ಭಾಗ್ಯಲಕ್ಷ್ಮಿ ಮತ್ತು ಸುಕನ್ಯಾ ಯೋಜನೆಗಳನ್ನು ವಿಲೀನಗೊಳಿಸಿದ್ದರಿಂದ, ಒಂದೇ ಮಗುವಿಗೆ ಎರೆಡೆರಡು ಯೋಜನೆಗಳ ಲಾಭ ಪಡೆಯುವುದಕ್ಕೆ ಬ್ರೇಕ್ ಬಿದ್ದಿದೆ!!!
ಯೋಜನೆಯ ದುರ್ಬಳಕೆಗೆ ಬ್ರೇಕ್ :
ಎರೆಡೆರಡು ಯೋಜನೆಯ ಲಾಭ ಒಂದೇ ಹೆಣ್ಣು ಮಗುವಿಗೆ ಸಿಗುವುದನ್ನು ಅರಿತು ಕಳೆದ 2 ವರ್ಷದಿಂದ ಸದ್ದಿಲ್ಲದೇ ಸುಕನ್ಯಾ ಭಾಗ್ಯಲಕ್ಷ್ಮಿ ಯೋಜನೆಯನ್ನು ಸರ್ಕಾರ ವಿಲೀನಗೊಳಿಸಿದೆ. ಇದೀಗ ಭಾರತೀಯ ಜೀವ ವಿಮ ನಿಗಮದಿಂದ ಬೇರ್ಪಡಿಸಿ, 2021ನೇ ಸಾಲಿನಿಂದ ಅಂಚೆ ಇಲಾಖೆ ಮೂಲಕ ಮರು ವಿನ್ಯಾಸಗೊಳಿಸಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಮುಂಚೆ ಪಾಲಕರು ಈ ಎರಡು ಯೋಜನೆಗಳನ್ನು ಪಡೆಯುತ್ತಿರುವುದರಿಂದ 2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಸದರಿ ಯೋಜನೆಗಳನ್ನು ವಿಲೀನಗೊಳಿಸುವ ತೀರ್ಮಾನಕ್ಕೆ ಬಂದಿದ್ದು ಈಗ ಕಾರ್ಯರೂಪಗೊಳಿಸಲಾಗಿದೆ.
ಪ್ರತಿ ಮಗುವಿನ ಹೆಸರಿನಲ್ಲಿ 3 ಸಾವಿರ:
ಪ್ರಸ್ತುತ ಯೋಜನೆಯಡಿ ರಾಜ್ಯದಲ್ಲಿ ಬಿಪಿಎಲ್ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಲಾಭ ಸಿಗಲಿದ್ದು, ಪ್ರತಿ ಮಗುವಿನ ಹೆಸರಿನಲ್ಲಿ 3 ಸಾವಿರದಂತೆ 15 ವರ್ಷಗಳವರೆಗೆ ಒಟ್ಟು 45 ಸಾವಿರ ಠೇವಣಿ ಇಡಲಾಗುತ್ತದೆ. 21 ವರ್ಷ ಆದ ಮೇಲೆ 1 ಲಕ್ಷದ 27 ಸಾವಿರ ರೂ. ನೀಡಲಾಗುತ್ತದೆ. 18 ವರ್ಷ ಸಂಪೂರ್ಣಗೊಂಡ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ.50 ರಷ್ಟು ಭಾಗ ಹಿಂಪಡೆಯಲು ಅವಕಾಶ ನೀಡಲಾಗಿದೆ.
ಮುಖ್ಯ ಅಂಶಗಳು:
ಸುಕನ್ಯಾ ಭಾಗ್ಯಲಕ್ಷ್ಮಿ ಯೋಜನೆ ವಿಲೀನ
ಅಖಂಡ ಜಿಲ್ಲೆಯಲ್ಲಿ76,084 ಬಾಂಡ್ ವಿತರಣೆ
ಅಂಚೆ ಇಲಾಖೆಯಿಂದ 4,798 ಪಾಸ್ಬುಕ್ ಪೂರೈಕೆ
ಭಾರತೀಯ ಜೀವ ವಿಮಾ ನಿಗಮದಿಂದ ಬೇರ್ಪಟ್ಟ ಯೋಜನೆ
ಬಿಪಿಎಲ್ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಲಾಭ
ಪ್ರತಿ ಮಗುವಿಗೆ 15 ವರ್ಷಗಳವರೆಗೆ ೪೫ ಸಾವಿರ ಠೇವಣಿ
ಮಗುವಿನ ಹೆಸರಿನಲ್ಲಿ ಒಂದೇ ಖಾತೆ ಇರಲಿ :
ಮಗು ಜನಿಸಿದ ಎರಡು ವರ್ಷದೊಳಗೆ ವಾಸವಿರುವ ಸ್ಥಳದ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು. ಹೊಸದಾಗಿ ರೂಪಿತ ಯೋಜನೆಗೆ ನೋಂದಾವಣಿಯಾಗುವ ಫಲಾನುಭವಿಗಳಿಗೆ ಪೋಷಕರ ಮರಣ ವಿಮೆ ಲಭ್ಯವಿರುವುದಿಲ್ಲ. ಅಲ್ಲದೆ ಒಂದು ಮಗುವಿನ ಹೆಸರಿನಲ್ಲಿ ಒಂದೇ ಸುಕನ್ಯಾ ಸಮೃದ್ಧಿ ಖಾತೆ ಇರತಕ್ಕದ್ದು, ಖಾತೆ ಹೊಂದಿದ್ದಲ್ಲಿ ಒಂದನ್ನು ರದ್ದು ಪಡಿಸಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 2006 ರಿಂದ 2023 ರವರೆಗೆ LIC ಯಾ ಬಾಂಡ್ ಹಾಗು ಕಳೆದ ಎರಡು ವರ್ಷದಿಂದ ಅಂಚೆ ಇಲಾಖೆಯ ಸುಕನ್ಯಾದಡಿ ಪಾಸ್ಬುಕ್ ವಿತರಿಸಲಾಗಿದೆ.
೭೬೦೮೪ ಬಾಂಡ್ ವಿತರಣೆ :
ಕೊಪ್ಪಳ - 19,031
ಗಂಗಾವತಿ - 22,253
ಕುಷ್ಟಗಿ - 13,658
ಯಲಬುರ್ಗಾ - 15,618
ಕನಕಗಿರಿ - 5, 497 ಸೇರಿ ಒಟ್ಟು 76,084 ಬಾಂಡ್ ಗಳನ್ನು ವಿತರಣೆ ಮಾಡಲಾಗಿದೆ.
ಇನ್ನು 2021-22ನೇ ಸಾಲಿನಲ್ಲಿ ಅಂಚೆ ಇಲಾಖೆಯಿಂದ 676 ಪಾಸ್ಬುಕ್ ವಿತರಿಸಿದರೆ 2022-23 ನೇ ಸಾಲಿನಲ್ಲಿ 4,122 ಪಾಸ್ ಬುಕ್ ಗಳನ್ನು ಸುಕನ್ಯಾ ಸಮೃದ್ಧಿ ಯೋಜನೆಯಡಿ ವಿತರಣೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Govt.scheme