ರಾಷ್ಟ್ರೀಯ ಯುವ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಅಹ್ವಾನ

ರಾಷ್ಟ್ರೀಯ ಯುವ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಅಹ್ವಾನ 

ಮುಧೋಳ ತಾಲೂಕಿನ ಮೊದಲ ರೈಲು ನಿಲ್ದಾಣಕ್ಕೆ ಕ್ಷಣಗಣನೆ




ಹಾವೇರಿ ನೆಹರು ಯುವ ಕೇಂದ್ರದಿಂದ ಜಿಲ್ಲೆಯ ೮ ತಾಲೂಕಿಗೆ ತಲಾ ಇಬ್ಬರಂತೆ ರಾಷ್ಟ್ರೀಯ ಯುವ ಕಾರ್ಯಕರ್ತರ ಹುದ್ದೆಗೆ ಒಂದು ವರ್ಷದ ಅವಧಿಗೆ ತಾತ್ಕಾಲಿಕ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು SSLC ಪಾಸಾಗಿರಬೇಕು. ಹಾಗೂ ದಿನಾಂಕ 01-04-2023 ಕ್ಕೆ ೧೮ ವರ್ಷ ಆಗಿರಬೇಕು. ದಿನಾಂಕ 01-04-2023 ಕ್ಕೆ ೨೯ ವರ್ಷದ ಒಳಗಿನವರಾಗಿರಬೇಕು. (ಅಂದರೆ 01-04-1994) ರ ಒಳಗೆ ಹುಟ್ಟಿದವರಾಗಿರಬೇಕು). ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ 5000/- ಗೌರವಧನವನ್ನು ನೀಡಲಾಗುವುದು

 .ಹಾಗು ಗ್ರಾಮೀಣ ಯುವಕ/ಯುವತಿ ಹಾಗೂ ಮಹಿಳಾ ಮಂಡಳಗಳನ್ನು ಅಭಿವೃದ್ಧಿಪಡಿಸುವುದಾಗಿದೆ. ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳನ್ನು ಸಂಚೇತನಗೊಳಿಸುವುದು, ಯುವ ಮಂಡಳಗಳ ನೋಂದಣಿ, ಸದಸ್ಯತ್ವ, ಅರೋಗ್ಯ, ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮ, ಶ್ರಮಧಾನ, ಕ್ರೀಡೆ, ಸಾಹಸ, ಸ್ವಚ್ಛತೆ, ಸಾಮಾಜಿಕ ಸಮಸ್ಯೆಗಳು, ಆಡಳಿತ ವ್ಯವಸ್ಥೆಯಲ್ಲಿ ಸಹಾಯಕವಾಗಿ ಕೆಲಸ ನಿರ್ವಹಣೆ, ಶಿಬಿರಗಳನ್ನು ನಡೆಸುವುದು ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮ ನಿರ್ವಹಣೆ ಮಾಡುವುದು. ಶಿಸ್ತಿನಿಂದ ಕೂಡಿದ ಅರ್ಪಣಾ ಮನೋಭಾವದ ಯುವ ಸ್ವಯಂ ಸೇವಕರು ಅರೋಗ್ಯ, ಸಾಕ್ಷರತೆ, ನೈರ್ಮಲ್ಯ, ಯುವ/ಯುವತಿ/ಮಹಿಳಾ ಮಂಡಳ ರಚನೆ, ಯುವ ಕಾರ್ಯಕ್ರಮಗಳು ಹಾಗೂ ಲಿಂಗ ಮತ್ತಿತರ ಸಾಮಾಜಿಕ ವಿಷಯಗಳ ಬಗ್ಗೆ ಪ್ರಚಾರ ಮಾಡುವ ಕೆಲಸ.ಇರುತ್ತದೆ  ಈ ಕೆಲಸ ಮಾಡಲು ಇಚ್ಛೆಯುಳ್ಳ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ವೆಬ್ಸೈಟ್ ಮೂಲಕ ದಿನಾಂಕ 09-03-2023 ರೊಳಗೆ ಅರ್ಜಿ ಸಲ್ಲಿಸಬೇಕು. 

ಮಾರ್ಚ್.6 ರಂದು ಅಸಾಂಕ್ರಾಮಿಕ ರೋಗಗಳ ಕುರಿತು ಸೈಕಲ್ ಜಾಥಾ ಜಾಗೃತಿ ಕಾರ್ಯಕ್ರಮ.





ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು