ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುವುದೇನೆಂದರೆ ರಾಜ್ಯದ ಜನತೆಗೆ ಮುಂಬರುವ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಹಬ್ಬ ಅದುವೇ ಕರ್ನಾಟಕ ಚುನಾವಣೆ ಮೇ ೧೦ ರಂದು ಜರುಗುವ ಚುನಾವಣೆಯಲ್ಲಿ ನಾಗರಿಕರು ಭಾಗವಹಿಸಬಹುದು. ಇದು ಪ್ರಜಾಪ್ರಭುತ್ವದ ನಮ್ಮ ಹಕ್ಕು ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಕೊಡಲಾಗಿದೆ.
ಬನ್ನಿ ವೀಕ್ಷಕರೇ ಇಂದಿನ ಲೇಖನದಲ್ಲಿ ನಿಮಗೆ ಮೊದಲನೆಯದಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೇಗೆ ಚೆಕ್ ಮಾಡಿಕೊಳ್ಳುವುದು ಎಂಬುದನ್ನು ತಿಳಿಸಿಕೊಡುತ್ತೇನೆ.
ಮೊದಲನೇ ಹಂತ :
ಮೊದಲಿಗೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಗೂಗಲ್ ಎಂದು ಸರ್ಚ್ ಮಾಡಿ. ಅಲ್ಲಿ CEO Karnataka ಎಂದು ಟೈಪ್ ಮಡಿದ ಬಳಿಕ ನಿಮಗೆ ಗೂಗಲ್ ನಲ್ಲಿ ಕಾಣಿಸಿಕೊಳ್ಳುವುದು ಮುಖ್ಯ ಚುನಾವಣೆ ಅಧಿಕಾರಿಗಳಾ ವೆಬ್ ಸೈಟ್ ತೆರೆಯುತ್ತದೆ. ಅಲ್ಲಿ ಕ್ಲಿಕ್ ಮಾಡಿ
ಎರಡನೇ ಹಂತ :
ಪೇಜ್ ನಲ್ಲಿ ಕಾಣುವ ಮುಖ್ಯಚುನಾವಣಾಧಿಕಾರಿ ಲಿಂಕ್ ನ ಕ್ಲಿಕ್ ಮಾಡಿ, ನಂತರ ಸ್ಕ್ರೋಲ್ ಮಾಡುವುದರ ಮೂಲಕ ಅಲ್ಲಿ ಹಲವಾರು ಆಯ್ಕೆ ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ "ವೀಕ್ಷಿಸಿ ಮತದಾರರ ಪಟ್ಟಿ" ಎಂಬುದರ ಮೇಲೆ ಕ್ಲಿಕ್ ಮಾಡಿ.
ಪೇಜ್ ನಲ್ಲಿ ಕಾಣುವ ಮುಖ್ಯಚುನಾವಣಾಧಿಕಾರಿ ಲಿಂಕ್ ನ ಕ್ಲಿಕ್ ಮಾಡಿ, ನಂತರ ಸ್ಕ್ರೋಲ್ ಮಾಡುವುದರ ಮೂಲಕ ಅಲ್ಲಿ ಹಲವಾರು ಆಯ್ಕೆ ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ "ವೀಕ್ಷಿಸಿ ಮತದಾರರ ಪಟ್ಟಿ" ಎಂಬುದರ ಮೇಲೆ ಕ್ಲಿಕ್ ಮಾಡಿ.
ಮೂರನೇ ಹಂತ :
ಮುಂದುವರೆದು 'ವೀಕ್ಷಿಸಿ ಮತದಾರರ ಪಟ್ಟಿ' ಯಲ್ಲಿ ಎರಡು ರೀತಿಯ ಆಯ್ಕೆ ಕಂಡು ಬರುತ್ತವೆ. ಅಂತಿಮ ಮತದಾರರ ಪಟ್ಟಿ ಹಾಗೂ ಕರಡು ಮತದಾರರ ಪಟ್ಟಿ ಇವುಗಳಲ್ಲಿ "ಅಂತಿಮ ಮತದಾರರ ಪಟ್ಟಿ" ಯನ್ನು ಕ್ಲಿಕ್ ಮಾಡಿ. ಆಗ ನಿಮ್ಮ ಮುಂದೆ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳು ತೆರೆಯುತ್ತವೆ.
ಅವುಗಳಲ್ಲಿ ನಿಮ್ಮ ಜಿಲ್ಲೆಯನ್ನು ನೀವು ಆಯ್ಕೆ ಮಾಡಬೇಕು.
ನಾಲ್ಕನೇ ಹಂತ :
ಈ ಹಂತದಲ್ಲಿ ನೀವು ಆಯ್ಕೆ ಮಾಡಿರುವ ಜಿಲ್ಲೆಯಲ್ಲಿ ಬರುವ ವಿಧಾಸಭಾ ಕ್ಷೇತ್ರಗಳ ಪಟ್ಟಿ ತೆರೆಯುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಮೇಲೆ ಕ್ಲಿಕ್ ಮಾಡಿ.
ಐದನೇ ಹಂತ :
ಈ ಹಂತದಲ್ಲಿ ನೀವು ಆಯ್ಕೆ ಮಾಡಿರುವ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಎಲ್ಲ ಮತಗಟ್ಟೆಗಳ ಪಟ್ಟಿ ತೆರೆಯುತ್ತವೆ. ಅವುಗಳಲ್ಲಿ ನೀವು ನಿಮ್ಮ ಮತಗಟ್ಟೆಯನ್ನು ಆಯ್ಕೆ ಮಾಡಿ ಅದರ ಮೇಲೆ ಕ್ಲಿಕ್ ಮಾಡಿ.
ಆರನೇ ಹಂತ :
ಈ ಹಂತದಲ್ಲಿ ನಿಮ್ಮ ಮತಗಟ್ಟೆಗಳನ್ನು ಆಯ್ಕೆ ಮಾಡಿದ ನಂತರ ಅಲ್ಲಿ ಕ್ಯಾಪ್ಚ್ಯಾ ಕೋಡ್ ಅನ್ನು ನಮೂದಿಸಿ ಅಲ್ಲಿ ಕಾಣುವ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ.
ಕೊನೆಯ ಹಾಗೂ ಏಳನೇ ಹಂತ :
ಅದುವೇ ಡೌನ್ಲೋಡ್ ಮಾಡಿರುವ ಮತದಾರರ ಪಟ್ಟಿಯ ಮಾಹಿತಿಯನ್ನು ಕ್ಲಿಕ್ ಮಾಡಿ ಅದರಲ್ಲಿ ನಿಮ್ಮ ಹೆಸರು ಇದೆಯೇ ? ಇಲ್ಲವೋ? ಎಂದು ತಿಳಿದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
News
ಶಶಿಕಾಂತ
ಪ್ರತ್ಯುತ್ತರಅಳಿಸಿ