ಅಂಬೆಗಾಲಿಡುವ ಮಗು ಇದ್ದಕ್ಕಿದ್ದಂತೆ ನೃತ್ಯ ಮಾಡಿದ್ರೆ ಹೇಗೆ? ಇಲ್ಲಿದೆ ನೋಡಿ ಪುಟ್ಟ ಕಂದಮ್ಮನ ವಿಡಿಯೋ .........................
ಅಂಬೆಗಾಲಿಡುವ ಮಗು ತನ್ನ ಪುಟ್ಟ ಹೆಜ್ಜೆಗಳನ್ನಿಡುತ್ತಾ ನಡೆಯಲು ಕಲಿಯುವಾಗ ಇದ್ದಕ್ಕಿದ್ದಂತೆ ನೃತ್ಯ ಮಾಡುತ್ತದೆ. ಈ ವೈರಲ್ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ವೈರಲ್ ಆಗಿರುವ ಮುದ್ದಾದ ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಕಲಿಯುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನೃತ್ಯ ಮಾಡಲು ಪ್ರಾರಂಭಿಸುತ್ತದೆ.
ಅಂಬೆಗಾಲಿಡುವ ಮಗು ತನ್ನ ಪುಟ್ಟ ಹೆಜ್ಜೆಗಳನ್ನಿಡುತ್ತಾ ನಡೆಯಲು ಕಲಿಯುವಾಗ ಇದ್ದಕ್ಕಿದ್ದಂತೆ ನೃತ್ಯ ಮಾಡುತ್ತದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಮುದ್ದಾದ ಪುಟ್ಟ ಮಗುವೊಂದು ನಡೆಯಲು ಕಲಿಯುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನೃತ್ಯ ಮಾಡಲು ಪ್ರಾರಂಭಿಸುತ್ತದೆ. ಈ ವಿಡಿಯೋ ಇನ್ಸ್ಟಾಗ್ರಾಮ್ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ, ಮಕ್ಕಳು ನಡೆಯಲು ಕಲಿಯುತ್ತಿರುವುದನ್ನು ತೋರಿಸುವ ವಿಡಿಯೋ ಗಳು ಸಾಮಾನ್ಯವಾಗಿ ಜನರು ಅಯ್ಯೋ ಅನ್ನುವಂತೆ ಮಾಡುತ್ತದೆ.
ಮಗುವಿನ ತಾಯಿ ಅಮಂಡಾ ರಸೆಲ್ ಕಳೆದ ವರ್ಷವೇ ಈ ವಿಡಿಯೋ ವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಪತ್ರಕರ್ತೆ ಮರಿಯಾ ಶ್ರೀವರ್ ಅವರು ತನ್ನ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಈ ವಿಡಿಯೋ ವನ್ನು ಮರು ಹಂಚಿಕೊಂಡ ನಂತರ ಅದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮೊದಲಿಗೆ ಮಗು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಮುಂದೆ ಬರುತ್ತದೆ. ಒಮ್ಮೆಲೇ ಮುಂದಕ್ಕೆ ಹೆಜ್ಜೆ ಇಡುವುದನ್ನು ನಿಲ್ಲಿಸಿ, ನೃತ್ಯ ಮಾಡಲು ಪ್ರಾರಂಭಿಸುತ್ತದೆ. ಆ ವಿಡಿಯೋದಲ್ಲಿ ಮಗು ನೃತ್ಯ ಮಾಡುವಾಗ ಹಿನ್ನಲೆಯಲ್ಲಿ ಮನೆಯವರ ಉನ್ಮಾದದ ನಗುವೇ ವಿಡಿಯೋ ವನ್ನು ವೀಕ್ಷಿಸಲು ಇನ್ನಷ್ಟು ಮನರಂಜನೆ ನೀಡುತ್ತದೆ.
ಈ ವಿಡಿಯೋ ನೋಡಿ ಒಬ್ಬ ಬಳಕೆದಾರರು ಈ ಪೋಷಕತ್ವವೇ ಹಾಗೆ ನಮಗೆ ಸಂತೋಷವನ್ನು ತರುತ್ತದೆ. ಪ್ರತಿ ನಿದ್ದೆಯಿಲ್ಲದ ರಾತ್ರಿ ಮತ್ತು ಮನ ಕಳೆದುಹೋಗುವಂತೆ ಮಾಡುವ ಮೌಲ್ಯಯುತವಾಗಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು 'ನಿಮ್ಮ ಮುಂದಿನ ನಡೆಯನ್ನು ಯಾರಿಗೂ ತಿಳಿಸಬೇಡಿ' ಎಂದು ತಮಾಷೆಯ ಕಾಮೆಂಟ್ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು 'ಧನ್ಯವಾದಗಳು ಈ ವಿಡಿಯೋ ಶೇರ್ ಮಾಡಿದ್ದಕ್ಕಾಗಿ. ಹಿನ್ನೆಲೆಯಲ್ಲಿ ಜೋರಾಗಿ ನಗುತ್ತಿರುವವರು ಯಾರೆಂಬುದು ನನಗೆ ಗೊತ್ತಬೇಕು ಎಂದು ತಮಾಷೆಯ ಕಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ
Tags
VIRAL VIDEO