ಹುಡುಗರಿಗೆ ಹೀಗೆ ಮದುವೆ ಆಮಂತ್ರಣ ಪತ್ರಿಕೆ ಕೊಟ್ರೆ ಕುಣಿದು ಕುಪ್ಪಳಿಸೋದು ಗ್ಯಾರಂಟಿ

 ಹುಡುಗರಿಗೆ ಹೀಗೆ ಮದುವೆ ಆಮಂತ್ರಣ ಪತ್ರಿಕೆ ಕೊಟ್ರೆ ಕುಣಿದು ಕುಪ್ಪಳಿಸೋದು ಗ್ಯಾರಂಟಿ 



ಈಗಿನ ಮದುವೆ ಇನ್ವಿಟೇಷನ್ ನಲ್ಲಿ ಮದುವೆಯ ಕರೆಯೋಲೆ ಜೊತೆಗೆ ಡ್ರೈ ಪ್ರುಟ್ಸ್ ಬಾಕ್ಸ್ ಗಳನ್ನು ಕೊಡುತ್ತಾರೆ. ಸಾಮಾನ್ಯವಾಗಿ ಈ ರೀತಿಯ ಇನ್ವಿಟೇಷನ್ ನಾವೆಲ್ಲರೂ ನೋಡಿರುತ್ತೇವೆ. ಆದರೆ, ಇಲ್ಲೊಂದು ಮದುವೆ ಆಮಂತ್ರಣ ಪತ್ರಿಕೆಯೊಂದಿಗೆ ವಿಸ್ಕಿ ಬಾಟಲಿಯನ್ನು ಕೊಟ್ಟಿದ್ದಾರೆ.

ಈಗಿನ ಮಾಡುವೆ ಇನ್ವಿಟೇಷನ್ ನಲ್ಲಿ ಮದುವೆ ಕರೆಯೋಲೆ ಜೊತೆಗೆ ಡ್ರೈ ಪ್ರುಟ್ಸ್ ಗಳ ಬಾಕ್ಸ್ ಗಳನ್ನು ಕೊಡುತ್ತಾರೆ. ಸಾಮಾನ್ಯವಾಗಿ ಈ ರೀತಿಯ ಇನ್ವಿಟೇಷನ್ ನಾವೆಲ್ಲರೂ ನೋಡಿರುತ್ತೇವೆ. ಆದರೆ, ಇಲ್ಲೊಂದು ಮದುವೆ ಆಮಂತ್ರಣ ಪತ್ರಿಕೆಯೊಂದಿಗೆ ವಿಸ್ಕಿ ಬಾಟಲಿಯನ್ನು ಕೊಟ್ಟಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಇಲ್ಲಿದೆ. ಮದುವೆಯ ಆಮಂತ್ರಣ ಪತ್ರ ನೀಡುವ ಮೂಲಕ ಮದುವೆಯ ಕರೆಯೋಲೆಯನ್ನು ಸ್ನೇಹಿತರು ಕುಟುಂಬದವರಿಗೆ ನೀಡಲಾಗುತ್ತದೆ. ಅದರಲ್ಲೂ ಘನತೆಗೆ ತಕ್ಕಂತಹ ಪತ್ರಿಕೆಗಳನ್ನು ಪ್ರಿಂಟ್ ಮಾಡಿಸುತ್ತಾರೆ. ಕೆಲವರು ಸಿಂಪಲ್ ಆಗಿ ಮದುವೆ ಪತ್ರಿಕೆಯನ್ನು ತಯಾರಿಸಿದರೆ, ಇನ್ನು ಕೆಲವರು ತುಂಬಾ ಅದ್ಧುರಿಯಾಗಿ ಮಾಡುವೆ ಕಾರ್ಡ್ ರೆಡಿ ಮಾಡಿಸುತ್ತಾರೆ. ಮದುವೆ ಕಾರ್ಡ್ ಗಳು ಹೊಸ ರೂಪಾಂತರಗಳು ಬರುತ್ತಲೇ ಇರುತ್ತವೆ. ಸಣ್ಣ ಬಾಕ್ಸ್ ನಲ್ಲಿಯೂ ವೆಡ್ಡಿಂಗ್ ಇನ್ವಿಟೇಷನ್ ನೀಡುತ್ತಾರೆ. ಅದೇ ಬಾಕ್ಸ್ ನಲ್ಲಿ ನೀಟಾಗಿ ಡ್ರೈ ಪ್ರುಟ್ಸ್ ಮತ್ತು ಡ್ರೈ ನಟ್ಸ್ ಗಳನ್ನಇಟ್ಟಿರುತ್ತಾರೆ. ಇನ್ನು ಕೆಲವರು ಅರಿಶಿನ ಕುಂಕುಮ ಕೂಡಾ ಅದರಲ್ಲಿಟ್ಟು ಕೊಡುತ್ತಾರೆ. ಆದರೆ, ಇಲ್ಲೊಂದು ಮದುವೆ ನೋಡಿದರೆ ಒಂದು ಕ್ಷಣ ತಬ್ಬಿಬ್ಬಾಗುವುದು ನಿಜ.

ಕರ್ನಾಟಕದಲ್ಲಿ Apple ಕಂಪನಿಯಲ್ಲಿ ಭಾರೀ ಉದ್ಯೋಗ ಅವಕಾಶ ಹಾಗೂ ದೇಶ್ಯಾದ್ಯಂತ ವಿವಿದೆಡೆ 19 ತಿಂಗಳಲ್ಲಿ 1 ಲಕ್ಷ ನೇರ ಉದ್ಯೋಗ ......!

ಹೌದು ಇನ್ಸ್ಟಾಗ್ರಾಮ್ ಮೀಮ್ ಪೇಜ್ ಒಂದರಲ್ಲಿ ಶೇರ್ ಆಗಿರುವ ಈ ವಿಡಿಯೋ ದಲ್ಲಿ ಮದುವೆಯ ಕರೆಯೋಲೆ ಪತ್ರಿಕೆಯ ಬಾಕ್ಸ್ ನಲ್ಲಿ ಮದುವೆಯ ಕರೆಯೋಲೆ ಹಾಗೂ ಡ್ರೈ ಪ್ರುಟ್ಸ್ ಇಡಲಾಗಿತ್ತು. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಅದೇ ಬಾಕ್ಸ್ ನಲ್ಲಿ ವಿಸ್ಕಿ ಬಾಟಲಿ ಕೂಡ ಇಡಲಾಗಿತ್ತು. ಮತ್ತು ಪ್ರೆಂಡ್ಸ್ ಗೆ ಟ್ಯಾಗ್ ಮಾಡುವ ಹಾಗೆ ಮಗ ನಿನ್ನ ಮದುವೆಗೂ ಹಿಂಗೇ ಇನ್ವಿಟೇಷನ್ ಕೊಡಬೇಕೆಂದು ತಮಾಷೆಯ ಕ್ಯಾಪ್ಷನ್ ಹಾಕಲಾಗಿದೆ. ಈ ರೀತಿಯ ಮಾಡುವೆ ಪತ್ರಿಕೆ ನೋಡಿ ನೆಟ್ಟಿಗರು ಒಂದು ಕ್ಷಣ ಶಾಕ್ ಆಗಿದ್ದರೆ. ಜೊತೆಗೆ ನನಗೂ ನನ್ನ ಸ್ನೇಹಿತ ಇದೆ ರೀತಿಯ ಮದುವೆ ಪತ್ರಿಕೆ ಕೊಡಲಿ ಎಂದು ತಮಾಷೆಗೆ ಕೇಳಿಕೊಂಡಿರುತ್ತಾರೆ.

ನಿನ್ನ ಮದುವೆಗೆ ಹಿಂಗೆ ಇನ್ವಿಟೇಷನ್ ಕೊಡ್ಬೇಕು ಮಗಾ....


ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋ 1 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಪಡ್ಡೆ ಹುಡುಗರ ಮನ ಗೆದ್ದಿದೆ. ಒಂದು ಕಡೆಯಿಂದ ಈ ವಿಡಿಯೋ ವನ್ನು ನೋಡಿದಾಗ ನಗು ಬರುತ್ತೆ. ಅದರಲ್ಲೂ ಈ ವಿಡಿಯೋಗೆ ಜನರು ತಮಾಷೆಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಇನ್ಸ್ಟಾಗ್ರಾಮ್ ಬಳಕೆದಾರರು ಕಾರ್ಡ್ ಬೇಡ, ಬಾಟಲ್ ಸಾಕು ಎಂದು ನಗುತ್ತ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ನಮ್ಮ ಮನೆಯಲ್ಲಿ ನಾಲ್ಕು ಜನ ಇದ್ದಾರೆ, ನನಗೆ ನಾಲ್ಕು ಈ ಇನ್ವಿಟೇಷನ್ ಕಾರ್ಡ ಕೊಡಿ ಎಂದು ಕಾಮೆಂಟ್ ಮಾಡಿದ್ದಾರೆ.


ವಿಡಿಯೋ ನೋಡಿ 




ವದು-ವರರ ಫೋಟೋ ತೆಗೆಯಲು ಹೋಗಿ ಚರಂಡಿಗೆ ಬಿದ್ದ ಮಹಿಳೆ















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು