ಮನೆಯಲ್ಲೇ ಕುಳಿತು ಸುಲಭವಾಗಿ ಆದಾಯ & ಜಾತಿ ಪ್ರಮಾಣಪತ್ರ ಪಡೆಯುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ:
ಗಂಟೆ ಗಟ್ಟಲೆ ಕ್ಯೂನಲ್ಲಿ ನಿಂತು ಸುಸ್ತಾಗದೆ, ಮನೆಯಲ್ಲೇ ಕುಳಿತು ಈಗ ನೀವು ನಾಡಕಚೇರಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಪಡೆಯಲು ಯಾವ ರೀತಿಯಾಗಿ ಸುಲಭವಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಇಂದು ಇಲ್ಲಿ ಸಂಪೂರ್ಣವಾಗಿ ಮಾಹಿತಿ ನೀಡಲಿದ್ದೇವೆ.
ಇಲ್ಲಿ ನೀಡಿರುವಂತಹ ಸುಲಭ ವಿಧಾನವನ್ನು ಅನುಸರಿಸಿ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಪಡೆಯಿರಿ:
⭐ ಮೊದಲಿಗೆ ನೀವು ನಿಮ್ಮ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟಾಪ್ ನಲ್ಲಿ ಯಾವುದಾದರು ವೆಬ್ ಬ್ರೌಸರ್ ಅನ್ನು ಓಪನ್ ಮಾಡಿಕೊಂಡು ಅಲ್ಲಿ ನಾಡಕಚೇರಿಯ ಅಫೀಷಿಯಲ್ ವೆಬ್ ಸೈಟ ಓಪನ್ ಮಾಡಬೇಕು.
⭐ ಈಗ ನಿಮ್ಮ ಮುಂದೆ ಅದರ ಒಂದು ಪುಟ ತೆರೆದುಕೊಳ್ಳುತ್ತದೆ.
⭐ ಅಲ್ಲಿ ಮೊದಲಿಗೆ ನೀವು ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ಗೆಟ್ ಟು ಒಟಿಪಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು.
⭐ ನಂತರ ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಬರುತ್ತದೆ. ಅದನ್ನು ಅಲ್ಲಿ ಹಾಕಬೇಕು.
⭐ ನಂತರ ಲಾಗ್ ಇನ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು.
⭐ ನಿಮ್ಮ ಮುಂದೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ವೀವ್ ರಿಕ್ವೆಸ್ಟ್ ಎನ್ನುವುದು ಕಾಣಿಸುತ್ತದೆ.
⭐ ಅಲ್ಲಿ ಹೋದಾಗ ಕೆಲವೊಂದಿಷ್ಟು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
⭐ ಆಗ ಅಲ್ಲಿ ನಿಮ್ಮ ಮುಂದೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
⭐ ಅಲ್ಲಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
⭐ ನಂತರ ಅಲ್ಲಿ ಒಂದಿಷ್ಟು ಮಾಹಿತಿಗಳನ್ನು ಕೇಳುತ್ತದೆ.
ನಿಮ್ಮ ಜಿಲ್ಲೆ, ತಾಲೂಕು, ಊರು ಅವುಗಳ ಹೆಸರನ್ನು ನಮೂದಿಸಬೇಕು.
⭐ ಅಲ್ಲಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇರುತ್ತದೆ.
⭐ ನಂತರ ಆಧಾರ್ ಕಾರ್ಡ್ನಲ್ಲಿ ಇರುವಂತೆ ಹೆಸರನ್ನು ಹಾಕಬೇಕು. ಅರ್ಜಿದಾರರ ತಂದೆಯ ಹೆಸರನ್ನು ಹಾಕಬೇಕು. ನಂತರ ನಿಮ್ಮ ಜಾತಿ ಯಾವುದು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು.
⭐ ನಂತರ ಕೆಳಗಡೆ ಪ್ರಿಂಟ್ ಕನಸೆಂಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮುಂದೆ ಒಂದು ಫಾರ್ಮೆಟ್ ಕಾಣಿಸುತ್ತದೆ. ಅದನ್ನು ನೀವು ಸೇವ್ ಮಾಡಿ ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು.
⭐ ಈಗಾಗಲೇ ನೀವು ಜಾತಿ ಅಥವಾ ಆದಾಯ ಪ್ರಮಾಣ ಪತ್ರವನ್ನು ಹೊಂದಿದ್ದಾರೆ, ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಬರುವುದಿಲ್ಲ. ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಅಭ್ಯರ್ಥಿಯ ಜಾತಿ ಮತ್ತು ಆದಾಯ ಪತ್ರ ಇದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಕೆಳಗೆ ಆಧಾರ್ ಕನಸೆಂಟ್ ಫಾರ್ಮ್ ಎಂಬುದು ಕಾಣಿಸುತ್ತದೆ. ಅದನ್ನು ಆಯ್ಕೆಮಾಡಿಕೊಂಡು, ಕೆಳಗಡೆ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ವ್ಯಕ್ತಿಯ ಈಗಾಗಲೇ ಜಾತಿ ಮತ್ತು ಆದಾಯ ಪ್ರಮಾಣಪತ್ರ ಹೊಂದಿದ್ದಾನೆಯೇ ? ಇಲ್ಲವೇ? ಎಂಬುದು ತಿಳಿಯುತ್ತದೆ.
⭐ ಅಲ್ಲಿ ಓಕೇ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮುಂದೆ ಒಂದು ಅರ್ಜಿ ಕಾಣಿಸುತ್ತದೆ. ಅದರಲ್ಲಿ ಕೇಳಿರುವಂತಹ ಮಾಹಿತಿಗಳನ್ನು ಸರಿಯಾಗಿ ತುಂಬಬೇಕು. ನಂತರ ಕೆಲವೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅದನ್ನು ಅಪ್ಲೋಡ್ ಮಾಡಬೇಕು. ಅಪ್ಲೋಡ್ ಮಡಿದ ನಂತರ, ಸೇವ್ ಎನ್ನುವುದನ್ನು ಕ್ಲಿಕ್ ಮಾಡಬೇಕು. ನಂತರ ಕೆಳಗಡೆ ಕಾಣಿಸುವ ಕ್ಯಾಪ್ಚ್ಯಾ ಕೋಡ್ ಅನ್ನು ಎಂಟ್ರಿ ಮಾಡಿ ಸೇವ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಒಂದು ಆರ್ ಡಿ ನಂಬರ್ ಸಿಗುತ್ತದೆ. ಅದನ್ನು ನೀವು ತೆಗೆದುಕೊಳ್ಳಬೇಕು.
ಜಾತಿ ಹಾಗೂ ಆದಾಯ ಪ್ರಮಾಣಪತ್ರವನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದಕ್ಕೆ ನೀವು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ರೀತಿಯಾಗಿ ನೀವು ಬಹಳ ಸುಲಭವಾಗಿ ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರಲ್ಲಿ ಹಾಗೂ ನಿಮ್ಮ ಪರಿಚಿತರು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಇಂತಹ ಉಪಯುಕ್ತ ಮಾಹಿತಿ ಎಲ್ಲರಿಗು ಸಹಾಯಕವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Social