ಕೇವಲ ಬಾಯಿ ಮಾತಿನ ಮೂಲಕ ಆಸ್ತಿ ಹಂಚಿಕೆ...!

 ಕೇವಲ ಬಾಯಿ ಮಾತಿನ ಮೂಲಕ ಆಸ್ತಿ ಹಂಚಿಕೊಂಡಿದ್ದೀರಾ?  ಇದಕ್ಕೆ  ಕಾನೂನು ಬದ್ಧ ಹಕ್ಕು ಇದೆಯೋ..? ಇಲ್ಲವೋ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.


'ಕೆನರಾ ಬ್ಯಾಂಕ್' ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಆಸ್ತಿ ಹಂಚಿಕೆಯ ಒಪ್ಪಂದವನ್ನು ಹಿಂದಿನ ಕಾಲದಲ್ಲಿ ರಿಜಿಸ್ಟ್ರೇಷನ್ ಪ್ರೋಸೆಸ್ ಅನ್ನು ಮಾಡುತ್ತಿರಲಿಲ್ಲ. ಕಾನೂನಿನ ಜ್ಞಾನದ ಕೊರತೆಯಿಂದ ಮುಂದೆ ಆಗುವ ತೊಂದರೆಗಳ ಬಗ್ಗೆ ಯೋಚಿಸದೆ ಬಾಯಿ ಮಾತಿನಿಂದಲೇ ಪಂಚಾಯಿತಿ ಸೇರಿಸಿ ಅವರವರೇ ತೀರ್ಮಾನಕ್ಕೆ ಬಂದು ಆಸ್ತಿ ಹಂಚಿಕೆ, ಹಕ್ಕು ಬಿಟ್ಟು ಕೊಡುವಿಕೆಯನ್ನು ಮಾಡುತ್ತಿದ್ದರು. ಬಾಯಿ ಮಾತಿನ ಮೂಲಕವೇ ನನಗೆ ಇಷ್ಟು ಆಸ್ತಿ ಬರಬೇಕು ಹಾಗೂ ನಿಮಗೆ ಇಷ್ಟು ಆಸ್ತಿ ಸಲ್ಲುತ್ತದೆ, ತಂದೆ ತಾಯಿಯ ಹೆಸರಿನಲ್ಲಿ ಇಷ್ಟಿರಬೇಕು ಎಂದು ಅವರವರೇ ನಿರ್ಧರಿಸುತ್ತಿದ್ದರು.

ಯಾವುದೇ ರಿಜಿಸ್ಟ್ರೇಷನ್ ಗಳನ್ನು ಮಾಡುತ್ತಿರಲಿಲ್ಲ. ಕಾಲ ಸೇರಿದಂತೆ ಭೂಮಿಯ ಬೆಲೆಯೂ ಹೆಚ್ಚಾಗುತ್ತಾ ಹೋಯಿತು. ಆಸ್ತಿಗಳಿಗಾಗಿ ಕಚ್ಚಾಡುವಂತಹ ಪರಿಸ್ಥಿತಿ ಬಂತು. ಅಣ್ಣ-ತಮ್ಮಂದಿರ ಮಧ್ಯೆ ನಿನಗೆ ಜಾಸ್ತಿ, ನನಗೆ ಕಡಿಮೆ ಎನ್ನುವ ಜಗಳ ಪ್ರಾರಂಭವಾಯಿತು. ' ನಾನು ನ್ಯಾಯಾಲಯದ ಮೆಟ್ಟಿಲೇರುವೆ ನನ್ನ ಹಕ್ಕನ್ನು ಪಡೆದುಕೊಳ್ಳುವೆ.' ಎನ್ನುತ್ತಾ ಕೋರ್ಟ್ ನಲ್ಲಿ ದಾವೆಗಳನ್ನು ಹಾಕಲು ಪ್ರಾರಂಭಿಸಿದರು.

ಹೆಣ್ಣು ಮಕ್ಕಳೆಲ್ಲರೂ ಮದುವೆಯಾಗಿ ಹೋಗುತ್ತಾರೆ. ಎಂಬ ಕಾರಣಕ್ಕೆ ಅವರು ತಮಗೆ ಆಸ್ತಿಯಲ್ಲಿ ಯಾವ ಪಾಲು ಬೇಡ. ನಮ್ಮ ಹಕ್ಕನ್ನು ಕೂಡ ನೀವೇ ಹಂಚಿಕೊಳ್ಳಿ. ಎಂದು ಬಿಟ್ಟು ಕೊಡುತ್ತಿದ್ದರು. ಆ ರೀತಿಯಾಗಿ ಬಿಟ್ಟು ಕೊಟ್ಟ ಆಸ್ತಿ ಯಾರ ಉಳಿಕೆಯಲ್ಲಿ ಇರುತ್ತೋ ಅವರು ತಮ್ಮ ಹೆಸರಿನಲ್ಲಿ ಖಾತೆಯನ್ನು ಮಾಡಿಕೊಂಡು ಅನುಭವಿಸುತ್ತ ಇರುತ್ತಾರೆ. ದಿನ ಕಳೆದಂತೆ ಆಸ್ತಿಯ ಬೆಲೆ ಜಾಸ್ತಿ ಆಗುತ್ತಾ ಹೋಗುತ್ತದೆ.

ಅಪ್ಪು ನಿಧನರಾದಾಗ ರಮ್ಯಾ ಎಲ್ಲಿದ್ರಂತೆ ಗೊತ್ತಾ ?? ಕೊನೆಗೂ ಬಯಲಾಯಿತು ನೋಡಿ ರಹಸ್ಯ ......

ಮುಂಚೆ ರಿಜಿಸ್ಟ್ರೇಷನ್ ಆಗದಿರುವ ಕಾರಣದಿಂದಾಗಿ ದಾಖಲೆಗಳು ಸರಿಯಾಗಿ ಇರುತ್ತಿರಲಿಲ್ಲ. ದಾಖಲೆಗಳ ಕೊರತೆಯಿಂದಾಗಿ ಹೆಚ್ಚಿನ ಪಾಲನ್ನು ಪಡೆಯುವುದರ ಸಲುವಾಗಿ ನ್ಯಾಯಾಲಯದಲ್ಲಿ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತದೆ. ಇತ್ತಿಚ್ಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲಿಯೂ ತಕರಾರು ಶುರುವಾಗಿದೆ. ಉದಾಹರಣೆಗೆ ಒಂದು ಒಟ್ಟು ಕುಟುಂಬವಿರುತ್ತದೆ. ಅವಿಭಕ್ತ ಕುಟುಂಬದಲ್ಲಿ ತಂದೆ, ತಾಯಿ, ಸಹೋದರ, ಸಹೋದರಿ ಸೇರಿದಂತೆ ಅನೇಕ ಜನರು ಇರುತ್ತಾರೆ.

ಮದುವೆ ಮಾಡಿಕೊಟ್ಟಂತಹ ಹೆಣ್ಣು ಮಕ್ಕಳು ತಮಗೂ ಕೂಡ ಹಕ್ಕು ಬೇಕು ಎಂದು ಕೇಳುತ್ತಾರೆ. ಅಂದರೆ, ಹಿಂದೆ ಕೇವಲ ಬಾಯಿ ಮಾತಿನಲ್ಲಿ ಆಸ್ತಿಯನ್ನು ಬಿಟ್ಟು ಕೊಟ್ಟಿರುತ್ತಿದ್ದರು. ಯಾವುದೇ ರಿಜಿಸ್ಟ್ರೇಷನ್ ಮಾಡಿಸದೇ ಇರುವುದರ ಕಾರಣದಿಂದ ಜನರ ಮಾತನ್ನು ಕೇಳಿಸಿಕೊಂಡು ಮತ್ತು ಕಾನೂನಿನ ಜ್ಞಾನವನ್ನು ಪಡೆದುಕೊಂಡು ತಮ್ಮ ಹಕ್ಕು ಬೇಕು ಎಂದು ಕೇಳಲು ಬರಬಹುದು.

ಅಥವಾ ಗಂಡು ಮಕ್ಕಳಲ್ಲಿ ಹಿರಿಯ ಅಣ್ಣನಿಗೆ ಜಾಸ್ತಿ ಹಕ್ಕನ್ನು ನೀಡಿರುತ್ತಾರೆ. ತಂದೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹಿರಿಯಣ್ಣನೇ ಹೊತ್ತಿರುತ್ತಾನೆ. ಆಗ ಉಳಿದಂತಹ ಸಹೋದರ-ಸಹೋದರಿಯರು ಎಲ್ಲರು ಕೂಡ ಬಾಯಿ ಮಾತಿನ ಮೂಲಕ ಹಿರಿಯ ಅಣ್ಣನಿಗೆ ಸ್ವಲ್ಪ ಜಾಸ್ತಿ ಹಕ್ಕನ್ನು ಕೊಟ್ಟು ಉಳಿದವರು ಕಡಿಮೆ ಹಕ್ಕನ್ನು ಪಡೆದುಕೊಂಡಿರುತ್ತಾರೆ.

ಕರ್ನಾಟಕ ವಿಧಾನಸಭಾ ಸಮೀಕ್ಷೆ - 2023

ಎಲ್ಲಾ ಕೇಸ್ ಗಳಿಗೂ ಇದನ್ನು ಅನ್ವಯಿಸಲು ಸಾಧ್ಯವಿಲ್ಲ. ಬಾಯಿ ಮಾತಿನಲ್ಲಿಯೇ ಎಲ್ಲರು ಆಸ್ತಿಯನ್ನು ನೀಡಿರುವುದು ಹೌದು ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿದಾಗ ಮಾತ್ರ ಅನ್ವಯವಾಗುತ್ತದೆ. ನ್ಯಾಯಾಲಯವು ಕೂಲಂಕುಷವಾಗಿ ವಿಚಾರಿಸಿದ ಬಳಿಕ ನಿರ್ಧಾರವನ್ನು ಕೊಡುತ್ತದೆ. ಕೆಲವು ನಿರ್ಧಿಷ್ಟ ಸಾಕ್ಷಾಧಾರಗಳ ಆಧಾರಿತವಾಗಿ 'ಓರಲ್ ಪ್ರಾಪರ್ಟಿ ಸೆಟಲ್ಮೆಂಟ್' ನ್ನು ಮಾನ್ಯಗೊಳಿಸುತ್ತದೆ.

ತುಂಬಾ ವರ್ಷಗಳು ಆದ್ಮೇಲೆ ಹಿರಿಯಣ್ಣನಿಗೆ ಜಾಸ್ತಿ ಆಸ್ತಿ ಇದೆ, ನಮಗೆಲ್ಲ ಕಡಿಮೆ ಇದೆ ಎಂಬ ತಕರಾರು ಮೂಡುತ್ತದೆ. ಎಲ್ಲರಿಗು ಸಮಪಾಲು ಬರಬೇಕು ಎಂದು ಕೋರ್ಟ್ ಮೆಟ್ಟಿಲನ್ನು ಏರುವ ಪರಿಸ್ಥಿತಿಯು ಬಂದೋಗಬಹುದು. ಈ ರೀತಿಯ ಕೇಸ್ ಗಳು ಹೆಚ್ಚಾಗಿ ಕಂಡುಬರುತ್ತಿರುವ ಕಾರಣ 'ಪ್ರಿನ್ಸಿಪಲ್ ಆಪ್ ಎಸ್ಟೋಫೆಲ್' ಅನ್ನು ಅನುಸರಿಸುತ್ತಾರೆ.

ಪ್ರಾಮಾಣಿಕ ಎಸ್ ಐ ಲಂಚ ಪಡೆಯುವಾಗ ಸಿಕ್ಕಿಬಿದ್ಲು!



ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು