ಕಾರ್ಮಿಕ ಕಾರ್ಡ್ ಪಿಂಚಣಿ ಸೌಲಭ್ಯ :
ಕುಟುಂಬ ಪಿಂಚಣಿ ಸೌಲಭ್ಯ ನಿಯಮ 39ಎ
ಕಾರ್ಮಿಕ ಕಾರ್ಡ್ ಹೊಂದಿರುವಿರಾ ? ಹಾಗಿದ್ರೆ ಇಲ್ಲಿದೆ ಪಿಂಚಣಿ ಸೌಲಭ್ಯ ಈ ಲೇಖನದಲ್ಲಿ ನಿಯಮ 39 ಪಿಂಚಣಿ ಸೌಲಭ್ಯಕ್ಕೆ ಬೇಕಾಗುವ ಅರ್ಹತೆಗಳು , ಅರ್ಜಿ ಸಲ್ಲಿಸುವ ವಿಧಾನ, ಅವಶ್ಯಕ ದಾಖಲೆಗಳು, ಅನ್ವಯಿಸುವ ವಿಧಾನ ಪ್ರತಿಯೊಂದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ. ಹಾಗಿದ್ದಲ್ಲಿ ಕೂಡಲೇ ಅರ್ಜಿ ಸಲ್ಲಿಸಿ. ಪಿಂಚಣಿಗೆ ಅರ್ಹರಾದ ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯ KBOCWWB ತಂತ್ರಾಂಶದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :
1. ಪ್ರತಿ ನೋಂದಾಯಿತ ಕಟ್ಟಡ / ಇತರೆ ನಿರ್ಮಾಣ ಕಾರ್ಮಿಕ ಫಲಾನುಭವಿಯು ೬೦ ವರ್ಷ ವಯೋಮಿತಿ ಪೂರ್ಣಗೊಳಿಸಿರಬೇಕು.
2. ನೋಂದಾಯಿತ ಕಟ್ಟಡ ಕಾರ್ಮಿಕ 60 ವಯಸ್ಸು ಪೂರ್ಣಗೊಳ್ಳುವ ಪೂರ್ವದಲ್ಲಿ ಕನಿಷ್ಠ 03 ವರ್ಷಗಳು ನಿರಂತವಾಗಿ ಮಂಡಳಿಯ ಫಲಾನುಭವಿಯಾಗಿ ಮುಂದುವರೆದಿರಬೇಕು.
3. ಫಲಾನುಭವಿಯು ಸಲ್ಲಿಸಿದ ಪಿಂಚಣಿ ಅರ್ಜಿಯ ಪರಿಶೀಲನಾ ಸಂದರ್ಭದಲ್ಲಿ ಅರ್ಜಿಯು ಅನರ್ಹ ಎಂದು ಕಂಡು ಬಂದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವದು.
4. ಪಿಂಚಣಿದಾರ ಮರಣ ಹೊಂದಿದಾಗ, ಅವರ ಕಾನೂನು ಬದ್ಧ ಅವಲಂಬಿತರು / ಉತ್ತರಾಧಿಕಾರಿಗಳು ಪಿಂಚಣಿದಾರರ ಮರಣ ಪ್ರಮಾಣಪತ್ರವನ್ನು ಸಲ್ಲಿಸಿ ಬ್ಯಾಂಕ್ ಖಾತೆಯನ್ನು ಮುಚ್ಚಲು ಮಂಡಳಿಗೆ ತಿಳಿಸಬೇಕು.
5. ಪಿಂಚಣಿಯ ಮೊತ್ತವು ಮಾಸಿಕ ರೂ 3000/- ಗಳನ್ನು (ಸರ್ಕಾರದ ಅಧಿಸೂಚನೆ ಸಂಖ್ಯೆ LD 458 LET 2021 ಬೆಂಗಳೂರು ದಿನಾಂಕ : 08-08-2022 ರಂತೆ) ಮಿರತಕ್ಕದಲ್ಲ ಮತ್ತು ಫಲಾನುಭವಿಯು ಸರ್ಕಾರದ ಇತರೆ ಯೋಜನೆಯಡಿ ಇದೆ ತರಹದ ಯಾವುದೇ ಸೌಲಭ್ಯವನ್ನು ಪಡೆದಿರಬಾರದು.
6. ನೋಂದಾಯಿತ ಫಲಾನುಭವಿಯು ಪಿಂಚಣಿಯನ್ನು ಮುಂದುವರಿಸಲು ಪ್ರತಿ ವರ್ಷವೂ ಜೀವಿತ ಪ್ರಮಾಣ ಪತ್ರ ನಮುನೆ 14-A ಅನ್ನು ಮಂಡಳಿಯ ತಂತ್ರಾಂಶದಲ್ಲಿ ಮಂಜೂರಾತಿ ಅಧಿಕಾರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
❋ ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
❋ ಉದ್ಯೋಗದ ದೃಢೀಕರಣ ಪತ್ರ
❋ ಜೀವಿತ ಪ್ರಮಾಣ ಪತ್ರ
❋ ರೇಷನ್ ಕಾರ್ಡ್ ಪ್ರತೀ
❋ ಫಲಾನುಭವಿಯ ಬ್ಯಾಂಕ್ ಪಾಸ್ ಬುಕ್
❋ ಪಾಸ್ಪೋರ್ಟ್ ಅಳತೆಯ ಫೋಟೋ
ಕುಟುಂಬ ಪಿಂಚಣಿ ಸೌಲಭ್ಯ ನಿಯಮ 39ಎ
ಅರ್ಹತೆ :
1. ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿ ರವರು ಕುಟುಂಬ ಪಿಂಚಣಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
2. ಉಪನಿಯಮ (1) ರಂತೆ ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿಯ ನಮುನೆ -12 (ಬಿ) ರಲ್ಲಿ ಮಂಡಳಿಗೆ ಅರ್ಜಿ ಸಲ್ಲಿಸಬೇಕು.
3. ಉಪನಿಯಮ (2) ರಂತೆ ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿ ಅರ್ಜಿಯೊಂದಿಗೆ ಈ ಕೆಳಕಂಡ ದಾಖಲಾತಿಗಳನ್ನು ಸಲ್ಲಿಸುವುದು.
4. ಮಂಡಳಿಯು ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿ ಪಿಂಚಣಿ ಕೋರಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ನಂತರ ಅರ್ಜಿದಾರರಿಗೆ ಕುಟುಂಬ ಪಿಂಚಣಿ ಮಂಜೂರಾತಿ ಆದೇಶದ ಜೊತೆಗೆ ವಿದ್ಯುನ್ಮಣಿಕೃತ ವಿಶಿಷ್ಟ ಪಿಂಚಣಿ ಗುರುತಿನ ಚೀಟಿ ಮತ್ತು ಸಂಖ್ಯೆಯನ್ನು ನೀಡಬೇಕು.
ಕುಟುಂಬ ಪಿಂಚಣಿ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು :
👉 ಪಿಂಚಣಿ ಪಡೆಯುತ್ತಿದ್ದ ಮೃತ ನೋಂದಾಯಿತ ಕಾರ್ಮಿಕನ ಮರಣ ಪ್ರಮಾಣ ಪತ್ರ
👉ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿ ಎಂದು 👉 ದೃಢೀಕರಿಸಲು ಕಂದಾಯ ಇಲಾಖೆಯಿಂದ ಪಡೆದ ಪ್ರಮಾಣ ಪತ್ರ
👉 ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್
👉 ಅರ್ಜಿದಾರ ಇತ್ತೀಚಿನ ಭಾವಚಿತ್ರ
ಆತ್ಮೀಯ ಕಾರ್ಮಿಕರೇ ಈ ಎಲ್ಲ ಮಾಹಿತಿ ನಿಮಗೆ ಇಷ್ಟವಾದಲ್ಲಿ, ಹಾಗೂ ನೀವಿನ್ನು ಪಿಂಚಣಿ ಸೌಲಭ್ಯ ಹೊಂದಿಲ್ಲದಿದ್ದರೆ ಕೂಡಲೇ ಈ ನಂಬರ್ ಗೆ ಕರೆ ಮಾಡಿ ನಾವೇ ಅರ್ಜಿ ಸಲ್ಲಿಸಿಕೊಡುತ್ತೇವೆ.
ದೂರವಾಣಿ ಸಂಖ್ಯೆ ::: 8217716084, 7795063340
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Labour Card