ಮುಖ್ಯ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿ.ಎಂ.ಕಿಸಾನ್-ಕರ್ನಾಟಕ)

ಮುಖ್ಯ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಸಿ.ಎಂ.ಕಿಸಾನ್-ಕರ್ನಾಟಕ)



ಸಿ.ಎಂ.ಕಿಸಾನ್ ಸಮ್ಮಾನ್ ನಿಧಿ 2ನೇ ಕಂತು ಬಿಡುಗಡೆಯ ಚಾಲನೆ :

          ಮುಖ್ಯ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಸಿ.ಎಂ-ಕಿಸಾನ್), ಭಾರತದಲ್ಲಿರುವ ಭೂಹಿಡುವಳಿ ಹೊಂದಿರುವ ರೈತರಿಗೆ ಆದಾಯ ಬೆಂಬಲವನ್ನು ಒದಗಿಸುವ ಭಾರತ ಸರ್ಕಾರದ ಯೋಜನೆಯಾಗಿದೆ.

ಈ ಯೋಜನೆಯು ಕೃಷಿ ಹಾಗು ಪೂರಕ ಚಟುವಟಿಕೆಗಳು ಮತ್ತು ರೈತರ ಇತರೆ ಅಗತ್ಯಗಳಿಗೆ ಪೂರಕ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಎಸ್.ಬೊಮ್ಮಾಯಿಯವರು ಇಂದು 21-03-2023 ರಂದು ಮುಖ್ಯ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 2022-23ನೇ ಸಾಲಿನ 2ನೇ ಕಂತಿನ ಆರ್ಥಿಕ ನೇರವಾದ ರೂ 975 ಕೋಟಿ ಮೊತ್ತವನ್ನು 48,75,000 ರೈತರ ಖಾತೆಗಳಿಗೆ ಬಿಡುಗಡೆ ಮಾಡಲು ಚಾಲನೆ ನೀಡಲಿದ್ದಾರೆ.


ಕೇಂದ್ರ ಸರ್ಕಾರದ ರೂಪಾಯಿ 6,000 ಜೊತೆಯಲ್ಲಿ ರಾಜ್ಯ ಸರ್ಕಾರ ರೂ 4,000 ಹೆಚ್ಚಿನ ಸಹಾಯಧನವನ್ನು (2 ಕಂತುಗಳಲ್ಲಿ) ಸೇರಿಸಿ, ಒಟ್ಟು ರೂ 10,000 ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತದೆ.

ಕರ್ನಾಟಕ ಸರ್ಕಾರದಿಂದ ಯೋಜನೆಯ ಪ್ರಾರಂಭದಿಂದ (2019ರ ಆಗಸ್ಟ್ ಮಾಹೆಯಿಂದ) ಇಲ್ಲಿಯವರೆಗೆ ರೂ 4,821.37 ಕೋಟಿ ಆರ್ಥಿಕ ಸಹಾಯಧನವನ್ನು ನೀಡಲಾಗಿರುತ್ತದೆ.

ಈ ದಿನಾಂಕದಂದು ಖಾತೆಗೆ ಸೇರುತ್ತೆ ೧೪ನೇ ಕಂತಿನ ಹಣ, ಡೇಟ್ ನೆನಪಿಟ್ಟುಕೊಳ್ಳಿ!

ಮಾರ್ಚ್ 23, 2023:

ಸ್ತ್ರೀ ಸಾಮರ್ಥ್ಯ ಯೋಜನೆಯ 2ನೇ ಕಂತಿನ ವಿಶೇಷ ಸಮುದಾಯ ಬಂಡವಾಳ ನಿಧಿಯನ್ನು ಎಸ್.ಹೆಚ್.ಜಿ ಫಲಾನುಭವಿಗಳಿಗೆ ಬಿಡುಗಡೆ.

ಪುಣ್ಯಕೋಟಿ ದತ್ತು ಯೋಜನೆಯಡಿ ಸಂಗ್ರಹಿಸಲಾದ ದೇಣಿಗೆಯನ್ನು ರಾಜ್ಯದಲ್ಲಿರುವ ಗೋಶಾಲೆಗಳಲ್ಲಿನ ಜಾನುವಾರುಗಳ ಸಂರಕ್ಷಣೆಗೆ ಬಿಡುಗಡೆ.

ವರ್ಷವಾರು ವರ್ಗಾಯಿಸಿರುವ ಮೊತ್ತ:







          

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು