ಮೀನುಗಾರರಿಗೆ 10,000 ಮನೆ
ವಸತಿ ರಹಿತ ಮೀನುಗಾರರಿಗೆ ಈ ಸಾಲಿನಲ್ಲಿ ೧೦,೦೦೦ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಸೀಮೆ ಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲ್, ಡೀಸೆಲ್ ಆಧಾರಿತ ಮೋಟಾರ ಎಂಜಿನ್ ಅಳವಡಿಸಲು ಟಾಲಾ ೫೦,೦೦೦ ರೂ. ಸಬ್ಸಿಡಿ ನೀಡಲಾಗುವುದು. ಅದಕ್ಕಾಗಿ ಈ ಸಾಲಿನಲ್ಲಿ ೪೦ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಕೇಂದ್ರ ಸರ್ಕಾರದಿಂದ "ಮಹಿಳಾ ಸಮ್ಮಾನ್ ಯೋಜನೆ" ಜಾರಿ
ಈ ಪ್ರಕ್ರಿಯೆ ಪೂರ್ಣಗೊಳ್ಳುವ ಮುಂದಿನ ೨ ವರ್ಷಗಳ ಅವಧಿಗೆ ಸೀಮೆ ಎಣ್ಣೆ ಸಬ್ಸಿಡಿ ಮುಂದುವರೆಯಲಿದೆ. ಇನ್ನು ಮುಂದೆ ಡಿಬಿಟಿ ಮೂಲಕ ಸಹಾಯಧನ ಪಾವತಿ ಮಾಡಲಾಗುವುದು. ಮೀನುಗಾರರ ದೋಣಿಗಳಿಗೆ ರಿಯಾಯತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು ೧.೫ ಲಕ್ಷ ಲೀಟರ್ ನಿಂದ ೨ ಲಕ್ಷ ಲೀಟರ್ ಗೆ ಹೆಚ್ಚಿಸಲಾಗುವುದು.
ಉತ್ತರ ಕರ್ನಾಟಕ ಭಾಗದಲ್ಲೂ ಮೀನು ಕೃಷಿ ಉತ್ತೇಜಿಸಲು ಹಾವೇರಿ ಜಿಲ್ಲೆಯಲ್ಲಿ ಹೊಸದಾಗಿ ಮೀನು ಮರಿ ಉತ್ಪಾದನೆ ಕೇಂದ್ರ ಸ್ಥಾಪನೆ ಮಾಡಲಾಗುವುದು. ಬೈಂದೂರು ತಾಲೂಕಿನ ಕಂಬದಕೋಣೆಯಲ್ಲಿ 'ಸಿ ಫುಡ್ ಫಾರ್ಕ್ ' ಅನ್ನು ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ ಮಾಡಲಾಗುವುದು.