ನಾನು ಪ್ರಧಾನಿಯನ್ನು ನೋಡಲು ಬಂದೆ ಬರುವೆ, ಮೋದಿ ನೋಡುವ ಆಸೆ ವ್ಯಕ್ತಪಡಿಸಿದ ಮಂಡ್ಯದ ಅಜ್ಜಿ

ನಾನು ಪ್ರಧಾನಿಯನ್ನು ನೋಡಲು ಬಂದೆ ಬರುವೆ, ಮೋದಿ ನೋಡುವ ಆಸೆ ವ್ಯಕ್ತಪಡಿಸಿದ ಮಂಡ್ಯದ ಅಜ್ಜಿ 



              ಮಾರ್ಚ್ 12ಕ್ಕೆ ಮಂಡ್ಯಕ್ಕೆ ಪ್ರಧಾನಿ ಮೋದಿ  ಬರುತ್ತಿದ್ದರೆ.ನಾನು ಅಲ್ಲಿಗೆ ಬಂದೆ ಬರುವೆ ಎಂದು ವೃದ್ಧೆಯೊಬ್ಬರು ಮೋದಿಯನ್ನು ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಮೋದಿ ನನಗೆ ಹಣ ಹಾಕಿ ಸಹಾಯ ಮಾಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ. ಈ ವಿಡಿಯೋ ದಲ್ಲಿ ವೃದ್ಧೆಯೊಬ್ಬರು ಹಾಲು ಕರೆಯುತ್ತ ಮೋದಿ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಉಪ್ಪರಕನಹಳ್ಳಿ ಗ್ರಾಮದ ವಿರಾಜಮ್ಮ ಮೋದಿಯನ್ನು ನಾನು ನೋಡಬೇಕು, ಈ ಇಳಿ ವಯಸ್ಸಿನಲ್ಲಿ ಮೋದಿ ನೋಡುವ ಆಸೆ ಇದೆ. 



     ತನ್ನ ಖಾತೆಗೆ ಮೋದಿ ಹಣ ಹಾಕಿ ಸಹಾಯ ಮಾಡಿದ್ದಾರೆ ಎಂದು ವೃದ್ಧೆ ಮೋದಿಯನ್ನು ಕೊಂಡಾಡಿದ್ದಾರೆ. ಮಾರ್ಚ್ 12ರಂದು ಮೋದಿ ಮಂಡ್ಯ ಬರುತ್ತಿದ್ದಾರೆ. ನಾನು ಅವರನ್ನು ನೋಡಲು ಅಲ್ಲಿಗೆ ತೆರೆಳುತ್ತೇನೆ ಎಂದ ಅಜ್ಜಿ ಹೇಳಿದ್ದಾರೆ. ಮಾರ್ಚ್ 12ಕ್ಕೆ ಪ್ರಧಾನಿ ಮೋದಿ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಅಲ್ಲಿ ಮೋದಿ ಅನೇಕ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಈಗಾಗಲೇ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು