80 ಜನ ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಣೆ:
ಸ್ವಯಂ ಉದ್ಯೋಗ ಕೈಗೊಳ್ಳುವ ತಾಲೂಕಿನ ಪರಿಶಿಷ್ಟ ಜಾತಿ ನಿರುದ್ಯೋಗಿ 80 ಜನ ಫಲಾನುಭವಿಗಳಿಗೆ ಮೋಟಾರ್ ಬೈಕ್ ಮತ್ತು ಕೀ ಹಸ್ತಾಂತರಿಸಲಾಗಿದೆ. ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ದ್ವಿಚಕ್ರದ ಬೈಕ್ ಸಹಕಾರಿಯಾಗಲಿ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು. ಅವರು ಬಿವಿವಿ ಸಂಘದ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಸ್ಥ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ದ್ವಿಚಕ್ರವಾಹನಗಳನ್ನು ನೀಡಲಾಗುವ ವಾಹನಗಳನ್ನು ವಿತರಣೆ ಮಾಡಿ ಮಾತನಾಡಿದರು
2022-23 ನೇ ಸಾಲಿನಲ್ಲಿ ಮಂಜೂರಾದ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 20, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ 10, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ 20, ಭೋವಿ ಅಭಿವೃದ್ಧಿ ನಿಗಮದಿಂದ 10, ವಾಲ್ಮೀಕಿ ಅಭಿವೃದ್ಧಿ ನಿಗಮದಡಿ 20 ಜನ ಒಟ್ಟು 80 ಜನ ಯುವಕರಿಗೆ ದ್ವಿಚಕ್ರ ಮೋಟಾರ್ ಬೈಕ್ ಮತ್ತು ಕೀ ಹಸ್ತಾಂತರಿಸಲಾಗಿದೆ ಎಂದರು.
ಯುವಕರು ಬೈಕ್ ಗಳ ಸದ್ಬಳಕೆ ಮಾಡಿಕೊಳ್ಳಬೇಕು. ಅನಾಹುತಗಳಿಗೆ ಅವಕಾಶ ನೀಡದೆ ಕಡ್ಡಾಯ ಸಂಚಾರ ನಿಯಮ ಪಾಲನೆ ಮತ್ತು ಹೆಲ್ಮೆಟ್ ಕಡ್ಡಾಯ್ವಾಗಿ ಧರಿಸಿಯೇ ಬೈಕ್ ಓಡಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ತಾಲೂಕಾಧಿಕಾರಿಯಾದ ಗೋಪಾಲ ಲಮಾಣಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ತಾಲೂಕಾಧಿಕಾರಿಯಾದ ಬಸವರಾಜ ಚಲುವಾದಿ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ಮಲ್ಲೇಶ್ ವಿಜಾಪುರ, ಕಲ್ಲಪ್ಪ ಭಗವತಿ, ಬಿ.ಎಲ್ ಪಾಟೀಲ್ ಶಿವೂ ವಾಡೇಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Tags
Bagalkot