ಶಾಲೆಗಳಿಗೆ ಆನ್ಲೈನ್ ಸೇವೆ : ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾಹಿತಿ । ಮಾನ್ಯತೆ, ನವೀಕರಣ ಇನ್ನು ಸುಲಭ

ಶಾಲೆಗಳಿಗೆ ಆನ್ಲೈನ್ ಸೇವೆ : ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾಹಿತಿ । ಮಾನ್ಯತೆ, ನವೀಕರಣ ಇನ್ನು ಸುಲಭ 



ಖಾಸಗಿ ಶಾಲೆಗಳು ಮಾನ್ಯತೆ, ನವೀಕರಣ, ನಿರಾಕ್ಷೇಪಣಾ ಪತ್ರ ಸೇರಿ ವಿವಿಧ ಸೇವೆಗಳನ್ನು ಇನ್ನು ಮುಂದೆ ಆನ್ಲೈನ್ ಮೂಲಕವೇ ಪಡೆಯುವ ವ್ಯವಸ್ಥೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಾರಿಗೊಳಿಸಿದೆ. ಇಷ್ಟು ದಿನ ಈ ಎಲ್ಲ ಸೇವೆಗಳಿಗಾಗಿ ಖಾಸಗಿ ಶಾಲಾ ಮಾಲೀಕರು ಭೌತಿಕವಾಗಿ ಅರ್ಜಿ ಸಲ್ಲಿಸಬೇಕಾಗಿತ್ತು, ಇನ್ಮುಂದೆ ಆನ್ಲೈನ್ ನಲ್ಲೆ ಅರ್ಜಿ ಸಲ್ಲಿಸಿ, ಅನುಮತಿಯನ್ನು ಸಹ ಆನ್ಲೈನ್ ನಲ್ಲೇ ಪಡೆಯಬಹುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

           ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಆನ್ಲೈನ್ ಸೇವೆಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಹೊಸ ಶಾಲೆಗಳನ್ನು ಪ್ರಾಂಭಿಸಲು ಅನುಮತಿ, ನೋಂದಣಿ, ಪ್ರಥಮ ಮಾನ್ಯತೆ ನೀಡುವುದು, ಮಾನ್ಯತೆ ಪಡೆದ ನಂತರ ಪ್ರತಿ 5 ವರ್ಷಗಳಿಗೊಮ್ಮೆ ಮಾನ್ಯತೆ ನವೀಕರಣ, ರಾಜ್ಯ ಪಠ್ಯ ಕ್ರಮದಿಂದ ಕೇಂದ್ರ ಪಠ್ಯಕ್ರಮ ಯೋಜನೆಗಾಗಿ ನಿರಪೇಕ್ಷಣೆ ನೀಡುವುದನ್ನು ಆನ್ಲೈನ್ ಗೆ ಒಳಪಡಿಸಲಾಗಿದೆ. ಈ ಎಲ್ಲ ಸೇವೆಗಳನ್ನು ಆನ್ಲೈನ್ ಗೆ ಒಳಪಡಿಸುವುದರಿಂದ ಸಮಯ ಕೂಡ ಕಡಿತವಾಗಿದೆ. 8 ಹಂತಗಳಲ್ಲಿ ಪರಿಶೀಲನೆಯನ್ನು ೪ ಹಂತಕ್ಕೆ ಇಳಿಕೆ ಮಾಡಿದೆ. ಅದೇ ರೀತಿ 27 ದಿನಗಳ ಅವಧಿ ಇದೀಗ 17 ದಿನಕ್ಕೆ ತಗ್ಗಿದೆ. ಖಾಸಗಿ ಶಾಲೆಗಳು ಮಾನ್ಯತೆ ನವೀಕರಣಕ್ಕಾಗಿ ಒಮ್ಮೆ ಅರ್ಜಿ ಸಲ್ಲಿಸಿದ ಮೇಲೆ ಮೊದಲಿನಂತೆ ತ್ರಿಸದಸ್ಯ ಸಮಿತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಿಲ್ಲ. ಸ್ವೀಕೃತ ಒಟ್ಟು ಅರ್ಜಿಗಳಲ್ಲಿ ಶೇ.5 ಪ್ರಮಾಣದಲ್ಲಿ ರ್ಯಾಡಮ್ ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೊಂಡ ಶಾಲೆಗಳಿಗೆ ಮಾತ್ರ ಸ್ಥಳ ಪರಿಶೀಲನೆಗೆ ಸಮಿತಿ ತೆರಳಿದೆ. ಅರ್ಜಿ ಸಲ್ಲಿಸುವ ವೇಳೆ ತಪ್ಪು ಮಾಹಿತಿ ನೀಡಿದರೆ, ಹಾಲಿ ವಿಧಿಸುತ್ತಿರುವ ದಂಡ ಶುಲ್ಕದ 5 ಪಟ್ಟು ದಂಡವನ್ನು ಹೆಚ್ಚಾಗಿ ವಿಧಿಸಲಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಅರ್ಜಿ ಸ್ಥಿತಿಯ ಬಗ್ಗೆ SMS ಮೂಲಕ ಮಾಹಿತಿ ಸಿಗಲಿದೆ. ಶಾಲಾ ಆಡಳಿತ ಮಂಡಳಿಗಳು ಅರ್ಜಿ ಜತೆಗೆ ಜಿಯೋ ಟ್ಯಾಗ್ವುಳ್ಳ ದಾಖಲಾತಿಗಳನ್ನು ಸಲ್ಲಿಸಬೇಕು. ಎಲ್ಲ ಅರ್ಜಿದಾರರ ಸಂಸ್ಥೆಗಳು ಅಪ್ಲೋಡ್ ಮಾಡಿರುವ ಎಲ್ಲ ದಾಖಲಾತಿಗಳು ಸಾರ್ವಜನಿಕರ ಪರಿ ವೀಕ್ಷಣೆಗೆ ವೆಬ್ ಸೈಟ್ ನಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದರು.


ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಅಹ್ವಾನ :


ಅನಧಿಕೃತ ಸ್ಕೂಲ್ ಗಳ ವಿರುದ್ಧ ಕ್ರಮ :

ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಶಾಲೆಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಶಾಲಾ ಪರೀಕ್ಷೆಗಳು ಮುಗಿದ ಬಳಿಕ ಅವುಗಳ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಮತ್ತು ಮುಂದಿನ ಶೈಕ್ಷಣಿಕ ಸಾಲಿನಿಂದ (2023-24) ಜಿಲ್ಲಾವಾರು ಅನಧಿಕೃತ ಶಾಲೆಗಳ ಪಟ್ಟಿಯನ್ನು ಇಲಾಖೆಯ ವೆಬ್ ಸೈಟ್ ನಲ್ಲಿಯೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.
                ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ರಾಜ್ಯದ ಎಲ್ಲ ಜಿಲ್ಲೆಗಳ ಅನಧಿಕೃತ ಶಾಲೆಗಳ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸಿದೆ. ಪರೀಕ್ಷಾ ಸಮಯವಾಗಿರುವುದರಿಂದ ಈಗ ಶಾಲೆಗಳ ವಿರುದ್ಧ ಕ್ರಮ ಕೈಗೊಂಡರೆ ಮಕ್ಕಳಿಗೆ ತೊಂದರೆಯಾಗಲಿದೆ. ಆದ್ದರಿಂದ ಪರೀಕ್ಷೆ ಮುಗಿದ ಬಳಿಕ ಸಂಬಂಧಪಟ್ಟ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು, ಮುಂದಿನ ಸಾಲಿನಿಂದ ಎಲ್ಲ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪೋಷಕರ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ ನಲ್ಲಿಯೇ ಪ್ರಕಟಿಸಲಾಗುವುದು ಎಂದರು.




ಅರ್ಧ ಗಂಟೆ ಮೊದಲೇ ಕೊಠಡಿ ಪ್ರವೇಶಕ್ಕೆ ಅವಕಾಶ :

ಪರೀಕ್ಷಾ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಪರೀಕ್ಷಾ ಕೊಠಡಿಯಲ್ಲಿ ಹಾಜರಾಗಲು SSLC ಮತ್ತು ದ್ವಿತೀಯ PUC ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ನಿಗದಿತ ಸಮಯಕ್ಕಿಂತ ಮೊದಲೇ ಕೊಠಡಿ ಪ್ರವೇಶಿಸುವುದರಿಂದ ವಿದ್ಯಾರ್ಥಿಗಳು ನಿರಾಂತಕವಾಗಿ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ. ಯಾವುದೇ ಒತ್ತಡವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಾಗಲಿ ಎಂಬ ಉದ್ದೇಶದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಹೆಚ್ಚಿನ ಸಮಯ ಕಲ್ಪಿಸಿದೆ. ಈ ಅರ್ಧ ಗಂಟೆ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ವಾತಾವರಣದಲ್ಲಿ ಇರಲು ಮತ್ತು ಕುಳಿತುಕೊಳ್ಳುವ ಜಾಗ, ಪರೀಕ್ಷಾ ಪರಿಕರಗಳನ್ನು ನೋಡಿಕೊಳ್ಳಲು ಸಮಯವಾಗಲಿದೆ. ಪೊಲೀಸ್ ಸಿಬ್ಬಂಧಿಯನ್ನು ಪರೀಕ್ಷಾ ಕೊಠಡಿಯೊಳಗೆ ಬಿಡುವುದಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಭದ್ರೆತೆ ಕಾಪಾಡಲಿದ್ದಾರೆ ಎಂದರು.


















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು