11ನೇ ವಯಸ್ಸಿನಲ್ಲೇ ಕೋಟ್ಯಾಧಿಪತಿಯಾದ ಬಾಲಕಿಯ ಜೀವನ ಶೈಲಿ, ತಿಂಗಳಿಗೆ 1.1 ಕೋಟಿ ರೂ. ಸಂಪಾದಿಸುತ್ತಿದ್ರೂ ನಿವೃತ್ತಿಯಾಗಲು ತೀರ್ಮಾನ!!!!!

11ನೇ ವಯಸ್ಸಿನಲ್ಲೇ ಕೋಟ್ಯಾಧಿಪತಿಯಾದ ಬಾಲಕಿಯ ಜೀವನ ಶೈಲಿ, ತಿಂಗಳಿಗೆ 1.1 ಕೋಟಿ ರೂ. ಸಂಪಾದಿಸುತ್ತಿದ್ರೂ ನಿವೃತ್ತಿಯಾಗಲು ತೀರ್ಮಾನ!!!!!




ಈಗಿನ ಕಾಲದಲ್ಲಿ ಕೋಟ್ಯಧಿಪತಿ ಆಗಲು ಬಹಳ ಕಷ್ಟಪಡಬೇಕಾಗುತ್ತದೆ, ಅಥವಾ ಪಿತ್ರಾರ್ಜಿತ ಆಸ್ತಿ ಹೊಂದಿರಬೇಕಾಗುತ್ತದೆ. ಆದರೆ ಆಸ್ಟ್ರೇಲಿಯಾದ 11 ವರ್ಷದ ಬಾಲಕಿ ಒಬ್ಬಳು ಇಂತಹ ಸಣ್ಣ ವಯಸ್ಸಿನಲ್ಲೇ ತನ್ನ ಸ್ವಂತ ದುಡಿಮೆಯಿಂದ ಕೋಟ್ಯಾಧಿಪತಿ ಆಗಿದ್ದಾಳೆ. 

       ಸುಮಾರು ಮೂರು ವರ್ಷಗಳಿಂದ ಆಸ್ಟ್ರೇಲಿಯಾದ ಪಿಕ್ಸಿ ಕರ್ಟಿಸ್ ತನ್ನದೇ ಸ್ವಂತ ವ್ಯಾಪಾರದಿಂದ ತಿಂಗಳಿಗೆ ಕೋಟಿ ಗಟ್ಟಲೆ ದುಡಿಯುತ್ತಿದ್ದರು, ಇದೀಗ ಈ ಪುಟ್ಟ ಬಾಲಕಿ ಸದ್ಯಕ್ಕೆ ತನ್ನ ವ್ಯಾಪಾರದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾಳೆ. ಹಾಗಾದರೆ ಇದೆಂತ ವ್ಯಾಪಾರ ಮಾಡುತ್ತಿದ್ದಳು ಈ ಪುಟ್ಟ ಬಾಲಕಿ ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ.......ಪಿಕ್ಸೀ ಕರ್ಟಿಸ್ ಸಂಪೂರ್ಣ ಮಾಹಿತಿ.


ಈ ವ್ಯಾಪಾರ ಇಷ್ಟೆಲ್ಲಾ ಲಾಭ ಮಾಡುತ್ತಿದ್ದರು, ಪಿಕ್ಸೀ ತನ್ನ ಶಿಕ್ಷಣದ ಮೇಲೆ ಕೇಂದ್ರೀಕರಿಸಲು ತಾತ್ಕಾಲಿಕ-ನಿವೃತ್ತಿ ಹೊಂದಲು ಬಯಸಿದ್ದರಂತೆ.

ವಿಶ್ವಕ್ಕೆ ಕೋರೋನಾ ಹೆಮ್ಮಾರಿ ಬಂದು ಲಾಕ್ ಡೌನ್ ಆದ ಬಳಿಕ PR ಗುರು ರಾಕ್ಸಿ ಜಾಸೆಂಕೊ ಅವರ ಮಗಳು ಪಿಕ್ಸೀ ತನ್ನದೇ ಆನಲೈನ್ ವ್ಯಾಪಾರ ಪ್ರಾರಂಭಿಸಿದಳು. ತನ್ನ ಆನ್ಲೈನ್ ಅಂಗಡಿಗೆ ಪಿಕ್ಸೀಸ್ ಬೋಸ್ ಎಂದು ಹೆಸರಿಟ್ಟಿದ್ದಾಳಂತೆ, ಈ ಅಂಗಡಿಯಲ್ಲಿ ತಾವೇ ಖುದ್ದು ತಯಾರಿಸಿದ ಆಟಿಕೆಗಳನ್ನು ಮಾರುತ್ತಿದ್ದಳು. ತಮ್ಮ ಕಷ್ಟದ ಪ್ರತಿಫಲವಾಗಿ ಈ ವ್ಯಾಪಾರ ಅವರನ್ನು ಇಂದು ಕೋಟ್ಯಾಧಿಪತಿಯನ್ನಾಗಿ ಮಾಡಿದೆ, ಹೌದು ಪಿಕ್ಸೀ ಅವರ ಫೈಡ್ನೆಟ್ ಸ್ಪಿನ್ನರ್ ವ್ಯಾಪಾರವು ಒಂದೇ ತಿಂಗಳಲ್ಲಿ 1.1 ಕೋಟಿ ಗಳಿಸಿತ್ತು ಎಂದು ವರದಿಗಳು ತಿಳಿಸಿವೆ.

ರಾಕ್ಸಿ news.com.au ಜೊತೆ ಮಾತನಾಡಿದಾಗ, "ಪಿಕ್ಸೀ ಹೈ ಸ್ಕೂಲ್ ಗೆ ಪ್ರವೇಶಿಸುತ್ತಿದಾಳೆ. ಹಾಗಾಗಿ ಆಕೆ ಇನ್ನು ಶಾಲೆಯ ಕಡೆ ಗಮನ ಹರಿಸಬೇಕಾಗುತ್ತದೆ. ಹಾಗಾಗಲಿ ತಾತ್ಕಾಲಿಕವಾಗಿ ಈ ವ್ಯಾಪಾರದಿಂದ ನಿವೃತ್ತಿ ಹೊಂದಲು ಬಯಸಿದ್ದಾಳೆ. ಕಳೆದ ಕೆಲವು ತಿಂಗಳಿಂದ ನಾವು ಕುಟುಂಬದವರೆಲ್ಲ ವ್ಯಾಪಾರದ ಕುರಿತು ಚರ್ಚೆ ಇದೆ, ಇದು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಅದ್ಭುತ ಪ್ರಯಾಣವಾಗಿದ್ದರು ಇದೀಗ ಪಿಕ್ಸೀ ತನ್ನ ಶಾಲೆಯ ಕಡೆ ಕೇಂದ್ರೀಕರಿಸಬೇಕಾಗಿದೆ.ಎಂದು ತಿಳಿಸಿದರು.......

ಈ ಹಿಂದೆ ಪಿಕ್ಸೀಯ ಯಶಸ್ಸು ನೋಡಿ ಅವಳು 15 ನೇ ವಯಸ್ಸಿನಲ್ಲಿ ಮಿಲಿಯನೇರ್ ಆಗಿ ನಿವೃತ್ತಿ ಹೊಂದುತ್ತಾಳೆ ಎಂದು ರಾಕ್ಸಿ ಹೇಳಿದ್ದರು. ಪಿಕ್ಸೀ ತನ್ನ 11ನೇ ಹುಟ್ಟುಹಬ್ಬದ ಪಾರ್ಟಿ ಸೇರಿದಂತೆ ಅವರ ಅದ್ದೂರಿ ಜೀವನ ಶೈಲಿ ಸಖತ್ ಫೇಮಸ್ ಆಗಿತ್ತು ತಮ್ಮ 11ನೇ ಹುಟ್ಟುಹಬ್ಬಕ್ಕೆ ಸುಮಾರು 23 ಲಕ್ಷ ರೂ ಖರ್ಚು ಮಾಡಿದ್ದಳು.


"ಪಿಕ್ಸೀಸ್ ಬೋಸ್ ಆನ್ಲೈನ್ ಸ್ಟೋರ್ ಉಳಿಯುತ್ತದೆ. ಇದು 2011ರಲ್ಲಿ ಪ್ರಾರಂಭವಾದ ಅಂಗಡಿ, ಆಗ ಮಕ್ಕಳ ಕೂದಲು ಪರಿಕರಗಳನ್ನು (Hair Clips) ಮಾರಾಟ ಮಾಡುತ್ತಿದ್ದರು, ಇದೀಗ ಪುನಃ ಮೊದಲಿನಂತೆ ಇದು ಕ್ಲಿಪ್ ಗಳನ್ನು ಮಾರಾಟ ಮಾಡುತ್ತದೆ. ನಾವು ಒಟ್ಟಿಗೆ ಇದನ್ನು ನಿರ್ವಹಿಸಬೇಕು" ಎಂದು ರಾಕ್ಸಿ ಹೇಳಿದ್ದಾರೆ.





















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು