ನಿಮ್ಮ ವೋಟರ್ ಕಾರ್ಡ್ ಕಳೆದೋಗಿದೀಯಾ? ವೋಟರ್ ಐಡಿ ನಂಬರ್ ಕೂಡ ನೆನಪಿಲ್ವಾ ?? ಹಾಗಿದ್ರೆ ನಿಮ್ಮ ವೋಟರ್ ಕಾರ್ಡ್ ಸಂಪೂರ್ಣ ಮಾಹಿತಿ ಹೇಗೆ ತಿಳಿಯುವುದು ಎಂಬುದರ ಮಾಹಿತಿ ಇಲ್ಲಿದೆ.....
ಚುನಾವಣೆಯಲ್ಲಿ ಭಾಗವಹಿಸುವುದು ಪ್ರತಿ ಭಾರತೀಯ ನಾಗರಿಕನ ಹಕ್ಕು ಮತ್ತು ಕರ್ತವ್ಯವಾಗಿದೆ. ನೀವು ಚುನಾವಣೆಯಲ್ಲಿ ಮತದಾರರಾಗಿ ಭಾಗವಹಿಸಬೇಕೇ ಇದಕ್ಕೆ ನೀವು ವೋಟರ್ ಕಾರ್ಡ್ ಅನ್ನು ಹೊಂದಿರಬೇಕು. ಯಾರೆಲ್ಲ ವೋಟರ್ ಕಾರ್ಡ್ ಹೊಂದಿದಿರೋ ಅವರು ಮತದಾರರಾಗಿ ಮುಂಬರುವ ಚುನಾವಣಾಯಲ್ಲಿ ಭಾಗವಹಿಸುತ್ತಾರೆ,,,, ಇನ್ನು ವೋಟರ್ ಕಾರ್ಡ್ ಹೊಂದಿದ್ದು ಕಾರ್ಡ್ ಕಳೆದೋಗಿದಿಯಾ ?? ಅದರ ಐಡಿ ನಂಬರ್ ಕೂಡ ನೆನಪಿಲ್ವಾ ? ಹಾಗಿದ್ರೆ ಇವತ್ತಿನ ಈ ಲೇಖನದಲ್ಲಿ ಕಳೆದೋಗಿರೋ ನಿಮ್ಮ ವೋಟರ್ ಕಾರ್ಡ್ ನ ಎಲ್ಲಾ ಮಾಹಿತಿಯನ್ನು ಹೇಗೆ ತಿಳಿಯುವುದು ಎಂಬ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
ಮೊದಲ ಹಂತ :
ಮೊದಲನೆಯದಾಗಿ ನೀವು ನಿಮ್ಮ ಫೋನ್ ಅಥವಾ ಕಂಪ್ಯೂಟರ್ ನಲ್ಲಿ ಗೂಗಲ್ ನಲ್ಲಿ NVSP.IN ಎಂದು ಸರ್ಚ್ ಮಾಡಬೇಕು. ಅಲ್ಲಿ ಬರುವ ಸಂಬಂಧಪಟ್ಟ ವೆಬ್ ಸೈಟ ಗಳಲ್ಲಿ ಮೊದಲನೆಯ ವೆಬ್ ಸೈಟ್ nvsp.in ಮೇಲೆ ಕ್ಲಿಕ್ ಮಾಡಿ.
ಎರಡನೇ ಹಂತ :
ನಂತರ ಅಲ್ಲಿ ನಿಮ್ಮ ಮುಂದೆ ಮುಖ ಪುಟ ತೆರೆಯುತ್ತದೆ. ಅಲ್ಲಿ ನೀವು ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಹೀಗಾಗಿ ಅಲ್ಲಿ ಕಾಣುವ Register as a new user ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಗೂ ಅಲ್ಲಿ ಕೊಡಲಾದ ಕ್ಯಾಪ್ಚ್ಯಾ ಕೋಡ್ ಅನ್ನು ನಮೂದಿಸಿ ಸೆಂಡ್ ಒಟಿಪಿ ಮಾಡಿಕೊಳ್ಳಿ. ನಂತರ ನಿಮ್ಮ ಸರಿಯಾದ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ಹಾಕಿ ನೋಂದಾವಣಿ ಮಾಡಿಕೊಳ್ಳಿ.
ಮೂರನೇ ಹಂತ :
ನಿಮ್ಮ ನೋಂದಾವಣಿ ಪ್ರಕ್ರಿಯೆ ಮುಗಿದ ನಂತರ ನಿಮ್ಮ ಮುಂದೆ ಮತ್ತೆ ಮುಖಪುಟ ತೆರೆಯುತ್ತದೆ. ಅಲ್ಲಿ ನೀವು ಲಾಗ್ ಇನ್ ಮೇಲೆ ಕ್ಲಿಕ್ ಮಾಡಿ. ನೀವು ಈ ಮುಂದೆ ರಿಜಿಸ್ಟರ್ ವೇಳೆ ಹಾಕಿರುವ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ಮತ್ತು ನೀವು ಕ್ರಿಯೇಟ್ ಮಾಡಿರುವ ಪಾಸ್ವರ್ಡ್ ಅನ್ನು ನಮೂದಿಸಿ ಲಾಗ್ ಇನ್ ಮಾಡಿಕೊಳ್ಳಬೇಕು.
ನಾಲ್ಕನೇ ಹಂತ:
ಈ ಹಂತದಲ್ಲಿ ನೀವು ಲಾಗ್ ಇನ್ ಮಾಡಿದ ನಂತರ ಮುಖಪುಟದಲ್ಲಿ ಹಲವಾರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ Serach In Electoral Roll ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಐದನೇ ಹಂತ :
ಈ ಹಂತದಲ್ಲಿ ನಿಮ್ಮ ಮುಂದೆ ಒಂದು ಫಾರ್ಮ್ ತೆರೆಯುತ್ತದೆ. ಅದರಲ್ಲಿ ನಿಮ್ಮ ಹೆಸರು, ತಂದೆ ಹೆಸರು, ಹುಟ್ಟಿದ ದಿನಾಂಕ, ರಾಜ್ಯ ಮತ್ತು ಜಿಲ್ಲೆ ಹಾಗೂ ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಕೊಡಲಾದ ಕ್ಯಾಪ್ಚ್ಯಾ ವನ್ನು ನಮೂದಿಸಿ ಸರ್ಚ್ ಎಂದು ಕ್ಲಿಕ್ ಮಾಡಿ.
ಕೊನೆಯದಾಗಿ ಸರ್ಚ್ ಎಂದು ಕ್ಲಿಕ್ ಮಾಡಿದಾಗ ನೀವು ನಿಮ್ಮ ವೋಟರ್ ಕಾರ್ಡ್ ಸಂಖ್ಯೆಯನ್ನು ಹಾಗೂ ಸಂಪೂರ್ಣ ಮಾಹಿತಿಯನ್ನು ನೋಡಬಹುದು ಇದಕ್ಕಾಗಿ ನೀವು ಅಲ್ಲಿ ಕಾಣುವ view details ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Social