ಗ್ಯಾಸ್ ಲೀಕ್ ಆದ್ರೆ ಅಲಾರಾಂ ನೀಡುತ್ತೆ ಈ ಬಲ್ಬ್
ಸಿಲಿಂಡರ್ ಬ್ಲಾಸ್ಟ್ ನಂತಹ ದುರ್ಘಟನೆ ತಪ್ಪಿಸಲು ಇಂದೇ ಮನೆಗೆ ತನ್ನಿ ಎಲ್ ಪಿ ಜಿ ಗ್ಯಾಸ್ ಡಿಟೆಕ್ಟರ್
ಎಲ್ ಪಿ ಜಿ ಸೋರಿಕೆಯಿಂದಾಗಿ ಸಿಲಿಂಡರ್ ಬ್ಲಾಸ್ಟ್ ನಂತಹ ಅವಘಡಗಳು ಪ್ರಾಣಕ್ಕೆ ಕುತ್ತು ತರುತ್ತವೆ. ಎಷ್ಟೇ ನಿಗಾವಹಿಸಿದರು ಕೂಡ ಕೆಲವೊಮ್ಮೆ ಇಂತಹ ಅತಾಚುರ್ಯವನ್ನು ತಪ್ಪಿಸಲು ಸಾಧ್ಯವೇ ಆಗುವುದಿಲ್ಲ. ಆದರೆ, ಒಂದು ಅಲಾರಾಂ ಬಲ್ಬ್ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು.
ಎಲ್ ಪಿ ಜಿ ಸೋರಿಕೆಯಿಂದಾಗಿ ಉಂಟಾಗುವ ಸಿಲಿಂಡರ್ ಬ್ಲಾಸ್ಟ್ ನಿಂದಾಗಿ ಕೆಲವೊಮ್ಮೆ ಇಡೀ ಕುಟುಂಬವೇ ಪ್ರಾಣಾಪಾಯದಲ್ಲಿ ಸಿಲುಕುತ್ತದೆ. ಕೆಲವರು ಇದನ್ನು ತಪ್ಪಿಸಲು ಸ್ಮೋಕ್ ಡಿಟೆಕ್ಟರ್ ಗಳನ್ನು ಮನೆಯಲ್ಲಿ ಸ್ಥಾಪಿಸುತ್ತಾರೆ.ಆದರೆ, ಈ ಸ್ಮೋಕ್ ಡಿಟೆಕ್ಟರ್ ಗಳು ಕೇವಲ ಹೊಗೆಯನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಸಿಲಿಂಡರ್ ಲೀಕ್ ಆಗುವುದನ್ನು ಪತ್ತೆ ಹಚ್ಚುವಲ್ಲಿ ಅಷ್ಟು ಪರಿಣಾಮಕಾರಿ ಆಗಿಲ್ಲ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ಬ್ಲಾಸ್ಟ್ ನಂತಹ ದುರ್ಘಟನೆ ತಪ್ಪಿಸಲು ಸಾಧ್ಯವಾಗದಂತಹ ಅಲಾರಾಂ ಬಲ್ಬ್ ಗಳು ಬಂದಿವೆ. ಇವುಗಳ ಸಹಾಯದಿಂದ ಮನೆಯಲ್ಲಿ ಅನಿಲ್ ಸೋರಿಕೆಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ
ಕಂಡುಹಿಡಿಯಬಹುದು.
ವಾಸ್ತವವಾಗಿ, ಅಡುಗೆ ಮನೆಯಲ್ಲಿ ಎಲ್ ಪಿ ಜಿ ಲೀಕೇಜ್ ಇರುತ್ತದೆ. ಆದರೆ ಅನೇಕ ಬಾರಿ ಅದು ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಗ್ಯಾಸ್ ಸೋರಿಕೆಯನ್ನು ಪತ್ತೆಹಚ್ಚುವಂತಹ ಅಲಾರಾಂ ಬಲ್ಬ್ ಅನ್ನು ಕಂಡು ಹಿಡಿಯಲಾಗಿದೆ. ಯಾವುದು ಈ ಸಾಧನ, ಇದರ ವೈಶಿಷ್ಟಗಳೇನು? ಎಂದು ತಿಳಿಯೋಣ.
ಅಲಾರಾಂ ಬಲ್ಬ್ ವೈಶಿಷ್ಟ್ಯ :
≫ ಈ ಗ್ಯಾಸ್ ಲೀಕ್ ಅಲಾರಾಂ ಬಲ್ಬ್ ಅನ್ನು ನಿಮ್ಮ ಮನೆಯಲ್ಲಿ ಇರುವ ಬಲ್ಬ್ ಹೋಲ್ಡರ್ ಗೆ ಪ್ಲೇಗ್ ಮಾಡಿ. ಅದರ ನಂತರ ಸಾಧನವು ವಿದ್ಯುತ್ ಸರಬರಾಜನ್ನು ಪಡೆಯಲು ಪ್ರಾರಂಭಿಸುತ್ತದೆ. ಮತ್ತು ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
≫ ಈ ಅಲಾರಾಂ ನ ಸಡ್ಡು ಎಷ್ಟು ಜೋರಾಗಿದೆಯೆಂದರೆ ಅದು 85 ಡಿಸೇಬಲ್ ಗಳ ಶಬ್ದವನ್ನು ಹೊಂದಿರುವುದರಿಂದ ಮನೆಯಲ್ಲಿ ಮತ್ತು ಮನೆಯ ಹೊರಗಿನ ಜನರು ಅದನ್ನು ಸುಲಭವಾಗಿ ಕೇಳಬಹುದು.
ಬೆಲೆ ಮತ್ತು ಲಭ್ಯತೆ :
ಈ ಗ್ಯಾಸ್ ಅಲಾರಾಂ ಅನ್ನು ನೀವು ಅಮೆಜಾನ್ ನಲ್ಲಿ ಖರೀದಿಸಬಹುದಾಗಿದೆ. ಇದರ ಬೆಲೆ ಸುಮಾರು 700 ರೂ. ವರೆಗೆ ಇರಲಿದೆ.
ಹಲೋ ನಿಕಿಕ್ಸ್ ಶೀಲ್ಡ್ ಫೈರ್ ಅಲಾರಾಂ :
ನಾವು ಮಾತನಾಡುತ್ತಿರುವ ಸಾಧನದ ಹೆಸರು ಹಲೋ ನಿಕಿಕ್ಸ್ ಶೀಲ್ಡ್ ಫೈರ್ ಅಲಾರಾಂ ಇದು ಹೋಗೆ ಮತ್ತು ಕಾರ್ಬನ್ ಡೈ ಆಕ್ಸೈಡ್. ಎಲ್ ಪಿ ಜಿ ಮಿಥೇನ್ ಮತ್ತು ಹೈಡ್ರೋಜನ್ ನಂತಹ ಅನಿಲ ಸೋರಿಕೆಯನ್ನು ಸುಲಭವಾಗಿ ಪತ್ತೆ ಮಾಡಬಲ್ಲದು. ನೋಡಲು ಥೇಟ್ ಬಲ್ಬ್ ನಂತೆಯೇ ಕಾಣುವ ಈ ಸಾಧನವು ಎಲ್ ಪಿ ಜಿ ಲೀಕ್ ಆದರೆ ಅಲಾರಾಂ ಮೂಲಕ ತಕ್ಷಣ ಎಚ್ಚರಿಕೆ ನೀಡುತ್ತದೆ.
ಗ್ಯಾಸ್ ಸೋರಿಕೆಯಾಗುವ ಸಾಧ್ಯತೆಯಿರುವ ಮನೆಯ ಆ ಭಾಗದಲ್ಲಿ ನೀವು ಈ ಅಲಾರಾಂ ಅನ್ನು ಸ್ಥಾಪಿಸಬಹುದು. ಅಗತ್ಯವಿದ್ದರೆ, ನೀವು ನಿಮ್ಮ ಕಚೇರಿ ಅಥವಾ ಗೋಡೌನ್ ನಲ್ಲಿಯೂ ಈ ಸಾಧನವನ್ನು ಬಳಸಬಹುದು. ಇದರಿಂದ ಗ್ಯಾಸ್ ಸೋರಿಕೆಯಿಂದ ಉಂಟಾಗುವ ಅಗ್ನಿ ಅವಘಡದಂತಹ ದುರ್ಘಟನೆಗಳನ್ನು ತಪ್ಪಿಸಬಹುದು. ಇದು ಈ ಫೈರ್ ಅಲಾರಾಂ ನಿಸ್ತಂತುವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
Tags
Social