕೇಳುವುದು ತೀರಾ ಕಡಿಮೆ. ಸಿವಿಲ್ ಸರ್ವಿಸ್ ಅಂದರೆ ನಾಗರೀಕ ಸೇವೆ. ಅದರ ಸುತ್ತ ಪ್ರಶ್ನೆಗಳು ಇರಲಿವೆ. ಅದು ಬಿಟ್ಟು ಪುಸ್ತಕದಲ್ಲಿನ ಪ್ರಶ್ನೆಗಳನ್ನು ಕೇಳುವುದು ತೀರಾ ಕಡಿಮೆ. ಇದೊಂದು ನಮ್ಮ ಆತ್ಮವಿಶ್ವಾಸ ಹೆಚ್ಚಿಸುವ ವ್ಯಕ್ತಿತ್ವ ಪರೀಕ್ಷೆಯೇ ಹೊರತು ಪರೀಕ್ಷೆಯಲ್ಲಿ ಬರೆದ ಪ್ರಶ್ನೆಗಳನ್ನೇ ಮತ್ತೆ ಕೇಳುವ ಸಂದರ್ಶನ ಅಲ್ಲ. ನಮ್ಮ ನೈತಿಕತೆ, ಎಥಿಕ್ಸ್ ಇವುಗಳನ್ನು ಪರೀಕ್ಷೆ ಮಾಡುವುದಷ್ಟೇ UPSC ಸಂದರ್ಶನದ ತಾತ್ಪರ್ಯ.

           ಜನರ ಸೇವೆ ಮಾಡುವ ಅವಕಾಶ ಎಲ್ಲರಿಗು ಸಿಗುವುದಿಲ್ಲ. ಆದರೆ ಸಿವಿಲ್ ಸರ್ವಿಸ್ ಸೆರಾ ಬಯಸುವವರಿಗೆ ಇದೊಂದು ಉತ್ತಮ ಅವಕಾಶ. ಇವರು ಇದನ್ನು ತಲೆಯಲ್ಲಿಟ್ಟುಕೊಂಡೇ ಈ ಕ್ಷೇತ್ರಕ್ಕೆ ಕಾಲಿಟ್ಟವರು. ಅಪ್ಪನ ಕೆಲಸ ನೋಡಿ ಸ್ಫೂರ್ತಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ ಮೊದಲ ಪ್ರಯತ್ನದಲ್ಲೇ ಯಶಸ್ಸು ಇವರ ಮುಡಿಗೇರಿತು. ಸದ್ಯ ಇವರು ಕೋಲಾರ್ ಜಿಲ್ಲಾ ಪಂಚಾಯತಿ CEO ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು