ಸುಮಲತಾ ಅಂಬಿರೀಶ್ ರವರು ಬಿ ಜೆ ಪಿ ಗೆ ಸೇರ್ಪಡೆ ಸಾಧ್ಯತೆ ?

ಸುಮಲತಾ ಅಂಬಿರೀಶ್ ರವರು ಬಿ ಜೆ ಪಿ ಗೆ ಸೇರ್ಪಡೆ ಸಾಧ್ಯತೆ ? :

ಮಂಡ್ಯ ಗೌಡ್ತಿ ಒಳಗುಟ್ಟು ರಟ್ಟು ಮಾಡಿದ ಜೆಡಿಎಸ್ನಾ ಶಾಸಕ ನಾಳೆ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರುತ್ತಾರೆ!!!!!

                 


         ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಅಂತಿಮವಾಗಿ ಬಿಜೆಪಿ ಸೇರುವುದನ್ನು ಜೆಡಿಎಸ್ ಶಾಸಕ ಖಚಿತಪಡಿಸಿದ್ದಾರೆ, ಅಲ್ಲದೆ ಯಾವಾಗ ಸೇರಲಿದ್ದಾರೆ ಅಂತಲೂ ದಿನವನ್ನು ಸಹ ಹೇಳಿದ್ದಾರೆ.

ಇಂದು ಮಾರ್ಚ್ 09 ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಸ್ ಪುಟ್ಟರಾಜು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಾಳೆ ಬಿಜೆಪಿ ಸೇರ್ತಾರೆ. ಮೋದಿ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆಗೆ ಪ್ಲಾನ್ ಮಾಡಿದ್ದರು. ಆದ್ರೆ, ಸರ್ಕಾರೀ ಕಾರ್ಯಕ್ರಮ ಆಗಿದ್ದರಿಂದ, ಅವಕಾಶ ಸಿಗಲಿಲ್ಲ ಎಂದು ಹೇಳಿದರು. ಈ ಮೂಲಕ ಸುಮಲತಾ ಬಿಜೆಪಿ ಸೇರುವುದು ಕನ್ಫರ್ಮ್ ಎನ್ನುವ ಸುಳಿವು ಸಿಕ್ಕಂತಾಗಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ ಒಂದಲ್ಲ, ನಾಲ್ಕು ಅವಕಾಶಗಳು !

ನಾಳೆ ಮಧ್ಯಾಹ್ನ ಸುದ್ಧಿಗೋಷ್ಠಿ ಕರೆದ ಸುಮಲತಾ ಅಂಬರೀಶ್ :

ನಾಳೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುತ್ತಾರೆ ಎಂದು ಜೆಡಿಎಸ್ ಶಾಸಕ ಹೇಳಿದ್ದಾರೆ. ಮತ್ತೊಂದೆಡೆ ನಾಳೆಯೇ ಸುಮಲತಾ ಅಂಬರೀಶ್ ಸುದ್ದಿಗೋಷ್ಠಿ ಕರೆದಿದ್ದು, ಅಧಿಕೃತವಾಗಿ ಬಿಜೆಪಿ ಸೇರ್ಪಡೆ  ಘೋಷಿಸುವ ಸಾಧ್ಯತೆಗಳಿವೆ. ಮಂಡ್ಯದ ತಮ್ಮ ನಿವಾಸದಲ್ಲೇ ಘೋಷಣೆ ಮಾಡಲಾಗಿದ್ದರೆ. ಎನ್ನಲಾಗಿದೆ. ಸುಮಲತಾ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಸುಮಲತಾ ಅಂಬರೀಶ್ ತಮ್ಮ ನಿರ್ಧಾರ ಪ್ರಕಟಿಸಲು ಸುದ್ಧಿಗೋಷ್ಠಿ ಕರೆದಿದ್ದಾರೆ ಎಂದು ತಿಳಿದುಬಂದಿದೆ.

ಸಂಸದೆ ಸುಮಲತಾ ಅಂಬರೀಶ್ ಅವರು ಯಾವ ಪಕ್ಷಕ್ಕೆ ಸೇರುತ್ತಾರೆ? ಎನ್ನುವ ಕುತೂಹಲ  ಮೂಡಿಸಿದೆ.ಈ ಹಿನ್ನಲೆಯಲ್ಲಿ ಮಂಡ್ಯ ಸಂಸದೆ ಸುಮಲತಾ ರಾಜಕೀಯ ನಡೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಯಾವ ಪಕ್ಷ ಸೇರಬೇಕೆಂದು ಮಂಡ್ಯ ಗೌಡ್ತಿ ತಮ್ಮ ಆಪ್ತರೊಂದಿಗೆ ಚರ್ಚೆ ನಡೆಸಿದ್ದಾರೆ. ಇದರ ಮಧ್ಯೆ ಸುಮಲತಾ ಅಂಬರೀಶ ನಾಳೆ (ಮಾರ್ಚ್ 10) ಬಿಜೆಪಿ ಸೇರುತ್ತಾರೆ ಎಂದು ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದಾರೆ.

ಮೋದಿ ಸಮ್ಮುಖದಲ್ಲಿ ಬಿಜೆಪಿ ಸೇರಲು ಕಸರತ್ತು ನಡೆಸಿದ್ರಾ?

            ಹೌದು .......... ಸುಮಲತಾ ಅವರು ತಮ್ಮ ಆಪ್ತರೊಂದಿಗೆ ಸರಣಿ ಸಭೆಗಳನ್ನು ತರಾತುರಿಯಲ್ಲಿ ಮಾಡಿದ್ದನ್ನು ಗಮನಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲೇ ಬಿಜೆಪಿ ಸೇರಲು ಬಯಸಿದ್ದರು. ಇದೆ ಮಾರ್ಚ್ 12 ರಂದು ಮೋದಿ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಬಿಜೆಪಿ ಸೇರಲು ಸುಮಲತಾ ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಮೊನ್ನೆ ಅಷ್ಟೇ ರಾಜಕೀಯ ಮುತ್ಸದಿ ಎಸ್.ಎಂ ಕೃಷ್ಣಾ ಅವರನ್ನು ಭೇಟಿ ಮಾಡಿದ್ದರು. ಬಳಿಕ ಬೆಂಗಳೂರಿನ ತಮ್ಮ ನಿವಾಸದಲ್ಲಿ ಆಪ್ತರೊಂದಿಗೆ ಸಭೆ ಮಾಡಿ ಈ ಬಗ್ಗೆ ಚರ್ಚೆ ಮಾಡಿದ್ದರು. ಇದೀಗ ಇದಕ್ಕೆ ಪುಟ್ಟರಾಜು ಸಹ ಹೇಳಿಕೆ ಹಿಂಬು ನೀಡಿದಂತಿದೆ.



ಮೊದಲು ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದ ಸುಮಲತಾ ಅಂಬರೀಶ ಇದೀಗ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ. ಹೀಗಾಗಿ ಎಸ್.ಎಂ ಕೃಷ್ಣಾ ಸೇರಿದಂತೆ ತಮ್ಮ ಆಪ್ತರೊಂದಿಗೆ ಚರ್ಚೆ ಮಾಡಿದ್ದಾರೆ. ಅಲ್ಲದೆ ಈಗಾಗಲೇ ಬಿಜೆಪಿ ನಾಯಕರ ಜೊತೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ನೋಡಿಕೊಂಡು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಬಿಜೆಪಿ ವಿಜಯ್ ಸಂಕಲ್ಪ ಯಾತ್ರೆಯಲ್ಲಿ ಸುಮಲತಾ ಭಾವಚಿತ್ರ ಮದ್ದೂರಿನ ಬಿಜೆಪಿ ನಾಯಕರ ಫ್ಲೆಕ್ಸ್ ನಲ್ಲಿ ರಾರಾಜಿಸಿತ್ತು. ಮದ್ದೂರಿನ ಬಿಜೆಪಿ ಮುಖಂಡ ಎಸ್ಪಿ ಸ್ವಾಮಿ ಭಾವಚಿತ್ರದ ಪೋಸ್ಟರ್ ಜೊತೆಗೆ ಸುಮಲತಾ ಭಾವಚಿತ್ರ ಕಂಡು ಬಂದಿತ್ತು. ಅಲ್ಲದೇ ಈ ಹಿಂದೆ ಅಮಿತ್ ಶಾ ಭೇಟಿ ಸಂದರ್ಭದಲ್ಲೂ ಸಹ ಬಿಜೆಪಿ ಬ್ಯಾನರ್ ನಲ್ಲಿ ಸುಮಲತಾ ಅಂಬರೀಶ ಫೋಟೋ ರಾರಾಜಿಸಿದ್ದವು, ಆದ್ರೆ, ಇದೀಗ ಜೆಡಿಎಸ್ ಶಾಸಕ ಪುಟ್ಟರಾಜು, ಸುಮಲತಾ ಬಿಜೆಪಿ ಸೇರ್ಪಡೆಯನ್ನು ಖಚಿತಪಡಿಸಿದ್ದಾರೆ.

ಸುಮಲತಾ ಅಂಬರೀಶ್ ಬಿಜೆಪಿ ಸೇರುವ ವದಂತಿ ಹಲವು ದಿನಗಳಿಂದ ಹರಿದಾಡುತ್ತಿದ್ದವು. ಆದರೆ ಅದು ಕನ್ಫರ್ಮ್ ಅನ್ನೋ ಸುಳಿವು ಸಿಕ್ಕಿದೆ. ಕಾರಣ ಸುಮಲತಾ ಬಿಜೆಪಿ ಸೇರ್ಪಡೆ ಆಗಲು, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕೆಂದು ಕೆಲ ಷರತ್ತುಗಳು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇನ್ನು 2024ಕ್ಕೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ.












ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು