ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ವಜ್ರ ಮಹೋತ್ಸವ : ಪೂರ್ವ ಸಿದ್ಧತೆಗೆ ಚಾಲನೆ

ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ವಜ್ರ ಮಹೋತ್ಸವ : ಪೂರ್ವ ಸಿದ್ಧತೆಗೆ ಚಾಲನೆ 



             ಅರವತ್ತು ವರ್ಷಗಳನ್ನು ಪೂರೈಸಿ ವಜ್ರಮಹೋತ್ಸವಕ್ಕೆ ಸಿದ್ಧವಾಗುತ್ತಿರುವ ಬಸವೇಶ್ವರ ವಿದ್ಯಾವರ್ಧಕ ಸಂಘದ ಇಂಜನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಹಲವು ಚಟುವಟಿಕೆಗಳಿಗೆ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ. ವೀರಣ್ಣ ಚರಂತಿಮಠ ಚಾಲನೆ ನೀಡಲಿದ್ದಾರೆ. 

                 ಬೆಳಗ್ಗೆ ೧೦ ಗಂಟೆಗೆ ಕಾಲೇಜಿನ ಗ್ಯಾಲರಿ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆರ್.ಎಫ್.ಐ.ಡಿ ಅಳವಡಿಕೆ, ಹಳೆ ವಿದ್ಯಾರ್ಥಿಗಳ ಕಟ್ಟಡಕ್ಕೆ ಅಡಿಗಲ್ಲು, ಬಿಇಸಿ ಎಫ್.ಎಂ ಧ್ವನಿ ಸುರುಳಿಯಲ್ಲಿ ತಾಂತ್ರಿಕ ಉಪನ್ಯಾಸ ಮಾಲಿಕೆ, IEEE ವೇದಿಕೆಯ ತಾಂತ್ರಿಕ ಉಪನ್ಯಾಸ ಮಾಲಿಕೆ, ಹೀಗೆ ಹಲವು ಕಾರ್ಯಚಟುವಟಿಗಳನ್ನು ಉದ್ಘಾಟಿಸಲಿದ್ದಾರೆ. ಗೌರವ ಕಾರ್ಯದರ್ಶಿ ಮಹೇಶ ಅಥಣಿ, BVPS ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶ ಡಾ.ಆರ್ ಎನ್ ಹೆರಕಲ್, ಪ್ರಾಚಾರ್ಯ ಡಾ. ಎಸ್.ಎಸ್ ಇಂಜಗನೇರಿಯವರು ಉಪಸ್ಥಿತರಿರುವರು.











ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು