ಕಾರ್ಮಿಕರಿಗೆ ಅಪಘಾತ ಪರಿಹಾರ

 ಕಾರ್ಮಿಕರಿಗೆ ಅಪಘಾತ ಪರಿಹಾರ 

 


ಅಪಘಾತ ಪರಿಹಾರ ನಿಯಮ 

ಅಪಘಾತ ಎಂದರೆ ಯಾವುದೇ ಅಪರಾಧ ಉದ್ದೇಶವಿಲ್ಲದೆ ಮತ್ತು ಅನಿರೀಕ್ಷಿತವಾಗಿ ನಡೆಯುವ ಘಟನೆಯಾಗಿದ್ದು, ಇದರಿಂದ ವ್ಯಕ್ತಿಗೆ ಸಂಭವಿಸಬಹುದಾದ ಮರಣ ಅಥವಾ ಶಾಶ್ವತ / ಭಾಗಶಃ ದುರ್ಬಲತೆ.

ಅಪಘಾತ ಪರಿಹಾರ ಪಡೆಯಲು ಬೇಕಾದ ಅರ್ಹತೆ :  

ನೋಂದಾಯಿತ ಕಟ್ಟಡ ಕಾರ್ಮಿಕನಿಗೆ ಕೆಲಸ ಮಾಡುವ ಸಮಯದಲ್ಲಿ ಅಪಘಾತವಾದಾಗ ಅವನಿಗೆ / ಅವಳಿಗೆ ಕಾರ್ಮಿಕರ ನಷ್ಟ ಪರಿಹಾರ ಖಾಯ್ದೆ, 1923 ರ ಪ್ರಾವಧಾನಗಳಡಿ ಸಂಸ್ಥೆಯ ನಿಯೋಜಕನು ಅಪಘಾತ ಪರಿಹಾರವನ್ನು ನೀಡಬೇಕಾಗುತ್ತದೆ. ಜೊತೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 106 ಎಲ್ ಇಟಿ 2019 ಬೆಂಗಳೂರು ದಿನಾಂಕ : 01-10-2019 ರಂತೆ ಮಂಡಳಿಯಿಂದ  2 ಲಕ್ಷ ರೂಪಾಯಿಗಳ ಪರಿಹಾರ ಸಹಾಯಧನ ನೀಡಲಾಗುತ್ತಿದೆ. ಆದರೆ, ಒಂದು ವೇಳೆ ಆತನ ಅವನ/ ಅವಳ ಉದ್ಯೋಗ ಸ್ಥಳದಿಂದ ಹೊರಗೆ ಅಪಘಾತ ಸಂಭವಿಸಿದರೆ, ಆ ಫಲಾನುಭವಿಗೆ ಮಂಡಳಿಯಿಂದ ಈ ನಿಯಮದಡಿಯಲ್ಲಿ ಅಪಘಾತ ಪರಿಹಾರ ಧನವನ್ನು ನೀಡಬೇಕಾಗುತ್ತದೆ.


ಆದರೆ, ಈ ಕೆಳಗಿನ ಪ್ರಕರಣಗಳಲ್ಲಿ ಅಪಘಾತ ಪರಿಹಾರ ಸಹಾಯಧನವನ್ನು ನೀಡಲಾಗುವುದಿಲ್ಲ.

➨ ಸಹಜ ಮರಣ 
➨ ಆತ್ಮಹತ್ಯೆ / ಉದ್ದೇಶ ಪೂರ್ವಕ ವ್ಯಯಕ್ತಿಕ ಹಾನಿಮಾಡಿಕೊಳ್ಳುವುದು.
➨ ಮಾದಕ ದ್ರವ್ಯ ಮತ್ತು ಔಷಧಿಗಳಿಂದ ಸಂಭವಿಸುವ ಮರಣ.
➨ ಕ್ರಿಮಿನಲ್ ಉದ್ದೇಶದಿಂದ ಕಾನೂನಿನ ಉಲ್ಲಂಘನೆ ಮಾಡಿ ಸಂಭವಿಸುವ ಸಾವು.
➨ ಗರ್ಭಿಣಿ ಸಾವು, ಮಗುವಿನ ಜನದ ಸಮಯದ ಸಾವು, ಗರ್ಭಪಾತದ ಸಾವು ಮತ್ತು ಇದಕ್ಕೆ ಸಂಭವಿಸಿದ ಸಾವು.
➨  ಚಿಕಿತ್ಸಕ ಚಿಕಿತ್ಸೆಗಳು ಅಥವಾ ಮಧ್ಯಸ್ಥಿಕೆಗಳು 
➨  ಲೈಂಗಿಕವಾಗಿ ಹರಡುವ ರೋಗಗಳು 
➨  ದೈಹಿಕವಾಗಿ ದಂಡಿಸಿಕೊಳ್ಳುವ ಅಪರಾಧಿ ಪ್ರಯತ್ನದ ಸಾವು.

ಕ್ಲೈಮ್:  

ಉಪ ನಿಯಮ 2 ರ ಅಡಿಯಲ್ಲಿ ಅಪಘಾತದ ಪರಿಹಾರಕ್ಕಾಗಿ ಅರ್ಹ ನೊಂದಾಯಿತ ಕಟ್ಟಡ ಕಾರ್ಮಿಕ ಅಥವಾ ಅವನ/ ಅವಳ ಮೊದಲ ನಾಮ ನಿರ್ದೇಶಿತರು ಸರ್ಕಾರದ ಆಸ್ಪತ್ರೆಯ ವೈದ್ಯರು ಅಥವಾ ಮಾನ್ಯತೆ ಪಡೆದ ನೋಂದಾಯಿತ ವೈದ್ಯರಿಂದ ದುರ್ಬಲತೆಯ ಶೇಕಡಾವಾರು ಪ್ರಮಾಣಕ್ಕೆ ಅನುಗುಣವಾಗಿ ಪ್ರಮಾಣ ಪತ್ರವನ್ನು ಮತ್ತು ಅಪಘಾತವಾಗಿರುವ ಕುರಿತು ನಿಯೋಜಕನು ನೀಡುವ ನಮುನೆ XXI-A ಜೊತೆಗೆ ಪ್ರಥಮ ವರ್ತಮಾನ ವರದಿ, ಮರಣೋತ್ತರ ಪರೀಕ್ಷಾ ವರದಿಗಳನ್ನು ನಮುನೆ  XXI ರಲ್ಲಿ ಅಡಕಗೊಳಿಸಿ ಮಂಡಳಿಯ ಅಧಿಕೃತ ಅಧಿಕಾರಿಗೆ ಸಲ್ಲಿಸಬೇಕಾಗುತ್ತದೆ.

ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ನಿರ್ಮಾಣ ಕಾರ್ಮಿಕನು/ಳು ಸಲ್ಲಿಸುವ ದಾಖಲೆಗಳು ನಿಯಮದ ಪ್ರಾವಧಾನಗಳನ್ನು ಪೂರೈಸಿದೆ ಎಂದು ಗಮನಕ್ಕೆ ಒಡಗಿಸಿ, ನಿಯಮಗಳ ಉಲ್ಲಂಘನೆ ಮಾಡಿದ್ದಲ್ಲಿ, ಅರ್ಜಿಯನ್ನು ತಿರಸ್ಕರಿಸಬೇಕಾಗುತ್ತದೆ.
ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ಫಲಾನುಭವಿಯ ಮೊದಲ ನಾಮ ನಿರ್ದೇಶಿತನಿಗೆ ರೂ. ೫ ಲಕ್ಷಗಳ ಪರಿಹಾರವನ್ನು ನೀಡಲಾಗುವುದು. ಇದರಲ್ಲಿ ಶೇ. ೫೦ ರಷ್ಟು ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ಮತ್ತು ಶೇ. ೫೦ ರಷ್ಟು ಹಣವನ್ನು ಫಲಾನುಭವಿಯು ನಾಮ ನಿರ್ದೇಶಿತರ ಬ್ಯಾಂಕ್ ಖಾತೆಗೆ  (DBT) ಮೂಲಕ ಜಮೆ ಮಾಡುವುದು. ಫಲಾನುಭವಿಯು ದುರ್ಬಲತೆಗೆ ಒಳಗಾದಾಗ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ ೧೯೨೩ ರ ಪ್ರಾವಧಾನಗಳಡಿ ವ್ಯಾಖ್ಯಾನಿಸಿರುವಂತೆ ದುರ್ಬಲತೆಯ ಪ್ರಮಾಣಕ್ಕೆ ಅನುಗುಣವಾಗಿ ಶಾಶ್ವತ ಪೂರ್ಣ ದುರ್ಬಲತೆಗೆ ರೂ. 2 ಲಕ್ಷಗಳ ಪರಿಹಾರ ಹಾಗೂ ಭಾಗಶಃ ಶಾಶ್ವತ ದುರ್ಬಲತೆಗೆ ರೂ. ೧ ಲಕ್ಷಗಳ ಸಹಾಯಧನವನ್ನು ಫಲಾನುಭವಿಗೆ ನೀಡುವುದು.



👉 ಮೇಲಿನ ಪರಿಹಾರ ಸಹಾಯಧನವನ್ನು ಪಡೆಯಲು ಮಂಡಳಿಯಯ ತಂತ್ರ್ಯಾಂಶದಿಂದ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.
👉 ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ.
👉 ಮರಣ ಪ್ರಮಾಣಪತ್ರ (ಅವಘಾತದಿಂದ ಮರಣ ಹೊಂದಿದ್ದಲ್ಲಿ)
👉 ಮರಣೋತ್ತರಾ ಪರೀಕ್ಷೆ ವರದಿ ನೀಡತಕ್ಕದ್ದು (ಅಪಘಾತದಿಂದ ಮರಣ ಹೊಂದಿದ್ದಲ್ಲಿ)
👉 ಎಫ್ ಐ ಆರ್ ಪ್ರತಿ ನೀಡತಕ್ಕದ್ದು.
👉 ನಮುನೆ ೨೧-ಎ ( ಈ ದಾಖಲಾತಿಯನ್ನು ಉದ್ಯೋಗದಾತರಿಂದ ಭರ್ತಿ ಮಾಡಿ ಮತ್ತು ಅಪ್ಲೋಡ್ ಮಾಡಬೇಕು.) ನೀಡತಕ್ಕದ್ದು.
👉 ಫಲಾನುಭವಿ ಮರಣ ಹೊಂದಿದ ಸಂದರ್ಭದಲ್ಲಿ ಫಲಾನುಭವಿಯ ನಾಮನಿರ್ದೇಶಿತರ (ನಾಮಿನಿ) ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿ ನೀಡತಕ್ಕದ್ದು.
👉 ಉದ್ಯೋಗದ ಧೃಡೀಕರಣ ಪತ್ರ ನೀಡತಕ್ಕದ್ದು.
👉 ವೈದ್ಯಕೀಯ ವರದಿ ನೀಡತಕ್ಕದ್ದು.(ಸಂಪೂರ್ಣ / ಭಾಗಶಃ ದುರ್ಬಲತೆಯ ಸಂಧರ್ಭದಲ್ಲಿ )
👉 ನಾಮನಿರ್ದೇಶಿತರ (ನಾಮಿನಿ) ಭಾವಚಿತ್ರವಿರುವ ಗುರುತು ಚೀಟಿಯ (ಯಾವದಾದರೊಂದು) ಛಾಯಾಚಿತ್ರ ನೀಡತಕ್ಕದು.
👉 ನಾಮನಿರ್ದೇಶಿತರ ನಮುನೆ ಮತ್ತು ವಂತಿಗೆ ಪ್ರಮಾಣಪತ್ರವನ್ನು ಹಿರಿಯ/ ಕಾರ್ಮಿಕ ನಿರೀಕ್ಷಕರಿಂದ ಸಲ್ಲಿಸುವುದು.
👉 ಅರ್ಜಿ ಪ್ರಕ್ರಿಯೆ ಮತ್ತು ಪರಿಶೀಲನೆ ( ಅಗತ್ಯವಿದ್ದಲ್ಲಿ ) ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ನಡೆಸಲಾಗುವುದು.
👉 ಸಹಾಯಕ ಕಾರ್ಮಿಕ ಆಯುಕ್ತರಿಂದ ಪರಿಶೀಲನೆ ಮತ್ತು ಅನುಮೋದನೆ 
👉ಫಲಾನುಭವಿ ಅಪಘಾತವಾದ ದಿನದಿಂದ ಒಂದು ವರ್ಷದೊಳಗೆ ಅರ್ಜಿಯನ್ನು ಸಲ್ಲಿಸುವುದು.


ಅನ್ವಯಿಸುವ ವಿಧಾನ :

1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು 
2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ 
3. ಸಹಾಯಕ ಕಾರ್ಮಿಕ ಆಯುಕ್ತರಿಂದ ಅನುಮೋದನೆ 


ಆತ್ಮೀಯ ಕಾರ್ಮಿಕರೇ ಈ ಎಲ್ಲ ಮಾಹಿತಿ ನಿಮಗೆ ಇಷ್ಟವಾದಲ್ಲಿ, ಹಾಗೂ ನೀವಿನ್ನು ಅಪಘಾತ ಪರಿಹಾರ ಧನದ ಸೌಲಭ್ಯ  ಹೊಂದಿಲ್ಲದಿದ್ದರೆ ಕೂಡಲೇ  ಈ ನಂಬರ್ ಗೆ ಕರೆ ಮಾಡಿ ಅರ್ಜಿ ಸಲ್ಲಿಸಿಕೊಡುತ್ತೇವೆ.

ದೂರವಾಣಿ ಸಂಖ್ಯೆ ::: 8217716084, 7795063340

 ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







 



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು