ವಿವಿಧ ಕಾಮಗಾರಿಗಳಿಗೆ ಚಾಲನೆ

 ವಿವಿಧ ಕಾಮಗಾರಿಗಳಿಗೆ ಚಾಲನೆ 


ಜೇವರ್ಗಿ ತಾಲೂಕಿನ ಕೋಳಕೂರ್ ಗ್ರಾಮದಲ್ಲಿ ಸುಮಾರು 16 ಕೋಟಿ 65 ಲಕ್ಷ ವೆಚ್ಚದಲ್ಲಿ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ( ಪರಿಶಿಷ್ಟ ಜಾತಿ ) ಕಟ್ಟಡ ಕಾಮಗಾರಿ ಹಾಗೂ ವಿವಿಧ ಕಾಮಗಾರಿಗಳಿಗೆ ಜೇವರ್ಗಿ ಶಾಸಕರು ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಉದ್ಘಾಟನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಿದರು.

ಗ್ಯಾರಂಟಿ ಕಾರ್ಡ್ ವಿತರಣೆ ಜೊತೆಗೆ ಜಾಗೃತಿ.

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ಜೇವರ್ಗಿಯಲ್ಲಿ ಶೈಕ್ಷಣಿಕವಾಗಿ ಮೂಲ ಸೌಕರ್ಯ ಹುಟ್ಟು ಹಾಕುವ ಕೆಲಸಕ್ಕೆ ತಾವು ಶಾಸಕರಾಗಿ ಹೆಚ್ಚಿನ ವೇಗ ನೀಡಿದ್ದಾಗಿ ಹೇಳಿದರಲ್ಲದೆ ಬರುವ ದಿನಗಳಲ್ಲಿ ಇಡೀ ಜೇವರ್ಗಿ ಮತಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕವಾದಂತಹ ಉತ್ತಮ ಪರಿಸರ ಹುಟ್ಟುಹಾಕುವ ಕನಸು ತಮ್ಮದಾಗಿದೆ, ಜನರ ಸಹಕಾರ ಬೇಕು ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಡಾ. ಅಜಯ್ ಸಿಂಗ್ ಕೊಳಕುದ ಗ್ರಾಮದಲ್ಲಿ ಇರುವ ಇಂದಿರಾಗಾಂಧಿ ವಸತಿ ಶಾಲೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲಿಟ್ಟರು. ಕೋಳಕೂರ ಗ್ರಾಮದಲ್ಲಿ ಎರಡು ಸರ್ಕಾರಿ ಶಾಲಾ ಕೊಠಡಿ, ಹರಿಜನವಾಡದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ಶಾಲಾ ಕೊಠಡಿ, ಬಿಸಿ ಊಟದ ಕೊಠಡಿ ಮತ್ತು ಶೌಚಾಲಯ ಹಾಗೂ ಕೋಳಕೂರು ಸಿದ್ಧಬಸವೇಶ್ವರ ದೇವಸ್ಥಾನ ಅಭಿವೃದ್ಧಿಯ ೨೦ ಲಕ್ಷ ರೂ. ಕಾಮಗಾರಿಗೆ ಚಾಲನೆ ನೀಡಿದರು.

ಮಲಬಾರ್ ಗೋಲ್ಡ್ & ಡೈಮಂಡ್ ನೂತನ ಶಾಖೆ ಉದ್ಘಾಟನೆ.


ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು