ಲೇಬರ್ ಕಾರ್ಡ್ ತಾಯಿ-ಮಗು ಸಹಾಯಹಸ್ತ
ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ರೂ. 6000 /- ಗಳ ಸಹಾಯಧನ.
ನಿಯಮ 43 -A ನೋಂದಾಯಿತ ಮಹಿಳಾ ಕಾರ್ಮಿಕಳ ಮಗುವಿನ ಪೌಷ್ಟಿಕಾಂಶದ ಪೂರೈಕೆಗಾಗಿ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ನೀಡುವ ಸಹಾಯಧನ (ತಾಯಿ-ಮಗು ಸಹಾಯ ಹಸ್ತ)
👉 ನೋಂದಾಯಿತ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆಯ ಸಮಯದಿಂದ ಮೂರೂ ವರ್ಷಗಳ ಅವಧಿಯವರೆಗೆ ಮಗುವಿನ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷಿಕಾಂಶದ ಪೂರೈಕೆಗಾಗಿ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾಳೆ.
👉 ಒಟ್ಟು ಮೊತ್ತವು ರೂ. 6000/- ಗಳು ಆಗಿರುತ್ತವೆ. (ಪ್ರತಿ ತಿಂಗಳು 500/- ರೂ. ಗಳಂತೆ ಮಂಜೂರಾತಿ ಅಧಿಕಾರಿಯು ನೋಂದಾಯಿತ ಮಹಿಳಾ ಫಲಾನುಭವಿಗೆ ಮಂಜೂರ ಮಾಡಬೇಕು).
👉 ನೋಂದಾಯಿತ ಮಹಿಳಾ ಕಾರ್ಮಿಕರು ಎರಡು ಬಾರಿ ಮಾತ್ರ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾಳೆ.( ಮೊದಲ ಎರಡು ಮಕ್ಕಳ ಜ್ಞಾನಕ್ಕಾಗಿ ಮಾತ್ರ ).
👉 ಅರ್ಜಿಯು ಜನನ ಮತ್ತು ಮರಣ ನೋಂದಣಾ ಅಧಿಕಾರಿಯಿಂದ ಪಡೆದ ಜನನ ಪ್ರಮಾಣಪತ್ರವನ್ನು ಒಳಗೊಂಡಿರಬೇಕು.
👉 ಈ ಸೌಲಭ್ಯವನ್ನು ಪಡೆಯಲು ಅರ್ಹರಾದ ಮಹಿಳಾ ಫಲಾನುಭವಿಯು ಮಂಡಳಿಯ ತಂತ್ರ್ಯಾಂಶದಿಂದ ಅರ್ಜಿಯನ್ನು ಸಲ್ಲಿಸಬೇಕು.
ಪೂರಕ ದಾಖಲಾತಿಗಳು :
👉 ಮಂಡಳಿ ನೀಡಿರುವ ಗುರುತಿನ ಚೀಟಿ / ಸ್ಮಾರ್ಟ್ ಕಾರ್ಡ್ ( ದೃಡೀಕೃತ)
👉 ಮಕ್ಕಳ ಮಕ್ಕಳ ಛಾಯಾಚಿತ್ರ
👉 ಉದ್ಯೋಗ ದೃಡೀಕರಣ ಪತ್ರ
👉 ಬ್ಯಾಂಕ್ ಖಾತೆ ಪುರಾವೆ
👉 ಡಿಸ್ಚಾರ್ಜ್ ಸಾರಾಂಶ
👉 ಮಗುವಿನ ಜನನ ಪ್ರಮಾಣಪತ್ರ
👉 ಮಗುವಿನ ಜನನದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು
👉 ಮೂರೂ ವರ್ಷದವರೆಗೂ ಪ್ರತಿ ವರ್ಷ ಅರ್ಜಿಯನ್ನು ಸಲ್ಲಿಸತಕ್ಕದ್ದು
👉 ಮಗುವಿನ ಜೀವಿತ ಕುರಿತು ಪ್ರತಿ ( ಎರಡು ಹಾಗೂ ಮೂರನೇ ವರ್ಷ ) ವರ್ಷ ಅಫಿಡೆವಿಟ್ ಸಲ್ಲಿಸತಕ್ಕದ್ದು.
ಅನ್ವಯಿಸುವ ವಿಧಾನ :
1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು.
2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
3.ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ
ಆತ್ಮೀಯ ಕಾರ್ಮಿಕರೇ ಈ ಎಲ್ಲ ಮಾಹಿತಿ ನಿಮಗೆ ಇಷ್ಟವಾದಲ್ಲಿ, ಹಾಗೂ ನೀವಿನ್ನು ತಾಯಿ ಮಗು ಸಹಾಯಹಸ್ತ ಸೌಲಭ್ಯ ಹೊಂದಿಲ್ಲದಿದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ ಅಥವಾ ಈ ಕೆಳಗಿನ ಲಿಂಕ್ ನ್ನ ನೀವು ಭರ್ತಿ ಮಾಡಿದರೆ ನಾವೇ ಖುದ್ದಾಗಿ ಸಂಪರ್ಕಿಸಿ ಅರ್ಜಿ ಸಲ್ಲಿಸಿಕೊಡುತ್ತೇವೆ.
ಅರ್ಜಿ ಸಲ್ಲಿಸುವ ಲಿಂಕ್ : https://forms.gle/oMV4XeCTKUQkeKLp6
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Labour Card