ಕರ್ನಾಟಕ ವಿಧಾನಸಭಾ ಸಮೀಕ್ಷೆ - 2023

 ಕರ್ನಾಟಕ ಚುನಾವಣೆ-2023


ಸ್ಮೃತಿ ಇರಾನಿ ಅವರ 25 ವರ್ಷಗಳ ಹಿಂದಿನ ವಿಡಿಯೋ ವೈರಲ್ !!

ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟ : ಯಾರಿಗೆ ಎಷ್ಟು?

ಕರ್ನಾಟಕದ 2023 ರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾಪೂರ್ವ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದೆ. ಸದ್ಯಕ್ಕೆ ಐದು ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದ್ದು, ಸರಾಸರಿಯಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಕಂಡುಬಂದಿದೆ. ಎಬಿಪಿ ಸಿವೋಟರ್, ಮ್ಯಾಟ್ರಿಸ್, ಲೋಕ್ ಪಾಲ್, ಪಾಪ್ಯುಲರ್ ಪೊಲ್ಸ್ ಮತ್ತು ಜೀ ನ್ಯೂಸ್ ತಮ್ಮ ಚುನಾವಣಾಪೂರ್ವ ಸಮೀಕ್ಷೆಯನ್ನು ಪ್ರಕಟ ಮಾಡಿವೆ.

ಎಬಿಪಿ ಸಿವೋಟರ್ ಚುನಾವಣಾಪೂರ್ವ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಗೆ 115 ರಿಂದ 127 ಸ್ಥಾನ ಬರಲಿದ್ದು, ಬಿಜೆಪಿಗೆ 68-80 ಸ್ಥಾನ ಸಿಗಲಿದೆ. ಜೆಡಿಎಸ್ ಗೆ 23ರಿಂದ 35 ಸ್ಥಾನ ಡಕ್ಕಲಿದೆ. ಇತರ ಪಕ್ಸಗಳು 0-2 ಸ್ಥಾನ ಗಳಿಸಿವೆ.

ಮ್ಯಾಟ್ರಿಜ್ ಸಮೀಕ್ಷೆಗೆ ಪ್ರಕಾರ ಕಾಂಗ್ರೆಸ್ ಗೆ 88 ರಿಂದ 98 ಸ್ಥಾನ ಬರಲಿದ್ದು ಬಿಜೆಪಿ ಗೆ 96-106 ಸ್ಥಾನ ಸಿಗಲಿದೆ. ಜೆಡಿಎಸ್ ಗೆ 23 ರಿಂದ 33 ಸ್ಥಾನ ಸಿಗಲಿದೆ. ಇಲ್ಲಿ 2ರಿಂದ 7 ಇತರರ ಪಾಲಾಗಲಿದೆ.


ಎಬಿಪಿ ಸಿವೋಟರ್ ಸಮೀಕ್ಷೆ ವಿವರ 

ಪ್ರಾಮಾಣಿಕ ಎಸ್ ಐ ಲಂಚ ಪಡೆಯುವಾಗ ಸಿಕ್ಕಿಬಿದ್ಲು!

ಲೋಕ್ ಪೋಲ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 116-123, ಬಿಜೆಪಿ 77-83, ಜೆಡಿಎಸ್ 21-27 ಸ್ಥಾನ ಪಡೆಯಲಿದ್ದು, ಇತರ ಪಕ್ಷಗಳು 1-4 ಸ್ಥಾನ ಪಡೆಯಲಿದೆ.

ಪಾಪ್ಯುಲರ್ ಪೋಲ್ಸ್ ಪ್ರಕಾರ ಕಾಂಗ್ರೆಸ್-ಬಿಜೆಪಿ ಸಮಬಲವಾಗಿ ಇರಲಿವೆ. ಅಂದರೆ ಎರಡಕ್ಕೂ ತಲಾ 82 ರಿಂದ 87ಸ್ಥಾನಗಳು ಸಿಗಲಿವೆ. ಜೆಡಿಎಸ್ 42-45 ಸ್ಥಾನಗಳಿದ್ದು, ಇತರ ಪಕ್ಷಗಳಿಗೆ ಯಾವುದೇ ಸ್ಥಾನ ಸಿಗುವುದಿಲ್ಲ.

ಜೀ ನ್ಯೂಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 88-98, ಬಿಜೆಪಿ 96-106, ಜೆಡಿಎಸ್ 23-33 ಸ್ಥಾನ ಗಳಿಸಿದ್ದು, 2 ರಿಂದ 7 ಸ್ಥಾನಗಳು ಇತರ ಪಕ್ಷಗಳ ಪಾಲಾಗಿವೆ.

ಎಬಿಪಿ ಸಿವೋಟರ್ ಸಮೀಕ್ಷೆ ಪ್ರಕಾರ ಮುಂಬೈ-ಕರ್ನಾಟಕ ಪ್ರದೇಶಗಳಲ್ಲಿ ಕಾಂಗ್ರೆಸ್-ಬಿಜೆಪಿ ತಲಾ ಶೇ. 43 ವೋಟ್ ಹಂಚಿಕೆಯಾಗಲಿದೆ. ಆದಾಗ್ಯೂ ಕಾಂಗ್ರೆಸ್ ಈ ಭಾಗದಲ್ಲಿ 25-29 ಮತ್ತು ಬಿಜೆಪಿ 21-25 ಸೀಟು ಗೆಲ್ಲಲಿದೆ.

ಕರಾವಳಿಯಲ್ಲಿ ಬಿಜೆಪಿ ಗರಿಷ್ಠ ಸ್ಥಾನ ಗೆಲ್ಲಲಿದೆ ಎಂದಾದರೂ ಕಾಂಗ್ರೆಸ್ ಬಿಗಿ ಪೈಪೋಟಿ ನೀಡಲಿದೆ ಎಂಬುದು ಕಂಡುಬಂದಿದೆ. ಅಂದರೆ ಕರಾವಳಿಯಲ್ಲಿ ಬಿಜೆಪಿ ಗೆ ಶೇ. 46 ಮತ ಸಿಕ್ಕರೆ, ಕಾಂಗ್ರೆಸ್ ಗೆ ಶೇ. 41 ಮತ ಸಿಗಲಿದೆ. ಜೆಡಿಎಸ್ ಶೇ. 6 ಮತ ಪಡೆಯಲಿದೆ ಎನ್ನಲಾಗಿದೆ.

ಮದ್ಯ ಕರ್ನಾಟಕದಲ್ಲಿ ಬಿಜೆಪಿ ಶೇ. 38 ಮತ ಗಳಿಸಿದರೆ, ಕಾಂಗ್ರೆಸ್ ಶೇ. 41 ಮತ ಗಳಿಸಲಿದೆ ಎನ್ನಲಾಗಿದೆ. ಅಂದರೆ ಬಿಜೆಪಿ 12 ರಿಂದ 16 ಮತ್ತು ಕಾಂಗ್ರೆಸ್ 18-22 ಸ್ಥಾನ ಗೆಲ್ಲಲಿದೆ.

ಹಳೆ ಮೈಸೂರ ಭಾಗದಲ್ಲಿ ಬಿಜೆಪಿ ಗೆ ಶೇ. 20 ಮತ್ತು ಕಾಂಗ್ರೆಸ್ ಗೆ 36 ಮತ ಚಲಾವಣೆ ಆಗಲಿದೆ. ಆದರೆ ಜೆಡಿಎಸ್ ಗೆ 26-27 ಮತ್ತು ಕಾಂಗ್ರೆಸ್ ಗೆ 24-28 ಸೀಟು ಸಿಗಲಿದ್ದು, ಬಿಜೆಪಿ 1 ಅಥವಾ ಗರಿಷ್ಟ 5 ಸ್ಥಾನಕ್ಕೆ ಸೀಮಿತವಾಗಲಿದೆ ಎಂದು ಸಮೀಕ್ಷೆ ಹೇಳಿದೆ.


ಮತ್ತೆ ಸಿದ್ದರಾಮಯ್ಯ ಸಿಎಂ ?

ಮುಂದಿನ ಮುಖ್ಯಮಂತ್ರಿಯ ವೋಟಿಂಗ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗರಿಷ್ಟ ಮತದಾನ ಆಗಿದ್ದು, ಅವರೇ ಮುಂದಿನ ಸಿಎಂ ಎಂದು ಸಮೀಕ್ಷೆ ಹೇಳಿದೆ. ಬಹುತೇಕ ಮತದಾರರು ಕಾಂಗ್ರೆಸ್ ಬಹುಮತ ಗಳಿಸಲಿದೆ ಎಂದಿದ್ದು, ಸಿಎಂ ವೋಟಿಂಗ್ ನಲ್ಲಿ ಸಿದ್ದರಾಮಯ್ಯಗೆ ಶೇ. 39.1 ಮತದಾನ ಆಗುವ ಮೂಲಕ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.


ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು