ಆಟೋ ಚಾಲಕರ ಗಮನಕ್ಕೆ :

ಆಟೋ ಚಾಲಕರ ಗಮನಕ್ಕೆ : 






             ರಾಜ್ಯದ ಎಲ್ಲಾ ಯಲ್ಲೋ ಬೋರ್ಡ್ ಉಳ್ಳ ಟ್ಯಾಕ್ಸಿ ಚಾಲಕರ ಮತ್ತು ಆಟೋ ರಿಕ್ಷಾ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆಯನ್ನು ಸರ್ಕಾರವು ಪ್ರಾರಂಭಿಸಿದೆ. ಈ ಯೋಜನೆಯನ್ನು ಆನ್ಲೈನ್ ದ ಸೇವಾ ಸಿಂಧು ವೆಬ್ ಪೋರ್ಟಲ್ ನ ಮೂಲಕ ಗ್ರಾಮ ಒನ್, ಕರ್ನಾಟಕ ಒನ್, ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಚಾಲಕರು/ಪೋಷಕರ ಚಲನ ಅನುಜ್ಞಾ ಪತ್ರ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ವಿದ್ಯಾರ್ಥಿಯ ಆಧಾರ್ ಸಂಖ್ಯೆಯೊಂದಿಗೆ ವೆಬ್ ಸೈಟ್ ವಿಳಾಸ https://sevasindhu.karnataka.gov.in/sevasindhu/kannada ದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.


ವಿದ್ಯಾರ್ಥಿವೇತನ ಪೋರ್ಟಲ್ ನಲ್ಲಿ ಕೋರಿ ಬಂದ ಅರ್ಜಿಗಳು ಆಧಾರ್ ಜೋಡಿತ ಬ್ಯಾಂಕ್ ಖಾತೆಗಳಿಗೆ ನೇರವಾಗಿ, ನಗದು ವರ್ಗಾವಣೆ ಪದ್ಧತಿ ಮೂಲಕ ಬಿಡುಗಡೆಯಾಗಿರುವ ಅನುದಾನವನ್ನು ಉಪಯೋಗಿಸಿಕೊಂಡು ಪಾವತಿಯಾಗುವ ಪದ್ಧತಿಯನ್ನೊಳಗೊಂಡಿರುತ್ತದೆ. ವಿದ್ಯಾನಿಧಿ ಯೋಜನೆಯ ಲಾಭವನ್ನು ನಗರದಲ್ಲಿನ ಯಲ್ಲೋ ಬೋರ್ಡ್ ಉಳ್ಳ ಟ್ಯಾಕ್ಸಿ ಚಾಲಕರುಗಳು ಮತ್ತು ಆಟೋ ರಿಕ್ಷಾ ಚಾಲಕರುಗಳಿಗೆ ಪಡೆಯಬೇಕೆಂದು ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು