ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಮೃತಿ ಇರಾನಿ ರಾಂಪ್ ವಾಕ್ ; 25 ವರ್ಷಗಳ ಹಿಂದಿನ ವಿಡಿಯೋ ವೈರಲ್
ಮಾಡೆಲ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಸ್ಮೃತಿ ಇರಾನಿ ರಾಜಕೀಯಕ್ಕೆ ಬರುವ ಮೊದಲು ಕಿರುತೆರೆ ನಟಿಯಾಗಿ ಜನಪ್ರಿಯರಾಗಿದ್ದರು. ಏಕ್ತಾ ಕಪೂರ್ ಅವರ ಬಾಲಾಜಿ ಟೆಲೆಫಿಲ್ಫ್ಮ್ಸ್ ನಿರ್ಮಾಣದ ಕ್ಯೂಕಿ ಸಾಸ್ ಭೀ ಬಹೂ ಥೀ ಎಂಬ ಧಾರಾವಾಹಿಯಲ್ಲಿ ಸ್ಮೃತಿ, ತುಳಸಿ ವಿರಾನಿ ಎಂಬ ಕಥಾಪಾತ್ರವನು ನಿರ್ವಹಿಸಿ ಜನಮನಸ್ಸು ಗೆದ್ದಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿರುವ ಕೇಂದ್ರ ಸಚಿವೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದು ಆಗಾಗ್ಗೆ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಾರ್ಚ್ 23 ರಂದು ಸ್ಮೃತಿ ಇರಾನಿಯ ಜನ್ಮದಿನವಾಗಿತ್ತು. ಈ ವೇಳೆ ಅವರ ಹಳೆ ವಿಡಿಯೋ ಒಂದು ವೈಲ್ ಆಗಿತ್ತು.
ಪ್ಯಾನ್-ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ
ವೈರಲ್ ಆದ ವಿಡಿಯೋ 👇👇......
ಸ್ಮೃತಿ ಇರಾನಿ ಅವರು 25 ವರ್ಷಗಳ ಹಿಂದೆ 1998 ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಅವರು ಕಿತ್ತಳೆ ಬಣ್ಣದ ಸ್ಲೀವ್ ಲೆಸ್ ಟಾಪ್ ಮತ್ತು ಮಿನಿ ಸ್ಕರ್ಟ್ ಧರಿಸಿ ರಾಂಪ್ ವಾಕ್ ಮಾಡಿದ್ದರು.
ಸ್ಮೃತಿ ಇರಾನಿ ಅವರು 25 ವರ್ಷಗಳ ಹಿಂದೆ 1998ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಅವರು ಕಿತ್ತಳೆ ಬಣ್ಣದ ಸ್ಲೀವ್ ಲೆಸ್ ಟಾಪ್ ಮತ್ತು ಮಿನಿ ಸ್ಕರ್ಟ್ ಧರಿಸಿ ರಾಂಪ್ ವಾಕ್ ಮಾಡಿದ್ದರು. ಟಿವಿ ನಟಿ ಗೌರಿ ಪ್ರಧಾನ್ ತೇಜ್ವಾನಿ ಅವರೊಂದಿಗೆ ಆಗ್ರ 9 ರೊಳಗೆ ತಲುಪಲು ಸಾಧ್ಯವಾಗದ ಸ್ಪರ್ಧಿಗಳಲ್ಲಿ ಸ್ಮೃತಿ ಕೂಡ ಒಬ್ಬರು. ಅದೇ ವರ್ಷ ಅವರು ಮಿಖಾ ಸಿಂಗ್ ಅವರೊಂದಿಗೆ 'ಸಾವನ್ ಮೇ ಲಗ್ ಗಯಿ ಆಗ್' ಅಲ್ಬಂನ್ 'ಬೊಲಿಯ' ಹಾಡಿನಲ್ಲಿ ಕಾಣಿಸಿಕೊಂಡರು.
ಸ್ಮೃತಿ ಇರಾನಿ 2003 ರಲ್ಲಿ ಬಿಜೆಪಿ ಸೇರಿದರು. ಅವರು 2004 ರಲ್ಲಿ ಮಹಾರಾಷ್ಟ್ರ ಯುವ ಘಟಕದ ಉಪಾಧ್ಯಕ್ಷರಾದರು. ಸ್ಮೃತಿ ಅಮೇರಿ ಕ್ಷೇತ್ರದಿಂದ ಸಂಸದರಾಗಿದ್ದಾರೆ. 2019 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಸೋಲಿಸುವ ಮೂಲಕ ಅವರು ಲೋಕಸಭೆಗೆ ಪ್ರವೇಶಿಸಿದ್ದರು.
2000 ರಲ್ಲಿ ಸ್ಮೃತಿ ಇರಾನಿ ಆತಿಷ್ ಮತ್ತು ಹಮ್ ಹೇ ಕಲ್ ಆಜ್ ಔರ್ ಕಲ್ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಅವರು ಡಿಡಿ ಮೆಟ್ರೋದಲ್ಲಿ ಪ್ರಸಾರವಾಗುತ್ತಿದ್ದ ಕವಿತಾ ದಾರಾವಾಹಿಯಲ್ಲೂ ನಟಿಸಿದ್ದಾರೆ. ಆದರೆ ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ ನ ಕ್ಯೂಕಿ ಸಾಸ್ ಭೀ ಕಭಿ ಬಹೂ ಥೀ ಸೀರಿಯಲ್ ನಲ್ಲಿ ಅವರು ಮಿಂಚಿ ಜನಮನ್ನಣೆ ಪಡೆದರು. ಶ್ರೇಷ್ಠ ನಟಿಗಾಗಿ ಸತತ ಐದು ಬಾರಿ ಭಾರತೀಯ ದೂರದರ್ಶನ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.