ಅಂಗೈನಲ್ಲೇ ಆರೋಗ್ಯ ಜಾತಕ

 

ಅಂಗೈನಲ್ಲೇ ಆರೋಗ್ಯ ಜಾತಕ :



   

                   ನವದೆಹಲಿ :  ದೇಶದ ಅರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರವೆಂದೇ ವಿಶ್ಲೇಷಿಸಲಾಗಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ ಡಿಜಿಟಲ್ ಮಿಶನ ಯೋಜನೆಗೆ ಪ್ರಧಾನಿ  ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು. ದೇಶದ ಆರೋಗ್ಯ ಕ್ಷೇತ್ರದಲ್ಲೂ ಡಿಜಿಟಲೀಕರಣ ತರುವ, ಪ್ರತಿಯೊಬ್ಬ ನಾಗರಿಕರಿಗೂ ಡಿಜಿಟಲ್ ಆರೋಗ್ಯ ಕಾರ್ಡ್ ವಿತರಿಸುವ ಯೋಜನೆ ಇದಾಗಿದೆ. ಆರಂಭಿಕ ಹಂತದಲ್ಲಿ ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗಿದ್ದು ಕ್ರಮೇಣ ದೇಶ್ಯಾದ್ಯನ್ತ ವಿಸ್ತರಿಸಲಾಗುತ್ತದೆ. 

* ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನಗೆ ಪ್ರಧಾನಿ ಮೋದಿ ಚಾಲನೆ. 

* ಡಿಜಿಟಲ್ ಆರೋಗ್ಯ ಕಾರ್ಡ್ ವಿತರಿಸುವ ಈ ಯೋಜನೆ ದೇಶದಲ್ಲಿ ಅರೋಗ್ಯ ಸೇವೆಯನ್ನು ಒದಗಿಸುವ ಕಾರ್ಯದಲ್ಲಿ ಕ್ರಾಂತಿಕರಕ ಬದಲಾವಣೆ ತರಲಿದೆ. 

ಆಧಾರ್ ಮಾದರಿಯಲ್ಲೇ ಹೆಲ್ತ್ ಕಾರ್ಡ್. 

ರಾಷ್ಟ್ರೀಯ ಡಿಜಿಟಲ್ ಅರೋಗ್ಯ ಮಿಷನಗೆ ಮೋದಿ ಚಾಲನೆ, ಎಲ್ಲರಿಗೂ ಸಿಗಲಿದೆ ವಯಕ್ತಿಕ ಆರೋಗ್ಯ ದಾಖಲೆ. 


             ದೇಶದ ಪ್ರತಿಯೊಬ್ಬ ನಾಗರಿಕರಿಗೂ. ಅವರ ಆರೋಗ್ಯದ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ಡಿಜಿಟಲ್ ಕಾರ್ಡ್ ವಿತರಿಸುವ 'ಪ್ರಧಾನಮಂತ್ರಿ- ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್' ಯೋಜನೆಗ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದ್ದು.  "ಇದು ದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ" ಎಂದು ಹೇಳಿದ್ದಾರೆ. 

whatss


                   ವಿಡಿಯೋ ಕಾಂಫಿರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು. "ಅರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ತರವುದೆಸೆಯಲ್ಲಿ ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆ ಜಾರಿಗೆ ತಂದಿದೆ. ಜನರು ಉತ್ತಮ ಜೀವನ ಸಾಗಿಸಬಹುದು. ಗುಣಮಟ್ಟದ ಚಿಕಿತ್ಸೆ ಪಡೆಯಬಹುದು. ಚಿಕಿತ್ಸೆಯ ವೆಚ್ಚ ತಗ್ಗಿಸಲು ಡಿಜಿಟಲ್  ಕಾರ್ಡ್  ನೆರವಾಗಲಿದೆ." ಎಂದು ತಿಳಿಸಿದ್ದಾರೆ.



                    "ಎಲ್ಲರ ಆರೋಗ್ಯ ಮಾಹಿತಿ ಗೌಪ್ತವಾಗಿಡಲು ಸಹ ತೆಗೆದುಕೊಳ್ಳಲಾಗುತ್ತದೆ. ಬಡವರ ಹಾಗು ಮಾಧ್ಯಮ ವರ್ಗದವರು ಯೋಜನೆಯ ಗರಿಷ್ಠ ಲಾಭ ಪಡೆಯಲಿದ್ದಾರೆ." ಎಂದು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ನರೇಂದ್ರ ಮೋದಿ ಅವರು ಯೋಜನೆ ಜರಿ ಕುರಿತು ಘೋಷಣೆ ಮಾಡಿದ್ದರು. ಮೋದಲ ಹಂತದಲ್ಲಿ ಆರು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಯಾಗಿದ್ದ ಯೋಜನೆ ಈಗ ದೇಶ್ಯಾದ್ಯಾಂತ ಜಾರಿಗೊಳ್ಳಲಿದೆ. 

* ಡಿಜಿಟಲ್ ಹೆಲ್ತ್ ಕಾರ್ಡ್ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಯಾವುದೇ ವ್ಯಕ್ತಿಯ ಆರೋಗ್ಯ ಮಾಹಿತಿ ತೋರಿಕೆಯಾಗದಂತೆ ಎಚ್ಚರ ವಹಿಸಲಾಗುತ್ತದೆ. 

ಆಧಾರ್ ಕಾರ್ಡ್ ಕಡ್ಡಾಯವಲ್ಲ :

                ಮೊಬೈಲ್ ಸಂಖ್ಯೆ ಮೂಲಕ  ನೋಂದಣಿ ಮಾಡಿಕೊಳ್ಳುವವರಹೆಸರು, ಜನಿಸಿದ ವರ್ಷ, ಲಿಂಗ್, ವಿಲಾಸ, ಹಾಗು ಮೊಬೈಲ್ ಸಂಖ್ಯೆ ನಮೂದಿಸಬೇಕ. ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ನೋಂದಾಯಿಸಿಕೊಳ್ಳುವವರು ಹೆಸರು, ಜನಿಸಿದ ವರ್ಷ, ವಿಳಾಸ ಹಾಗು ಆಧಾರ್ ಸಂಖ್ಯೆ ನೀಡಬೇಕು ನೋಂದಣಿ ಮಾಡಿಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಭೌತಿಕ ದಾಖಲೆಯನ್ನು ಸಲ್ಲಿಸಬೇಕಿಲ್ಲ ಹಾಗೆಯೆ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. 

ಹೆಲ್ತ್ ಕಾರ್ಡ್ ನಿಂದ ಆಗುವ ಪ್ರಯೋಜನಗಳು :

                ವ್ಯಕ್ತಿಯು ಪ್ರತಿಸಲ ಆಸ್ಪತ್ರೆಗೆ ಹೋಗುವಾಗಲೂ ತನ್ನ ವೈದ್ಯಕೀಯ ವರದಿಗಳನ್ನು ತೆಗೆದುಕೊಂಡು ಹೋಗುವುದು ತಪ್ಪಲಿದೆ. ಸರ್ವ ಜನಿಕ ಆರೋಗ್ಯ ವ್ಯವಸ್ಥೆಯು ನಿಯಮಿತವಾಗಿ ಪರಿಶೀಲನೆ ನಡೆಸುವದರಿಂದ, ಯಾವ ವ್ಯಕ್ತಿಗೆ ಯಾವ ಸಂದರ್ಭದಲ್ಲಿ ಅರೋಗ್ಯ ತಪಾಸಣೆ ಅಗತ್ಯವಿದೆ ಎನ್ನುವುದನ್ನು ತಿಳಿಸುತ್ತದೆ. ಆರೋಗ್ಯ ಸೇವೆಗೆ ಸಂಭಂದಿಸಿದ ನೀತಿ-ನಿರೂಪಣೆ ಯಲ್ಲಿಯೂ ಇದರ ಅಂಕಿ-ಇಂಕ, ಮಾಹಿತಿಗಳು ನೆರವಾಗಿತ್ತವೆ. ಭಾವಿಷ್ಯದ್ಲಿ ದೇಶದಲ್ಲಿನ ಅರೋಗ್ಯ ಸೇವೆಗಲ ವೆಚ್ಚ ಗಣನೀಯವಾಗಿ ಕಡಿಮೆಯಾಗಲದೆ. ಮತ್ತು ಪ್ರತಿ ವ್ಯಕ್ತಿಗೂ ಗುಣಮಟ್ಟದ ಅರೋಗ್ಯ ಸೇವೆ ಸಿಗಲಿದೆ ಎನ್ನುವುದು ಕೇಂದ್ರ ಸರ್ಕಾರದ ಆಶಯವಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ :

* 90 ಕೋಟಿಗು ಅಧಿಕ ಲಸಿಕೆ 

                        ದೇಶ್ಯಾದ್ಯಂತ ಇದುವರೆಗೆ ಕೋ-ವಿನ್ ವೇದಿಕೆಯ ಮೂಲಕ ನೋಂದಣಿ ಮಾಡಿಕೊಂಡು ಲಸಿಕೆ ವಿತರಣೆ ಅಭಿಯಾನ ಸಾಕಷ್ಟು ಪ್ರಗತಿ ಸಾಧಿಸಿದೆ. ಇದುವರೆಗೆ 90 ಕೋಟಿಗು ಅಧಿಕ ಜನರಿಗೆ ಲಸಿಕೆ ವಿತರಿಸುವುದು ದಾಖಲೆ ಇದೆ. ಅಂತರ್ಗತ ಆರೋಗ್ಯ ಮೂಲಸೌಕರ್ಯ ಧನಾತ್ಮಕ ಪರಿಣಾಮ ಉಂಟುಮಾಡುತ್ತದೆ.ಇದು ಪ್ರವಾಸೋದ್ಯಮದ ಮೇಲು ಧನಾತ್ಮಕ ಪರಿಣಾಮ ಉಂಟುಮಾಡುತ್ತದೆ. ಹೆಚ್ಚು ಹೆಚ್ಚು ಲಸಿಕೆ ಅಂದರೆ ಹೆಚ್ಚು ಪ್ರವಾಸಿಗರು ಎಂದೇ ತಿಳಿದುಕೊಳ್ಳಬೇಕು. ವಿಶ್ವ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ ಕೋ-ವಿನ್ ವೇದಿಕೆ ಮೂಲಕ ಆಗುತ್ತಿರುವ ಕ್ರಾಂತಿಯನ್ನು ಪ್ರಧಾನಿ ಸ್ಮರಿಸಿಕೊಟ್ಟರು. 

ಎಬಿಡಿಎಂ ನ ಪ್ರಮುಖ ಮೂರೂ ಘಟಕಗಳು :

*  ಹೆಲ್ತ್ ಐಡಿ- ಪ್ರೆಅತಿಯೋಬ್ಬ ಭಾರತೀಯನಿಗೂ ಡಿಜಿಟಲ್ ಹೆಲ್ತ್ ಐಡಿ ಸಿಗಲಿದೆ. ಇದು ಅವರ ಆರೋಗ್ಯದ ಖಾತೆ ಆಗಿರಲಿದೆ. ಮೊಬೈಲ್ ಆಪ್ ಮೂಲಕ ಅವರ ಆರೋಗ್ಯ ದಾಖಲೆಗಳು ಈ ಐಡಿ ಮೂಲಕ ಎಲ್ಲಿದ್ದರು ಲಭ್ಯವಾಗಲಿದೆ. 

* ಹೆಲ್ತ್ ಕೇರ್ ಪ್ರೊಫೆಶನಲ್ಸ್ ರಿಜಿಸ್ಟ್ರಿ- ಆರೋಗ್ಯ ಕ್ಷೇತ್ರದ ವೃತ್ತಿಪರರ ರಿಜಿಸ್ಟ್ರಿ ಇದಾಗಿದ್ದು, ಎಲ್ಲರ ವಿವರಗಳು ಇದರಲ್ಲಿ ಸಿಗಲಿದೆ. ಇದು ಡಿಜಿಟಲ್ ಆರೋಗ್ಯ ಮೂಲಸೌಕರ್ಯದ ಬಲವನ್ನು ವೃದ್ಧಿಸಲಿದೆ. 

* ಹೆಲ್ತ್ ಕೇರ್ ಫೆಸಿಲಿಟೀಸ್ ರಿಜಿಸ್ಟ್ರಿಸ್- ಆರೋಗ್ಯ ಕ್ಷೇತ್ರದ ಎಲ್ಲ ಆರೋಗ್ಯ ಸೆವೇ ಪೂರೈಕೆದಾರರ ಸೌಲಭಗಳ ದಾಖಲೆ ಇದು. ಈ ರಿಜಿಸ್ಟ್ರಿಸ್ ನಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ವೈದ್ಯ ವ್ಯವಸ್ಥೆಗಳು ಇರಲಿಲೈವೇ 

ಪ್ರಧಾನ ಮಂತ್ರಿ ಹೇಳಿದ್ದೇನು ?

* ಭಾರತದ ಡಿಜಿಟಲ್ ಹೆಲ್ತ್ ವ್ಯವಸ್ಥೆಯಲ್ಲಿ ಆಯುಷ್ಮನ್ ಭರತ್ ಡಿಜಿಟಲ್ ಮಿಷನ್ ಪ್ರಮುಖ ಪಾತ್ರ ವಹಿಸಲಿದೆ. ಪ್ರತಿಯೊಬ್ಬ ಭಾರತೀಯನಿಗೂ ಡಿಜಿಟಲ್ ಐಡಿ ಸಿಗಲಿದೆ. 

* ಯುನಿಫೈಡ್ ಪೇಮೆಂಟ್ಸ್ ಇಂಟೆರ್ ಫೇಸ್ ಮಾಡಿದ ರೀತಿಯ ಕ್ರಾಂತಿಯನ್ನು ಎಬಿಡಿಎಂ ಕೂಡ ಮಾಡಲಿದೆ. 

* ಪೌರರು ತಮ್ಮ ಬಿರಳ ತುದಿಯಿಂದ ಒಂದು ಕ್ಲಿಕ್ ಮಾಡಿದರೆ ಸಾಕು ಆರೋಗ್ಯ ಸೇವೆ, ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. 

* ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲಷ್ಟೇ ಅಲ್ಲ, ಅನಾರೋಗ್ಯ ತಡೆಯುದಕ್ಕೂ ಈ ದಾಖಲೆಗಳು ನೆರವು ನಿದಲಿವೆ. 

* ದೇಶ್ಯಾದ್ಯಂತ ಡಿಜಿಟಲ್ ಹೆಲ್ತ್ ಸಲುಷನ್ಸ್  ಅನ್ನು ಜೋಡಿಸುವ ಕೆಲಸವನ್ನು ಎಬಿಡಿಎಂ ಮಾಡಲಿದೆ. ಡಿಜಿಟೈಸೇಶನ್ ಮೂಲಕ ಹೆಲ್ತ್ ಕೇರ್, ಸುಲಭ ಸರಳವಾಗಲಿದೆ.

* ಎಲ್ಲ ಭಾರತೀಯರಿಗೂ ಡಿಜಿಟಲ್ ಹೆಲ್ತ್ ಐಡಿ ಸಿಗಲಿದ್ದು, ಅದರ ಮೂಲಕ   ಅವರ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ಆಗಿ ಸುರಕ್ಷಿತವಾಗಿರಿಸಿಕೊಳ್ಳಬಹುದು. 

* ಹೆಲ್ತ್ ಐಡಿ ಬಳಸಿಕೊಂಡು ಪ್ರತಿ ಪೌರನೂ ಆರೋಗ್ಯ ಖಾತೆಗೆ ಲಾಗಿನ್ ಆಗಿ ಅವರ ವಯಕ್ತಿಕ ಆರೋಗ್ಯ ದಾಖಲೆಗಳನ್ನು ಮೊಬೈಲ್ ಆಪ್ ಮೂಲಕವೇ ವೀಕ್ಷಿಸಬಹುದು, ಪರಿಶೀಲಿಸಬಹುದು. 

* ಬಡ ಮತ್ತು ಮಧ್ಯ ವರ್ಗದಲ್ಲಿ ವೈದ್ಯ ಚಿಕಿತ್ಸೆ ಪಡೆಯುವಲ್ಲಿ ಇರುವ ಸಮಸ್ಯೆ ನಿವಾರಣೆ ಮಾಡುವಲ್ಲಿ ಎಬಿಡಿಎಂ ಮಹತ್ವದ ಪಾತ್ರ ನಿರ್ವಹುಸಲಿದೆ. 


 

* ಮೂರೂ ವರ್ಷ ಹಿಂದೆ ಪಂಡಿತ್ ದಿನದಯಾಳ ಉಪಾಧ್ಯೆಯರ ಜಯಂತಿ ಸಂದರ್ಭದಲ್ಲಿ ಆಯುಷ್ಮನ್ ಭಾರತ್ ಯೋಜನೆ ಜಾರಿಗೊಂಡಿತ್ತು. ಆದಾಗಿ ಮೂರನೇ ವರ್ಷಕ್ಕೆ ಯೋಜನೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಎಬಿಡಿಎಂ ಗೆ ಚಾಲನೆ ನೀಡಿರುವುದು ಖುಷಿಯ ವಿಚಾರ. 

* 130 ಕೋಟಿ ಆಧಾರ್  ಐಡಿ,118 ಕೋಟಿ ಮೊಬೈಲ್ ಚಂದಾದಾರರು, 80 ಕೋಟಿ ಇಂಟರ್ ನೆಟ್ ಬಳಕೆದಾರರು, 43 ಕೋಟಿ ಜನಧನ ಬ್ಯಾಂಕ್ ಖಾತೆ - ಈ ರೀತಿಯಾಗಿ ಬೃಹತ್ ಪರಸ್ಪರ ಜೋಡಿಕೊಂಡಿರುವ ಮೂಲಸೌಕರ್ಯ ಜಗತ್ತಿನ ಯಾವುದೇ ದೇಶದಲ್ಲೂ ಇಲ್ಲ. 

* ಈ ಡಿಜಿಟಲ್ ಮೂಲಸೌಕರ್ಯವು  ರೇಷನ್ ನಿಂದ ಪ್ರಾಶಸನದ ತನಕ  ಉಪಯುಕ್ತವಾಗಿದೆ. ಪಾರದರ್ಶಕವಾಗಿ ಪ್ರತಿ ಭಾರತೀಯನನ್ನು ಸರ್ಕಾರ ತಲುಪುವಲ್ಲಿ ನೆರವು ನೀಡಿದೆ. 

ಪ್ರತಿ ಪ್ರಜೆಗೂ  ಆರೋಗ್ಯ ಕಾರ್ಡ್ :

                ನವದೆಹಲಿ : ದೇಶದ ಪ್ರತಿ ಪ್ತಜೆಗು ಅವರ ಆರೋಗ್ಯದ ಸಂಪೂರ್ಣಮಾಹಿತಿ ಒಳಗೊಂಡ  ಡಿಜಿಟಲ್ ಕಾರ್ಡ್ ವಿತರಿಸುವ " ಪ್ರಧಾನ ಮಂತ್ರಿ ಡಿಜಿಟಲ್ ಹೆಲ್ತ್ ಮಿಷನ್" ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೆ 27  ರಂದು ಚಾಲನೆ ನೀಡಲಿದ್ದಾರೆ. ಪ್ರಾಯೋಗಿಕವಾಗಿ ಹಲವು ರಾಜ್ಯಗಳಲ್ಲಿ ಜಾರಿಗೆ ತರಲಾಗಿದ್ದ ಯೋಜನೆಯನ್ನು ಪ್ರಧಾನಿ  ಸೆ 27 ರಂದುಇಡೀದೇಶ್ಯಾದ್ಯಂತ ವಿಸ್ತರಣೆ ಮಾಡಲಿದ್ದಾರೆ. ದೇಶದ ಪ್ರತಿ ಪ್ರಜೆಗೂ ಗುಣಮಟ್ಟದ ಸೂಲಲಿತ, ಸಮಗ್ರ  ಅಗ್ಗದ ಮತ್ತು ಸುರಕ್ಷಿತ್ ಆರೋಗ್ಯ ಸೇವೆ ಒದಗಿಸುವ ಉದ್ದೇಶವನ್ನು ಹೊಂದಿದೆ.

3 ವೇದಿಕೆ :

ಹೊಸ ಯೋಜನೆಯ ಮುಖ್ಯವಾಗಿ ಮೂರೂ ವೇದಿಕೆಗಳಡಿ ಕಾರ್ಯನೀರ್ವಹಿಸುತ್ತದೆ. 
* ಆರೋಗ್ಯದ ಐಡಿ , 
* ವೈದ್ಯರ ರಿಜಿಸ್ಟ್ರಿ 
* ಆರೋಗ್ಯ ಸೌಕಾರಿಗಳ ರಿಜಿಸ್ಟ್ರಿ.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು