ಕಾರ್ಮಿಕ ಕಾರ್ಡ್: ತಾಯಿ ಲಕ್ಷ್ಮೀ ಬಾಂಡ್ ಹೆರಿಗೆ ಸೌಲಭ್ಯ
ಇ-ಮುದ್ರಾ ಸಾಲ ಯೋಜನೆ 2023:
ಹೆಣ್ಣು-ಗಂಡು ಮಗುವಿಗೆ ರೂ. 50,000
ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ಮಹಿಳಾ ಕಾರ್ಮಿಕಳಿಂದ ಅರ್ಜಿಯನ್ನು ಪಡೆದು ಆಕೆಯ ಗಂಡು ಮಗುವಿನ ಜನನಕ್ಕೆ ರೂ.20,000/- ಮತ್ತು ಹೆಣ್ಣು ಮಗುವಿಗೆ ರೂ.30,000/- ಮೊದಲು ಹೆರಿಗೆಗೆ ಸಹಾಯಧನವನ್ನು ಮಂಜೂರು ಮಾಡಲಾಗುವುದು. ( ಮಗುವಿನ ಹೆರಿಗೆ ಆದ ಕುರಿತು ದಾಖಲೆಗಳನ್ನು ಸಲ್ಲಿಸುವುದು.)
ನೋಂದಾಯಿತ ನಿರ್ಮಾಣ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆಗೆ ನೀಡುವ ಸಹಾಯಧನ
⭐ ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ಮಹಿಳಾ ಕಾರ್ಮಿಕರಿಂದ ಅರ್ಜಿಯನ್ನು ಪಡೆದು ಆಕೆಯ ಗಂಡು/ಹೆಣ್ಣು ಮಗುವಿನ ಜನನಕ್ಕೆ 50,000/- ( ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ : 08-08-2022 ರಂತೆ ) ಮೊದಲ ಎರಡು ಹೆರಿಗೆಗೆ ಸಹಾಯಧನವನ್ನು ಮಂಜೂರು ಮಾಡಲಾಗುವುದು. ( ಮಗುವಿನ ಹೆರಿಗೆ ಆದ ಕುರಿತು ದಾಖಲೆಗಳನ್ನು ಸಲ್ಲಿಸುವುದು.)
ಈ ಕೆಳಕಂಡ ಷರತ್ತುಗಳನ್ನು ಪೂರೈಸಿದಾಗ ಮಾತ್ರ ಸಹಾಯ ಧನವನ್ನು ಮಂಜೂರು ಮಾಡಬೇಕಾಗುತ್ತದೆ.
⭐ ನೋಂದಾಯಿತ ಮಹಿಳಾ ಕಾರ್ಮಿಕರು ಮೊದಲ ಎರಡು ಜೀವಂತ ಮಕ್ಕಳಿಗೆ ಮಾತ್ರ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ( ಎರಡನೇ ಹಕ್ಕು ಸಾಧನೆ ಸಹಾಯ ಧನ ಅರ್ಜಿಯು ಎರಡನೇ ಮಗುವಿನ ಹೆರಿಗೆ ಎಂದು ಹೇಳುವ ಅಫಿಡೆವಿಟ್ ಅನ್ನು ಒಳಗೊಂಡಿರಬೇಕು.)
⭐ ಒಂದು ವೇಳೆ ಈಗಾಗಲೇ ನೋಂದಾಯಿತ ಮಹಿಳಾ ಕಾರ್ಮಿಕರಿಗೆ ಎರಡು ಮಕ್ಕಳಿದ್ದರೆ, ಅವಳು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗುವುದಿಲ್ಲ.
⭐ ಜನನ ಮತ್ತು ಮರಣದ ನೋಂದಣಾ ಅಧಿಕಾರಿಯಿಂದ ಜನನ ಪ್ರಮಾಣ ಪತ್ರವನ್ನು ಪಡೆಯಬೇಕು. ಅಥವಾ ಸರ್ಕಾರೀ ಆಸ್ಪತ್ರೆ, ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಅಂಗೀಕೃತ ಆಸ್ಪತ್ರೆಗಳಲ್ಲಿ ದಾಖಲಾಗಿ ಆ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿದ ಪ್ರಮಾಣಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಅನ್ವಯಿಸುವ ವಿಧಾನ :
1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು.
2. ನೋಂದಣಾಧಿಕಾರಿಗಳಾದ ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
3. ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ
ಪೂರಕ ದಾಖಲಾತಿಗಳು :
👉 ಮಂಡಳಿ ನೀಡಿರುವ ಗುರುತಿನ ಚೀಟಿ / ಸ್ಮಾರ್ಟ್ ಕಾರ್ಡ್
👉 ಎರಡನೇ ಮಗುವಿನ ಹೆರಿಗೆ ಎಂದು ಅಫಿಡವಿಟ್ ಸಲ್ಲಿಸುವುದು.
👉 ಬ್ಯಾಂಕ್ ಖಾತೆ ಪುರಾವೆ
👉 ಮಕ್ಕಳ ಛಾಯಾಚಿತ್ರ
👉 ಉದ್ಯೋಗ ಧೃಡೀಕರಣ ಪತ್ರ
👉 ಡಿಸ್ಚಾರ್ಜ್ ಸಾರಾಂಶ
👉 ಮಗುವಿನ ಜನನ ಪ್ರಮಾಣಪತ್ರ
👉 ಮಗುವಿನ ಜನನದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು.
ಆತ್ಮೀಯ ಕಾರ್ಮಿಕರೇ ಈ ಎಲ್ಲ ಮಾಹಿತಿ ನಿಮಗೆ ಇಷ್ಟವಾದಲ್ಲಿ, ಹಾಗೂ ನೀವಿನ್ನು ತಾಯಿ ಲಕ್ಷ್ಮಿ ಬಾಂಡ್ ಹೆರಿಗೆ ಸೌಲಭ್ಯ ಹೊಂದಿಲ್ಲದಿದ್ದರೆ ಕೂಡಲೇ ಈ ನಂಬರ್ ಗೆ ಕರೆ ಮಾಡಿ ಅರ್ಜಿ ಸಲ್ಲಿಸಿಕೊಡುತ್ತೇವೆ.
ದೂರವಾಣಿ ಸಂಖ್ಯೆ ::: 8217716084, 7795063340
ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
2q
Tags
Labour Card