ತನ್ನ ಗರ್ಲ್ ಫ್ರೆಂಡ್ ಗೆ ಖರ್ಚಿಲ್ಲದೆ ನೆಕ್ಲೆಸ್ ಗಿಫ್ಟ್ ಕೊಟ್ಟ ಹುಡುಗ

 ತನ್ನ ಗರ್ಲ್ ಫ್ರೆಂಡ್ ಗೆ ಖರ್ಚಿಲ್ಲದೆ ನೆಕ್ಲೆಸ್ ಗಿಫ್ಟ್ ಕೊಟ್ಟ ಹುಡುಗ 


ನಿಮ್ಮ ಸಂಗಾತಿಯನ್ನು ಖುಷಿಯಿಂದಿರಸಲು ಬರಿ ದುಡ್ಡು, ದುಬಾರಿ ಗಿಫ್ಟ್ ಗಳು ಮಾತ್ರ ಮುಖ್ಯ ಆಗಲ್ಲ. ಬದಲಾಗಿ ನಿಮ್ಮ ಕ್ರಿಯೇಟಿವ್ ಯೋಚನೆಗಳ ಮೂಲಕ ನಿಮ್ಮವರನ್ನು ಖುಷಿಯಾಗಿರಿಸಬಹುದು.


ಸಂಗಾತಿಗೆ ಡೈಮಂಡ್ ನೆಕ್ಲೆಸ್ ಗಿಫ್ಟ್ ಕೊಡಬೇಕು ಎಂದು ಸಾಕಷ್ಟು ಮಂದಿಗೆ ಕನಸಿರುತ್ತದೆ. ಆದರೆ, ಆ ಕನಸು ಸಕಾರಗೊಳ್ಳಲು ಅಷ್ಟೊಂದು ದುಡ್ಡು ಇಲ್ಲದಿರುವುದರಿಂದ, ಸಾಕಷ್ಟು ಕನಸುಗಳು ಕನಸಾಗಿಯೇ ಉಳಿಯುತ್ತವೆ. ಆದರೆ, ಇಲ್ಲೊಬ್ಬ ಒಂದು ರೂಪಾಯಿಯ ಖರ್ಚಿಲ್ಲದೆ,ತನ್ನ ಸಂಗಾತಿಗೆ ಆಕರ್ಷಕ ಹೊಳೆಯುವ ನೆಕ್ಲೆಸ್ ಒಂದನ್ನು ಗಿಫ್ಟ್ ಮಾಡಿದ್ದಾನೆ. ಅರೇ ......ಇದು ಹೇಗಪ್ಪಾ ಅನ್ಕೋತಿದೀರಾ ಈ ಸ್ಟೋರಿ ಓದಿ.

ನಿಮ್ಮ ಸಂಗಾತಿಯನ್ನು ಖುಷಿ ಪಡಿಸಲು ಬರೀ ದುಡ್ಡು, ದುಬಾರಿ ಗಿಫ್ಟ್ ಗಳು ಮಾತ್ರ ಮುಖ್ಯ ಅಲ್ಲ. ಬದಲಾಗಿ ನಿಮ್ಮ ಕ್ರಿಯೇಟಿವ್ ಯೋಚನೆಗಳ ಮೂಲಕ ನಿಮ್ಮವರನ್ನು ಖುಷಿಯಾಗಿರಿಸಬಹುದು. ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಜಾಂಗ್ ಎಂಬಾತ ತನ್ನ ಗೆಳತಿ ಬೆಳಕಿನ ಮೂಲಕ ಪ್ರತಿಬಿಂಬದಲ್ಲಿ ಕಾಣುವ ಸುಂದರ ವಿನ್ಯಾಸದ ನೆಕ್ಲೆಸ್ ಗಿಫ್ಟ್ ಮಾಡಿದ್ದೂ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಟ್ಟಿಗೆ ವೈರಲ್ ಆಗಿದೆ. ತನ್ನ ಸಂಗಾತಿಗೆ ಒಂದು ಪೆಟ್ಟಿಗೆಯಲ್ಲಿ ಬಿಳಿ ಕಾಗದದ ತುಂಡನ್ನು ಇತ್ತು ಉಡುಗೊರೆಯಾಗಿ ನೀಡಿದ್ದಾನೆ. ಇದಾದ ಬಳಿಕ ಆಕೆಯನ್ನು ಹೊರಗಡೆ ಸೂರ್ಯನ ಬೆಳಕಿಗೆ ಕರೆದುಕೊಂಡು ಹೋಗಿ ತಾನು ಕ್ರಿಯಾತ್ಮಕವಾಗಿ ವಿನ್ಯಾಸಗೊಳಿಸಿದ ಬೆಳಕಿನ ಹಾರವನ್ನು ಬಿಳಿ ಕಾಗದದ ಪ್ರತಿಬಿಂಬದ ಮೂಲಕ ಆಕೆಗೆ ತೊಡಿಸಿದ್ದಾನೆ.


ಈ ಸುಂದರ ಬೆಳಕಿನ ಪ್ರತಿಬಿಂಬಕದ ಹಾರವನ್ನು ಬಿಳಿ ಹಳೆಯ ಮೇಲೆ ವಿನ್ಯಾಸಗೊಳಿಸಲು ಎರಡು ದಿನಗಳನ್ನು ತೆಗೆದುಕೊಂಡಿದ್ದಾನೆ. ದೌಯಿನ್ ನಲ್ಲಿ ಜಾಂಗ್ ಅಪ್ ಲೋಡ್ ಮಡಿದ ನೆಕ್ಲೆಸ್ ನ ವಿಡಿಯೋವನ್ನು 62 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ. ಜೊತೆಗೆ 40,000 ಕ್ಕಿಂತಲೂ ಹೆಚ್ಚಿನ ಕಾಮೆಂಟ್ ಗಳನ್ನೂ ಕಾಣಬಹುದು. ಇಟ ಕಳೆದ ವರ್ಷ ತನ್ನ ಸ್ನೇಹಿತೆಗಾಗಿ ಕಾಗದ ಕೊರೆಯಚ್ಚು ಬಳಸಿ ಹಗುರವಾದ " ಡೈಮಂಡ್ ರಿಂಗ್" ನೀಡಿದ್ದರು ಎಂದು ತಿಳಿದು ಬಂದಿದೆ. 

















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು