"ಮಹಿಳಾ ಸಮ್ಮಾನ್ ಯೋಜನೆ"
2 ಲಕ್ಷದ ಉಳಿತಾಯ ಖಾತೆ
ಶೇ 7.5 ಬಡ್ಡಿ!
ಕೇಂದ್ರ ಸರ್ಕಾರವು ಈ ಬಾರಿಯೂ 2023-24 ನೇ ಶಾಲಿನ ಬಜೆಟ್ ನಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ವಿಶೇಷ ಬಜೆಟ್ ವೊಂದನ್ನು ಪರಿಚಯಿಸಿದೆ.
ಈ ಬಾರಿಯೂ ಬಜೆಟ್ ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ ಆರಂಭಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದು, ಮಹಿಳೆಯರಿಗೆ ಇದೊಂದು ದೊಡ್ಡ ಕೊಡುಗೆಯಾಗಿದೆ.
ಮಹಿಳೆಯರು ಮತ್ತು ಮಕ್ಕಳಿಗಾಗಿ 2023-24 ನೇ ಶಾಲಿನ ಬಜೆಟ್ ನಲ್ಲಿ ದೊಡ್ಡ ಕೊಡುಗೆ ನೀಡಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ಪ್ರಾರಂಭಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇದರಲ್ಲಿ ಮಹಿಳೆಯರು 2 ಲಕ್ಷ ಉಳಿತಾಯ ಖಾತೆ ತೆರೆದು ಶೇ, 7.5 ಬಡ್ಡಿ ಪಡೆಯಬಹುದು. ಈ ಘೋಷಣೆಗೆ ಜನ ಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಹಿಳೆಯರ ಆರ್ಥಿಕತೆ ಸುಧಾರಿಸಲಿದೆ.
ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ. ಮಕ್ಕಳು ಮತ್ತು ಹದಿಹರೆಯದವರಿಗಾಗಿ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲಾಗುವುದು.
ಮಕ್ಕಳು ಮತ್ತು ಯುವಕರಿಗಾಗಿ ಡಿಜಿಟಲ್ ಲೇಬ್ರರಿಗಳನ್ನು ಸಿದ್ಧಪಡಿಸಲಾಗುವುದು. ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿ 81 ಲಕ್ಷ ಗ್ರಾಮೀಣ ಮಹಿಳೆಯರನ್ನು ಸ್ವಸಹಾಯ ಗುಂಪುಗಳಿಗೆ ಜೋಡಿಸಲಾಗಿದೆ.
ಸ್ವಸಹಾಯ ಗುಂಪನ್ನು ಆರ್ಥಿಕ ಅಭಿವೃದ್ಧಿಯ ಮುಂದಿನ ಹಂತಕ್ಕೆ ಕೊಂಡೊಯ್ಯಲು ಬೃಹತ್ ಉತ್ಪಾದನಾ ಉದ್ಯಮಗಳನ್ನು ರಚಿಸಲಾಗುವುದು ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದ್ದಾರೆ.
ಮಹಿಳಾ ಗೌರವಧನದ ಮೇಲೆ ಶೇ, 7.5 ರ ಬಡ್ಡಿ ದರವನ್ನು ಸರಕಾರ ನಿಗದಿಪಡಿಸಿದೆ. ಈ ಸಣ್ಣ ಉಳಿತಾಯ ಯೋಜನೆಯಲ್ಲಿ ಮಹಿಳೆ ಗರಿಷ್ಠ 2 ಲಕ್ಷ ರೂ, ಈ ರೀತಿಯಲ್ಲಿ ಅವರು 7.5ರ ದರದಲ್ಲಿ 15,000 ರೂಪಾಯಿಗಳ ಲಾಭವನ್ನು ಪಡೆಯುತ್ತಾರೆ.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರಾಷ್ಟೀಯ ಗ್ರಾಮೀಣ ಜೀವನೋಪಾಯ ಮಿಷನ್, ದೀನ್ ದಯಾಳ್ ಅಂತ್ಯೋದಯ ಯೋಜನೆ ಅಡಿಯಲ್ಲಿ ಗ್ರಾಮೀಣ ಮಹಿಳೆಯರೊಂದಿಗೆ 81 ಲಕ್ಷ ಸ್ವ-ಸಹಾಯ ಗುಂಪುಗಳನ್ನು ರಚಿಸಲಾಗಿದೆ.
ದೊಡ್ಡ ಪ್ರಮಾಣದ ಉತ್ಪಾದನಾ ಉದ್ಯಮಗಳು ಅಥವಾ ಸಾಮೂಹಿಕಗಳ ಮೂಲಕ ಸಬಲೀಕರಣದ ಮುಂದಿನ ಹಂತವನ್ನು ತಲುಪಲು ಈ ಗುಂಪುಗಳಿಗೆ ಸಹಾಯ ಮಾಡುವುದಾಗಿ ಹೇಳಲಾಗಿದೆ.
ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ
ಯೋಜನೆಯ ಪ್ರಯೋಜನಗಳು / ಲಾಭಗಳು :
⚛ ಮಹಿಳೆಯರ 2 ಲಕ್ಷ ಉಳಿತಾಯಕ್ಕೆ ಶೇ, 7.5 ಬಡ್ಡಿ ಸಿಗಲಿದೆ.
⚛ ದೇಶದ ಅನೇಕ ಮಹಿಳೆಯರು ಈಗ ಮಹಿಳಾ ಸಮ್ಮಾನ್ ಮೂಲಕ ಗಣನೀಯ ಉಳಿತಾಯ ಮಾಡಬಹುದು.
⚛ ಮಹಿಳೆಯರಿಗಾಗಿ ಇರುವ ಈ ವಿಶೇಷ ಯೋಜನೆಯಡಿ ಮಹಿಳೆಯರು ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ 2 ಲಕ್ಷ ರೂಪಾಯಿಯ ವರೆಗೆ ಹೂಡಿಕೆ ಮಾಡಬಹುದು.
⚛ ಬಡ್ಡಿಯನ್ನು 7.5% ಕ್ಕೆ ಪಾವತಿಸಲಾಗುವುದು. ಮತ್ತು ಯೋಜನೆಯು ಮಾರ್ಚ್ 2025 ರವರೆಗೆ ಅನ್ವಯಿಸುತ್ತದೆ.
⚛ ಈ ಯೋಜನೆಯ ಮೂಲಕ, ನೀವು 2 ವರ್ಷಗಳವರೆಗೆ ಉಳಿತಾಯ ಖಾತೆಯಲ್ಲಿ 2 ಲಕ್ಷದ ಠೇವಣಿ ಇರಿಸಬಹುದು ಮತ್ತು ಶೇಕಡಾ 7.5 ಬಡ್ಡಿಯನ್ನು ಪಡೆಯಬಹುದು.
⚛ ಈ ಯೋಜನೆಯನ್ನು 2 ವರ್ಷಗಳಲ್ಲಿ ಯಾವಾಗ ಬೇಕಾದರೂ ಹಿಂಪಡೆಯುವ ಸೌಲಭ್ಯವಿದೆ.