ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಕ್ಕೆ ಮಾ. 27ರಿಂದ ಅರ್ಜಿ ಆರಂಭ : ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

KVS ಅಡ್ಮಿಶನ್ 2023 ಪ್ರಾರಂಭ :
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಕ್ಕೆ ಮಾ. 27ರಿಂದ ಅರ್ಜಿ ಆರಂಭ : ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.



     ಕೇಂದ್ರೀಯ ವಿದ್ಯಾಲಯ ಸಂಘಟನೆ,2023-24ನೇ ಸಾಲಿನ 1ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದಂತೆ ವೇಳಾಪಟ್ಟಿ, ಮಾರ್ಗಸೂಚಿಸಿದಂತೆ ವೇಳಾಪಟ್ಟಿ, ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

2023-24 ನೇ ಸಾಲಿನ ೧ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೆವಿಎಸ್ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಅನ್ವಯ ಆನ್ಲೈನ್ ಅಪ್ಲಿಕೇಶನ್ ಮಾರ್ಚ್ 27, 2023  ರಿಂದ  ಆರಂಭವಾಗಲಿದೆ.

ಮೀಸಲಾತಿ :

ಪ್ರತಿ ವಿಭಾಗಕ್ಕೆ 40 ವಿದ್ಯಾರ್ಥಿಗಳು 

RTE 25% : 10 ಸೀಟುಗಳು 

SC 15% : 06 ಸೀಟುಗಳು 

ST7.5% ೦೩ ಸೀಟುಗಳು 

OBC 27% : 11 ಸೀಟುಗಳು 

ವಿಕಲಚೇತನ ಅಭ್ಯರ್ಥಿಗಳಿಗೆ 2% ಸೀಟುಗಳನ್ನು ಕಾಯ್ದಿರಸಲಾಗುವುದು. PC-Pexels.com 



KVS ಕ್ಲಾಸ್ ೧ ಪ್ರವೇಶಾತಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ ಸೈಟ್ https://kvsangathan.nic.in/ 
ಅಥವಾ kvsonlineadmission.kvs.gov.in ಗೆ ಭೇಟಿ ನೀಡಿ.

ಮುಖಪುಟದಲ್ಲಿ KVS ಕ್ಲಾಸ್ 1 ಪ್ರವೇಶಾತಿಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ಅಭ್ಯರ್ಥಿಗಳ ರುಜುವಾತುಗಳನ್ನು ನಮೂದಿಸಿ ನೊಂದಾಯಿಸಿಕೊಳ್ಳಿ.

ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಮೇಲೆ ನಿಮಗೆ ಲಾಗ್ ಇನ್ ಕೋಡ್ ಸಿಗುತ್ತದೆ.

ಅರ್ಜಿ ಫಾರ್ಮ್ ನಲಿ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

ನಿಮಗೆ ಲಾಗ್ ಇನ್ ಕೋಡ್ ಹೊರತುಪಡಿಸಿ ಇನ್ನೊಂದು ಕೋಡ್ ಲಭ್ಯವಾಗುತ್ತದೆ. ಅದನ್ನು ನಮೂದಿಸಿ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಂಪೂರ್ಣವಾಗಿ ಸಲ್ಲಿಸಿದ ಮೇಲೆ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡ ಪ್ರಿಂಟ್ ತೆಗೆದುಕೊಳ್ಳಿ.

ಪ್ರವೇಶಾತಿಗೆ ಅರ್ಹತಾ ಮಾನದಂಡಗಳು :

ಮಾರ್ಚ್ 31, 2023 ರ ಅನ್ವಯ ಕನಿಷ್ಠ ಆರು ವರ್ಷ ವಯಸ್ಸಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್ 1 ರಂದು ಜನಿಸಿದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಒಂದು ಮಗುವು ಒಂದೇ ವಿದ್ಯಾಲಯಕ್ಕೆ ಅನೇಕ ಅರ್ಜಿಗಳನ್ನು ಸಲ್ಲಿಸಬಾರದು. ಒಂದೇ ಕೇಂದ್ರೀಯ ವಿದ್ಯಾಲಯದಲ್ಲಿ ಒಂದು ಮಗು ಅನೇಕ ಭಾರಿ ಅರ್ಜಿ ಸಲ್ಲಿಸಿದರೆ, ಕೊನೆಯ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.



KVS ಪ್ರವೇಶಾತಿಗೆ 2023 ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಡಿಜಿಟಲ್ ಅಥವಾ ಸ್ಕ್ಯಾನ್ ಮಡಿದ ಫೋಟೋ.

ವಿದ್ಯಾರ್ಥಿಯ ಜನನ ಪ್ರಮಾಣ ಪತ್ರದ ಸ್ಕ್ಯಾನ್ ಮಾಡಿದ ಪ್ರತಿ.

ಆಧಾರ್ ಕಾರ್ಡ್ ಪ್ರತಿ.

ಪೋಷಕರ/ ಗಾರ್ಡಿಯನ್ ಗಳ ವರ್ಗಾವಣೆಯ ಪ್ರಮಾಣ ಪತ್ರ.

ಆರ್ಥಿಕವಾಗಿ ದುರ್ಬಲ ಉಳ್ಳವರಾಗಿದ್ದಲ್ಲಿ ಸರ್ಕಾರದಿಂದ ಪಡೆದ ಪ್ರಮಾಣಪತ್ರ 

SC / ST ಪ್ರಮಾಣ ಪತ್ರ ಅನ್ವಯಿಸಿದರೆ.

ವಿಕಲಚೇತನ ಪ್ರಮಾಣ ಪತ್ರ ಅನ್ವಯಿಸಿದರೆ.


ಪ್ರಮುಖ ದಿನಾಂಕಗಳು :

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ 
27-03-2023

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 
17-04-2023

ಅಭ್ಯರ್ಥಿಗಳ ಮೊದಲ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ದಿನಾಂಕ 
20-04-2023

ಅಭ್ಯರ್ಥಿಗಳ ಎರಡನೇ ಆಯ್ಕೆ ಪಟ್ಟಿ ದಿನಾಂಕ 
28-04-2023

ಅಭ್ಯರ್ಥಿಗಳ ಮೂರನೇ ಆಯ್ಕೆ ಪಟ್ಟಿ 
04-05-2023



ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@










ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು