ಮನೆ ಕಟ್ಟುವ ಯೋಜನೆಯಲ್ಲಿರುವ ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೇವಲ 70 ಸಾವಿರಕ್ಕೆ ಮನೆ ಸಿದ್ಧವಾಗುತ್ತದೆ......

ಬಡವರು ಮತ್ತು ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್ ತಪ್ಪದೇ ಈ ಮಾಹಿತಿ ನೋಡಿ  !!!




ಮನೆ ಕಟ್ಟುವುದು ಪ್ರತಿಯೊಬ್ಬನ ವ್ಯಕ್ತಿಯ ಕನಸು :

            ಒಂದು ಮನೆ ಪ್ರತಿಯೊಬ್ಬ ವ್ಯಕ್ತಿಯ ನೆಲೆಯಾಗಿದೆ. ಕುಟುಂಬ ನೆಮ್ಮದಿಯಿಂದಿರಲು ಮನೆ ಅಗತ್ಯ. ಬಿಸಿಲು, ಗಾಳಿ, ಮಳೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮನೆ ನಮ್ಮ ಜಿವಿತಾವಧಿವರೆಗೆ ಸಹಾಯಕ. ಮೊದಲು ಮಾನವ ಕಲ್ಲು ಬಂಡೆಗಳ ನಡುವೆ ಸಿಕ್ಕ ಒಂದಿಷ್ಟು ಜಗದಲ್ಲಿ ಹೇಗೋ ಕಾಲ ಕಳೆಯುತ್ತಿದ್ದ.
ಆದ್ರೆ, ಕಾಲ ಬದಲಾದಂತೆ ಹುಲ್ಲಿನಿಂದ ಮಾಡಿದ ಗುಡಿಸಲು, ನಂತರ ಮಣ್ಣಿನ ಗೋಡೆಯಿರುವ ಎಂಚಿನ ಮನೆ ಕಟ್ಟಿ ವಾಸಿಸಲು ಬಳಸಿದ. ಆದ್ರೆ, ಈಗ ಟೆಕ್ನಾಲಜಿ ಬಹಳ ವೇಗವಾಗಿ ಮುಂದುವರೆದಿದ್ದರಿಂದ ಮಾನವ ತನಗೆ ಬೇಕಾದಂತಹ ರೀತಿಯ ಮನೆ ಕಟ್ಟಿಕೊಂಡು ಜೀವಿಸುತ್ತಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಗೂ ಮನೆ ಅವಕ್ಷ್ಯಕವಾಗಿದೆ. ಈಗಿನ ಕಾಲದಲ್ಲಿ ಒಂದು ಮನೆಯ ನಿರ್ಮಾಣವೆಂದರೆ ಒಂದು ವ್ಯಕ್ತಿಯ ಜೀವಿತಾವಧಿಯ ದುಡಿಮೆಯೇ ಬೇಕಾಗುತ್ತದೆ.

ಈಗಿನ ಕಾಲದಲ್ಲಿ ಮನೆ ನಿರ್ಮಾಣ ಮಾಡಲು ಅಧಿಕ ಹಣ ಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಒಂದು ಮನೆಯನ್ನು ಕಟ್ಟಬೇಕು ಎಂಬ ಕನಸನ್ನು ಹೊಂದಿರುತ್ತಾನೆ. ಎಲ್ಲರೂ ಹೆಚ್ಚು ಖರ್ಚು ಮಾಡಿ ಮನೆ ಕಟ್ಟಲು ಸಾಧ್ಯವಿಲ್ಲ. ಆದ್ರೆ ಕಡಿಮೆ ಹಣದಲ್ಲೇ ಉತ್ತಮ ಮನೆ ನಿರ್ಮಾಣ ಮಾಡುವುದರ ಬಗ್ಗೆ ನಾವಿಲ್ಲಿ ಮಾಹಿತಿ ನೀಡ್ತಿದ್ದೇವೆ. 
ಹಾಗಿದ್ರೆ ಕಡಿಮೆ ಖರ್ಚಿನಲ್ಲಿ ಬಾಳಿಕೆ ಬರವಂತಹ ಮನೆ ಕಟ್ಟಬೇಕು ಅನ್ಕೊಂಡಿದೀರಾ? ಹಾಗಾದ್ರೆ, ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ ವ್ಯಕ್ತಿ ಬಡಾವಣೆ ಆಗಿದ್ರೂ ಅವನಿಗೆ ಒಂದು ಸುರು ಮುಖ್ಯ.


ಕಡಿಮೆ ಖರ್ಚಿನಲ್ಲಿ ಮನೆ ಕಟ್ಟುವ ಮಾಹಿತಿ ಇಲ್ಲಿದೆ.

ಎಲ್ಲರಿಗೂ   ವೆಚ್ಚದಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಡುವ ನಿಟ್ಟಿನಲ್ಲಿ ಉನ್ನತಿ ಈಕೋ ಫ್ರಾಂಡ್ಲಿ ಹೋಮ್ ಫ್ಯಾಬ್ರಿಕೇಟೆಡ್ ಕಂಪನಿಯ  ನಿರ್ವಹಿಸುತ್ತಿದೆ. ಈ ಕಂಪನಿಯು ಚಿಕ್ಕಮಗಳೂರಿನಲ್ಲಿ ಸ್ಥಾಪಿತವಾಗಿದೆ. ಈ ಕಂಪನಿಯನ್ನು ಭಾಗ್ಯದೇವ್ ಎನ್ನುವ ಸಿವಿಲ್ ಇಂಜಿನಿಯರ್ ನಡೆಸುತ್ತಿದ್ದಾರೆ. ಈ ಕಂಪನಿಯ ಕಾರ್ಯವೆಂದರೆ, ಜನರಿಗೆ ಅತಿ ಕಡಿಮೆ ಸಮಯದಲ್ಲಿ ಮತ್ತು ಅತಿ ಕಡಿಮೆ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿ ಕೊಡುವುದಾಗಿದೆ.



ಇವರು ನಿರ್ಮಿಸಿರುವ ಆಸ್ಟ್ರೇಲಿಯನ್ ಬೇಸ್ಡ್ ಆಗಿರುವಂತಹ ರೇಪಿಡ್ ವಾಲ್ ಟೆಕೆನೊಲಾಜಿ ಮೂಲಕ ಮಾಡಲಾಗುತ್ತದೆ. ಇವರು ಈ ಮನೆಗಳನ್ನು ಫ್ರೀ ಕೋಸ್ಟಡ್ ಕಾಂಕ್ರೀಟ್ ಮೂಲಕ ನಿರ್ಮಾಣ ಮಾಡುತ್ತಾರೆ. ಅಂದರೆ ಮೊದಲೇ ತಯಾರಿಸಿದ ಕಾಂಕ್ರೀಟ್ ವಾಲ್ ಗಳನ್ನು ಜೋಡಣೆ ಮಾಡುವ ಮೂಲಕ ಮನೆ ನಿರ್ಮಾಣ ಮಾಡುತ್ತಾರೆ. ಕಡಿಮೆಯೆಂದರೆ 70,000 ರೂ ಗಳಿಂದಲೂ ಮನೆಯನ್ನು ನಿರ್ಮಾಣದ ದರವು ನಿರ್ಧಾರವಾಗುತ್ತದೆ.
ದೊಡ್ಡ ಹಾಗೂ ಬಾಳಿಕೆ ಬರುವ ಮನೆ ಕಟ್ಟಿಕೊಳ್ಳಬೇಕು. ಎಂದು ಕನಸು ಕಾಣುತ್ತಿರುವವರಿಗೆ ಇದೊಂದು ಉತ್ತಮ ವ್ಯವಸ್ಥೆಯಾಗಿದೆ. ಹೆಚ್ಚು ಖರ್ಚು ಮಾಡಲು ಸಾಧ್ಯವಿಲ್ಲದವರೂ ಕೂಡ ಕಡಿಮೆ ಖರ್ಚಿನಲ್ಲಿ ಬಾಳಿಕೆ ಬರುವ ಹಾಗೂ ನೀವು ಅಂದುಕೊಂಡ ರೀತಿಯಲ್ಲಿ ಇದೀಗ ಮನೆಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ.

ಅಂದರೆ 400 ರಿಂದ 500 ಸ್ಕ್ವೇರ್ ಫೂಟ್ ಇರುವ ಮನೆ ಒಂದೂವರೆ ಲಕ್ಷದವರೆಗೆ ವೆಚ್ಚವಾಗುತ್ತದೆ. ಇನ್ನು 2 ಬಿಹೆಚ್ ಕೆ ಮನೆಯಾದರೆ, 3 ಲಕ್ಷದವರೆಗೆ ಬೇಕಾಗುತ್ತದೆ. ಫ್ರೀ ಫ್ಯಾಬ್ರಿಕೇಟೆಡ್ ಮನೆಯನ್ನು ನಿರ್ಮಾಣ ಮಾಡಲು ಮೊದಲು ಬೇಕಾಗುವುದು ಸರಿಯಾದ ಬೆಸ್ಮೆಂಟ್ ಆಗಿದೆ. ಆಯಾ ಜಾಗಕ್ಕೆ ಅನುಗುಣವಾಗಿ ಬೆಸ್ಮೆಂಟ್ ಅನ್ನು ಸರಿಯಾಗಿ ಕಾಂಕ್ರೀಟ್ ಹಾಕುವುದರ ಮೂಲಕ ರೆಡಿ ಮಾಡಿಕೊಳ್ಳಬೇಕು. ಅದಾದ ನಂತರ ವ್ಯಕ್ತಿಗಳ ಅಗತ್ಯಕ್ಕೆ ತಕ್ಕಂತೆ ಪಾರ್ಟಿಷನ್ ಗಳನ್ನೂ ಕಾಂಕ್ರೀಟ್ ಗಳ ಮೂಲಕ ತಯಾರಿಸಿಕೊಳ್ಳುತ್ತಾರೆ.

ನಂತರ ಅದನ್ನು ತಂದು ಸ್ಕ್ರೂಗಳ ಮೂಲಕ ಜೋಡಣೆ ಮಾಡುತ್ತಾರೆ. ನಂತರ ಮನೆಯನ್ನು ಸರಿಯಾಗಿ ನಿರ್ಮಾಣ ಮಾಡಿಕೊಡುತ್ತಾರೆ. ಈ ತರಹದ ನಿರ್ಮಾಣದ ಮನೆಗಳು ಸರಿ ಸುಮಾರು 200 ರಿಂದ 250 ವರ್ಷಗಳ ವರೆಗೆ ಬಾಳಿಕೆ ಬರುತ್ತದೆ. ಇಂತಹ ಮನೆಗಳನ್ನು ಅತಿ ಬಡವರು ಕೂಡ ಕಟ್ಟಿಸಿಕೊಳ್ಳಬಹುದಾಗಿದೆ.  ಈ ನಿಟ್ಟಿನಲ್ಲಿ ಈ ಕಂಪನಿಯು ಅದ್ಭುತವಾದ ಕಾರ್ಯವನ್ನು ಮಾಡುತ್ತಿದೆ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು