ಕೇವಲ ಮಿಸ್ಡ್ ಕಾಲ್ ಕೊಟ್ಟರೆ ಸಾಕು ನಿಮ್ಮ ಪಿಎಫ್ ಬ್ಯಾಲೆನ್ಸ್ ತಿಳಿಯಬಹುದು !! ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ;

ಕೇವಲ ಮಿಸ್ಡ್ ಕಾಲ್ ಕೊಟ್ಟರೆ ಸಾಕು ನಿಮ್ಮ ಪಿಎಫ್ ಬ್ಯಾಲೆನ್ಸ್ ತಿಳಿಯಬಹುದು !! ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ;



ನಿಮ್ಮ್ ಇಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ತಿಳಿಯುವುದು ಈಗ ಬಹಳ ಸುಲಭ. ಇದಕ್ಕೆ ಹಲವು ವಿಧಾನಗಳು ಉಂಟು ಅದರಲ್ಲಿ ಮೊಬೈಲ್ ನಿಂದ ಮಿಸ್ಡ್ ಕಾಲ್ ಕೊಡುವ ಸೌಲಭ್ಯ ಬಹಳ ಜನಪ್ರಿಯ ಎನಿಸಿದೆ. ಇದರ ಸಂಪೂರ್ಣ ವಿವರ ತಿಳಿಯೋಣ ಈ ಲೇಖನದಲ್ಲಿ.

ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ತಿಳಿಯುವುದು ಹೀಗೆ:

UNA ಪೋರ್ಟಲ್ ನಲ್ಲಿ ನೋಂದಾಯಿಸಲಾದ EPF ಸದಸ್ಯರು ತಮ್ಮ ನೋಂದಾಯಿತ ಮೊಬೈಲ್ ನಂಬರ್ ನಿಂದ ಮಿಸ್ಡ್ ಕಾಲ್ ಕೊಟ್ಟರೆ ಪಿಎಫ್ ಬ್ಯಾಲೆನ್ಸ್ ತಿಳಿಯಬಹುದು. 9966044425 ಈ ನಂಬರ್ ಗೆ ಮಿಸ್ಡ್ ಕಾಲ್ ಕೊಟ್ಟರೆ ನಿಮ್ಮ ಈಗಿನ ಪಿಎಫ್ ಖಾತೆಯಲ್ಲಿರುವ ಹಣದ ಮೊತ್ತ ಎಷ್ಟೆಂದು ಗೊತ್ತಾಗುತ್ತದೆ. ನೀವು ಕೆಲಸ ಮಾಡುವ ಕಂಪನಿಯು ನಿಮ್ಮ ಯುಎಎನ್ ನಂಬರ್, ಆಧಾರ್ ನಂಬರ್ ಪಾನ್ ನಂಬರ್ ಬ್ಯಾಂಕ್ ಖಾತೆ ಇವುಗಳನ್ನು ನೋಂದಾಯಿಸಿರುವುದರಿಂದ ಈ ಸೌಲಭ್ಯ ಸಾಧ್ಯವಾಗುತ್ತದೆ.


Employmee Provident Fund :

       ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ EPF ಕೇಂದ್ರ ಸರ್ಕಾರದ ಇಪಿಎಫ್ ಓ ದಿಂದ ನಿರ್ವಹಿಸಲಾಗುತ್ತಿರುವ ಒಂದು ಪ್ರಮುಖ ಉಳಿತಾಯ ಯೋಜನೆ. ಉದ್ಯೋಗಿಗಳ ಜೀವನ ಭದ್ರತೆಗೆಂದು ರೂಪಿಸಲಾಗಿರುವ ಯೋಜನೆ ಇದು. ರೆಗ್ಯುಲರ್ ಎಂಪ್ಲಾಯೀ ಆಗಿ ನೇಮಕವಾದವರೆಲ್ಲರಿಗೂ ಸಾಮಾನ್ಯವಾಗಿ  ಯೋಜನೆ ಇದು. ಉದ್ಯೋಗಿಯ ಬೇಸಿಕ್ ಸಂಬಳ ಮತ್ತು ಭತ್ಯೆ ಮೊತ್ತದ ಶೇ. 12 ರಷ್ಟು ಹಣ ಆ ಉದ್ಯೋಗಿಯ ಇಪಿಎಫ್ ಖಾತೆಗೆ ಪ್ರತೀ ತಿಂಗಳೂ ಸಂದಾಯವಾಗುತ್ತಾ  ಹೋಗುತ್ತದೆ.ಈಗಂತೂ ಪ್ರತಿಯೊಬ್ಬ ಉದ್ಯೋಗಿಗೂ ಯುಎಎನ್ ನಂಬರ್ ಅಡಿಯಲ್ಲಿ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ನೀವು ಕಂಪನಿ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾದರೂ ಯುಎನ್ ಎ ನಂಬರ್ ಅದೇ ಇರುತ್ತದೆ. ವಿವಿಧ ಪಿಎಫ್ ಖಾತೆಗಳನ್ನು ವಿಲೀನಗೊಳಿಸಿ ಒಂದೇ ಖಾತೆಯಾಗಿ ಉಳಿಸಿಕೊಳ್ಳುವ ಅವಕಾಶವೂ ಇದೆ.

ಈ ರೀತಿಯಲ್ಲಿ EPF ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಬಹಳಷ್ಟು ಬದಲಾವಣೆಗಳನ್ನು ಮಾಡಿದೆ.  ಪಿಎಫ್ ಖಾತೆಯಲ್ಲಿರುವ ಹಣ ಎಷ್ಟಿದೆ ಎಂದು ತಿಳಿದುಕೊಳ್ಳಲು, ಹಣ ಹಿಂಪಡೆಯುವುದು, ಮುಂಗಡ ಪಡೆಯುವುದು ಇತ್ಯಾದಿ ಹಲವು ಸವಲತ್ತುಗಳಿವೆ. ಉಮಂಗ್ ಇತ್ಯಾದಿ ಆಪ್ ಗಳ ಮೂಲಕ ನಮ್ಮ ಪಿಎಫ್ ಖಾತೆಯ ಇಡೀ ವಿವರಗಳನ್ನು ನೋಡಬಹುದು, ವಿವಿಧ ಇಪಿಎಫ್ ಸೇವೆಗಳನ್ನು ಆನ್ಲೈನ್ ಮೂಲಕವೇ ಪಡೆಯಬಹುದು. 12 ಅಂಕಿಗಳ UAN ನಂಬರ್ ಅನ್ನು ಆಧಾರ್ ನಂಬರ್ ನ ಜೊತೆಗೆ ಜೋಡಿಸಿರುವುದರಿಂದ ಎಲ್ಲವೂ ಒಂದೇ ಪ್ಲಾಟಫಾರ್ಮ್ ನಲ್ಲಿ ಲಭ್ಯ ಇರುತ್ತದೆ. SMS ಮೂಲಕವೋ ಅಥವಾ ನೋಂದಾಯಿತ ಮೊಬೈಲ್ ಮೂಲಕವೋ ಮಿಸ್ಡ್ ಕಾಲ್ ಕೊಡುವ ಮೂಲಕ ಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಎಂದೂ ತಿಳಿದುಕೊಳ್ಳಬಹುದು.


ಯುಎಎನ್ ಪೋರ್ಟಲ್ ನಲ್ಲಿ ನೋಂದಾಯಿಸಿರಬೇಕು.

ಯುಎಎನ್ ಅಥವಾ ಯುನಿವರ್ಸಲ್ ಅಕೌಂಟ್ ನಂಬರ್ ನ ಡಿಡಿಕೇಟೆಡ್ ಪೋರ್ಟಲ್ ಇರುತ್ತದೆ. ಅಲ್ಲಿ ಹೋಗಿ ನಿಮ್ಮ ಯುಎಎನ್ ನಂಬರ್ ಗೆ ಮೊಬೈಲ್ ನಂಬರ್ ಅನ್ನು activate ಮಾಡಬೇಕು. 

ಪೋರ್ಟಲ್ ನಲ್ಲಿ ಕೆವೈಸಿ  ಸರಿಯಾಗಿರಬೇಕು. ಅಂದರೆ ನಿಮ್ಮ ಯುಎಎನ್ ನಂಬರ್ ಗೆ ಬ್ಯಾಂಕ್ ಖಾತೆ ಸಂಖ್ಯೆಯೋ, ಆಧಾರ್ ನಂಬರ್ ಅಥವಾ ಪಾನ್ ಕಾರ್ಡ್ ಈ ದಾಖಲೆಗಳನ್ನು ಒದಗಿಸಿರಬೇಕು.

ಇವಾಗಿದ್ದರೆ ನೀವು 9966044425 ನಂಬರ್ ಗೆ ಮಿಸ್ಡ್ ಕಾಲ್ ಕೊಡಬಹುದು. ನೀವು ಕಾಲ್ ಮಾಡಿದಾಗ ಅದು ಒಂದು ಕ್ಷಣ ರಿಂಗ್ ಆಗಿ ಸ್ವಯಂ ಆಗಿಯೇ ಡಿಸ್ಕನೆಕ್ಟ್ ಆಗುತ್ತದೆ. ಬಳಿಕ SMS ಮೂಲಕ ನಿಮಗೆ ಪಿಎಫ್ ಬ್ಯಾಲೆನ್ಸ್ ಎಷ್ಟೆಂದು ಮಾಹಿತಿ ಮೊಬೈಲ್ ಗೆ ಬರುತ್ತದೆ.




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@











ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು