ಕಾರ್ಮಿಕ ಕಾರ್ಡ್ ಮದುವೆ ಸಹಾಯಧನ:

ಕಾರ್ಮಿಕ್ ಕಾರ್ಡ್ ಮದುವೆ ಸಹಾಯಧನ (ಗೃಹಲಕ್ಷ್ಮಿ ಬಾಂಡ್) ರೂಪಾಯಿ 60,000 ಸಹಾಯಧನ ಇಂದೇ ಅರ್ಜಿ ಸಲ್ಲಿಸಿ:




       ನಮಸ್ಕಾರ ವೀಕ್ಷಕರೇ ಇವತ್ತಿನ ಲೇಖನದಲ್ಲಿ ಕಾರ್ಮಿಕ ಹೊಂದಿರುವವರಿಗೆ ಇರುವ ಸೌಲಭ್ಯಗಳಲ್ಲಿ ಒಂದಾದ ಮದುವೆ ಸಹಾಯಧನದ  ಕುರಿತು ಸಂಪೂರ್ಣ ಮಾಹಿತಿ ನೋಡೋಣ. ನೀವು ಕಾರ್ಮಿಕ ಕಾರ್ಡ್ ಹೊಂದಿರುವಿರಾ? ಹಾಗಿದ್ದಲ್ಲಿ ಇಲಾಖೆಯಿಂದ ಇರುವ ಮದುವೆ ಸಹಾಯಧನಕ್ಕಾಗಿ ಇಂದೇ ಆನ್ಲೈನ್ ನಲ್ಲಿ ಅರ್ಜಿ ಸ್ಲಲಿಸಿ .

ಮಂಡಳಿಯ ಕಾರ್ಯದರ್ಶಿ / ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ಕಾರ್ಮಿಕರಿಂದ ಅರ್ಜಿಯನ್ನು ಸ್ವೀಕರಿಸಿ ಫಲಾನುಭವಿಯ ಮೊದಲನೇ ಮದುವೆಗೆ ಅಥವಾ ಅವನ / ಅವಳ ಅವಲಂಬಿತ ಮಕ್ಕಳಿಗೆ ಮದುವೆಯ ವೆಚ್ಚವನ್ನು ಭರಿಸಲು ಸಹಾಯಧನವಾಗಿ ರೂ, 60,000/- ರೂಗಳನ್ನು (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ 08-08-2022 ರಂತೆ ) ಮಂಜೂರು ಮಾಡಬೇಕು.

ಕೆಳಕಂಡ ಷರತ್ತುಗಳನ್ನು ಪೂರೈಸಿದಾಗ ಮಾತ್ರ ಸಹಾಯ ಧನವನ್ನು ಮಂಜೂರು ಮಾಡಬೇಕಾಗುತ್ತದೆ.

✡ ನೋಂದಾಯಿತ ಕಟ್ಟಡ ಕಾರ್ಮಿಕನು ಮದುವೆಯ ಸಹಾಯ ಧನ ಪಡೆಯಲು ಮದುವೆಯಾದ ದಿನಾಂಕದಿಂದ ನೋಂದಣಿಯಾದ ದಿನಾಂಕದವರೆಗೆ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.

✡ ನೋಂದಾಯಿತ ಕಟ್ಟಡ ಕಾರ್ಮಿಕ ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು  ಅರ್ಹರಿರುತ್ತಾರೆ.(ಕಟ್ಟಡ ಕಾರ್ಮಿಕನ ಕುಟುಂಬದಲ್ಲಿರುವ ನೋಂದಾಯಿತ ನಿರ್ಮಾಣ ಕಾರ್ಮಿಕನ ಸದಸ್ಯರನ್ನು ಲೆಕ್ಕಿಸದೆ ಒಂದು ನಿರ್ದಿಷ್ಟವಾದ ಮದುವೆಗೆ ಒಂದೇ ಸಹಾಯ ಧನವಾಗಿ ಹಕ್ಕು ಸಾಧಿಸಬೇಕಾಗಿರುತ್ತದೆ.)

✡ ನೋಂದಾಯಿತ ಕಟ್ಟಡ ಕಾರ್ಮಿಕನ ಮಗ / ಮಗಳು ಮದುವೆ ಸಹಾಯಧವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.

✡ ವಿವಾಹ ನೋಂದಾವಣಾಧಿಕಾರಿಯಿಂದ ಪಡೆದ ವಿವಾಹ ನೋಂದಣಿ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.



ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

✔ ಫಲಾನುಭವಿಯೆಂದು ನೋಂದಣಿಯಾಗಿ ಒಂದು ವರ್ಷದ ನಂತರ ಅರ್ಜಿಯನ್ನು ಸಲ್ಲಿಸುವುದು.
✔ ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ 
✔ ಉದ್ಯೋಗ ದೃಡೀಕರಣ ಪತ್ರ 
✔ ಬ್ಯಾಂಕ್ ಖಾತೆ ವಿವರಗಳು 
✔ ವಿವಾಹ ನೋಂದಣಾಧಿಕಾರಿಗಳಿಂದ ಪಡೆದ ವಿವಾಹ ನೋಂದಣಾ ಪತ್ರ 
✔ ಮದುವೆಯ ಆಮಂತ್ರಣ ಪತ್ರ 
✔ ಮದುವೆ ಕರ್ನಾಟಕ ರಾಜ್ಯದ ಹೊರಗೆ ಜರುಗಿದ್ದಲ್ಲಿ ಅಫಿಡವಿಟ್ ಸಲ್ಲಿಸುವುದು
✔ ರೇಷನ್ ಕಾರ್ಡ್ 
✔ ಮದುವೆಯಾಗಿ ಆರು ತಿಂಗಳೊಳಗೆ ಅರ್ಜಿ ಸಲ್ಲಿಸುವುದು.



ಅನ್ವಯಿಸುವ ವಿಧಾನ :

ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು 
ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ 
ಕಾರ್ಮಿಕ ಅಧಿಕಾರಿಯಿಂದ ಪರಿಶೀಲನೆ ಮತ್ತು ಅನುಮೋದನೆ 



ಆತ್ಮೀಯ ಕಾರ್ಮಿಕರೇ ಈ ಎಲ್ಲ ಮಾಹಿತಿ ನಿಮಗೆ ಇಷ್ಟವಾದಲ್ಲಿ, ಹಾಗೂ ನೀವಿನ್ನು ಮದುವೆ ಸಹಾಯಧನವನ್ನು ಪಡೆದಿಲ್ಲದಿದ್ದರೆ  ಕೂಡಲೇ ನಮ್ಮನ್ನು ಸಂಪರ್ಕಿಸಿ ಅಥವಾ ಈ ಕೆಳಗಿನ ಲಿಂಕ್ ನ್ನ ನೀವು  ಭರ್ತಿ ಮಾಡಿದರೆ ನಾವೇ ಖುದ್ದಾಗಿ ಸಂಪರ್ಕಿಸಿ ಅರ್ಜಿ ಸಲ್ಲಿಸಿಕೊಡುತ್ತೇವೆ.

ಅರ್ಜಿ ಸಲ್ಲಿಸುವ ಲಿಂಕ್ :::https://forms.gle/xz6PbbBr6jiia86v8


ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು