ನಿಮ್ಮ ಜಮೀನಿಗೆ ಸಂಬಂಧಿಸಿದ ಹಳೆಯ ದಾಖಲೆ ಸಿಗ್ತಾ ಇಲ್ವಾ? ಹಾಗಾದ್ರೆ, ಈ ದಾಖಲೆಗಳು ಎಲ್ಲಿ ಸಿಗುತ್ತೆ ಇದನ್ನು ಪಡೆಯಲು ಏನು ಮಾಡಬೇಕು ನೋಡಿ...
ನಿಮ್ಮ ಜಮೀನಿಗೆ ಸಂಬಂಧಿಸಿದಂತೆ ಹಳೆಯ ದಾಖಲೆಗಳು ಎಲ್ಲಿ ಮತ್ತು ಹೇಗೆ ಸಿಗುತ್ತದೆ ? ಪ್ರತಿ ಜಮೀನುದಾರನು ಈ ಮಾಹಿತಿ ತಿಳಿದುಕೊಳ್ಳಿ ಜಮೀನಿಗೆ ಸಂಬಂಧಿಸಿದಂತೆ ಹಳೆಯ ದಾಖಲೆಗಳು ಬೇಕಾಗುತ್ತವೆ. ಇವುಗಳಿಲ್ಲದಿದ್ದರೆ ಮುಂದೊಂದು ದಿನ ಇದಕ್ಕೆ ಸಂಬಂಧಪಟ್ಟ ಕಚೇರಿಗಳು ಹಾಗೂ ಕೋರ್ಟ್ ಗೆ ಅಲೆಯಬೇಕಾಗುತ್ತದೆ. ಈ ದಾಖಲೆಗಳು ಹಳೆಯವೇ ಆದರೂ, ನಮ್ಮ ಜಮೀನಿಗೆ ಸಂಬಂಧಿಸಿದ ಆಧಾರದ ಮೂಲ ಇವೆ ಆಗಿರುತ್ತದೆ.
ಹಾಗಾದ್ರೆ, ಜಮೀನಿನ ಹಳೆಯ ದಾಖಲೆಗಳು ಯಾವುವು, ಅವುಗಳಿಂದ ಏನೆಲ್ಲಾ ಪ್ರಯೋಜನಗಳಿವೆ ಹಾಗೂ ಜಮೀನಿನ ಹಳೆಯ ದಾಖಲೆಗಳನ್ನು ಎಲ್ಲಿ ಮತ್ತು ಹೇಗೆ ಪಡೆಯಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡೋಣ ಬನ್ನಿ. ಜಮೀನಿಗೆ ಸಂಬಂಧ ಪಟ್ಟಂತೆ ಹಳೆಯ ದಾಖಲೆಗಳು ಪ್ರಯೋಜನಕ್ಕೆ ಬರುತ್ತದೆ.
ಇದು ಭೂಮಿಯನ್ನು ಗುರುತಿಸುವ ಹಳೆಯ ದಾಖಲೆ ಆಗಿದೆ. ಇದನ್ನು ಬೆಸ್ಟ್ ರೆಕಾರ್ಡ್ ಎಂದು ಕರೆಯಬಹುದು. ಟಿಪ್ಪಣಿ ದಾಖಲೆ ಇದು ಒಂದು ಜಮೀನಿಗೆ ಮುಖ್ಯವಾಗಿ ಬೇಕಾಗುವ ದಾಖಲೆಯಾಗಿದೆ. ಹಿಸ್ಸಾ ಸರ್ವೇ ಬುಕ್ ಜನಸಂಖ್ಯೆ ಬೆಳೆದಂತೆ ಸಣ್ಣ ಸಣ್ಣ ಹಿಡುವಳಿಯನ್ನು ರೈತರು ಹೊಂದುತ್ತಿದ್ದರು. ಆದರೆ ಅವರ ಹಿಸ್ಸಾಕೆ ಅನುಗುಣವಾಗಿ ನಕ್ಷೆ ಇಲ್ಲದೆ ತೊಂದರೆ ಆಗುತ್ತಿತ್ತು.
ಪ್ರತಿಯೊಬ್ಬರ ಜಮೀನಿಗೆ ಪ್ರತ್ಯೇಕ್ಷವಾದ ಹೆಸರು ಮತ್ತು ಹಿನ್ನೆಲೆ ಇರುತ್ತದೆ. ಜಮೀನು ಈ ಹಿಂದೆ ಯಾರ ಹೆಸರಿನಲ್ಲಿ ಇತ್ತು, ಆ ಜಮೀನಿನ ಪೂರ್ವಾಪರ ಇತಿಹಾಸ ದಾಖಲಿಸಿ ಇರುವ ಪದ್ಧತಿ ಮೊದಲಿನಿನಾದಳು ಜಾರಿಯಲ್ಲಿದೆ. ಇಂತಹ ದಾಖಲೆಗಳನ್ನು ಹಳೆಯ ದಾಖಲೆಗಳು ಎನ್ನುತ್ತೇವೆ. ಮೂಲ ಸರ್ವೇ ಬುಕ್ ಅಂದರೆ, 1934/1935 ರಲ್ಲಿ ಮಾಡಲಾದ ಮೊತ್ತ ಮೊದಲ ಸರ್ವೇ ಆಗಿರುತ್ತದೆ.
ಈ ಹಿನ್ನೆಲೆ ಹಿಸ್ಸಾ ಸರ್ವೆಯನ್ನು ರಾಜ್ಯದಂತ ಮಾಡಲಾಗುತ್ತಿತ್ತು. ರೈತರ ಪಾಲಿನ ಜಮೀನಿಗೆ ನಕ್ಷೆ ಮಾಡಿ ಹಿಸ್ಸಾ ಸಂಖ್ಯೆ ಕೊಡಲಾಯಿತು. ಇನ್ನಿತರ ದಾಖಲೆಗಳು ಎಂದರೆ ಪಕ್ಕಾ ಪುಸ್ತಕ, ಆಕರಬಂಧ, ಹಿಸ್ಸಾ ಸರ್ವೇ ನಕ್ಷೆಯಾಗಿದೆ. ಜಮೀನಿನ ಹಳೆಯ ದಾಖಲೆಗಳಿಂದ ಕೆಲವು ಪ್ರಯೋಜನಗಳಿವೆ. ಜಮೀನಿನ ಹದ್ದುಬಸ್ತು ಗುರುತಿಸಲು, ಗಡಿಗಳನ್ನು ಗುರುತಿಸಲು ಹಳೆಯ ದಾಖಲಾತಿಗಳು ಸಹಾಯಕವಾಗಿದೆ. ಸರ್ಕಾರದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ಖಾಸಗಿಯವರಿಗೆ ಜಮೀನು ಬೇಕಾಗುತ್ತದೆ.
ಭೂಪರಿವರ್ತನೆ ಮಾಡಲು ಕೆಲವೊಮ್ಮೆ ಕಡ್ಡಾಯವಾಗಿ ಹಳೆಯ ದಾಖಲಾತಿಗಳನ್ನು ಕೇಳಲಾಗುತ್ತದೆ. ಜಮೀನಿಗೆ ಸಂಬಂಧಿಸಿದ ಹಳೆಯ ದಾಖಲಾತಿಗಳನ್ನು ತಾಲೂಕಿನ ಸರ್ವೇ ಇಲಾಖೆಯ ತಾಲೂಕು ಕಚೇರಿಯಲ್ಲಿ ಸಿಗುತ್ತದೆ. ಮೊದಲಿಗೆ ನಮುನೆ ಅರ್ಜಿಯನ್ನು ತೆಗೆದುಕೊಂಡು ಜಮಿನಿನ ಯಾವ ದಾಖಲೆಗಳು ಬೇಕು ಎಂಬುವುದನ್ನು ಸ್ಪಷ್ಟವಾಗಿ ಬರೆಯಬೇಕು. ಅರ್ಜಿಯನ್ನು ಭರ್ತಿ ಮಾಡಬೇಕು. ನಮುನೆ ಅರ್ಜಿ ಆಧಾರ್ ಕಾರ್ಡ್, ಪಹಣಿ ಕಾರ್ಡ್ ಲಗತ್ತಿಸಿ ಸರ್ವೇ ಕಚೇರಿಯಲ್ಲಿ ಕೊಡಬೇಕು.
ಅದರಂತೆ, ರೈತರು ಜಮೀನನ್ನು ವಶಪಡಿಸಿಕೊಂಡು ಅವರಿಗೆ ಪರಿಹಾರ ಕೊಡಲು ಹಳೆಯ ದಾಖಲಾತಿಗಳು ಬೇಕಾಗುತ್ತದೆ. ಜಮೀನಿನ ಹಕ್ಕು ವರ್ಗಾವಣೆ ಹೇಗಾಯಿತು, ಹಳೆ ಮಾಲೀಕನ ಹೆಸರು ಮೊದಲಾದ ಪ್ರಶ್ನೆಗಳಿಗೆ ಜಮೀನಿನ ಹಳೆಯ ದಾಖಲಾತಿಗಳು ಉತ್ತರ ಕೊಡುತ್ತದೆ. ಜಮೀನಿನ ಪೂರ್ವಜರ ಬಗ್ಗೆ ಹಳೆಯ ದಾಖಲಾತಿಗಳಿಂದ ತಿಳಿಯುತ್ತದೆ. ಜಮೀನಿಗೆ ಸಂಬಂದಿಸಿದ ನ್ಯಾಯಾಲಯದಲ್ಲಿ ತಕರಾರು ಇದ್ದಾರೆ ಹಳೆಯ ದಾಖಲಾತಿಗಳನ್ನು ಕೇಳುತ್ತಾರೆ.
ಸರ್ವೇ ಸೂಪ್ರವೈಸರ್ ಸಕಾಲದಲ್ಲಿ ಅರ್ಜಿ ಸ್ವೀಕರಿಸಿ ಅಖನೊಲೆಜ್ ಮೆಂಟ್ ಕೊಡುತ್ತಾರೆ. ಇದಕ್ಕೆ ನಿಗದಿತ ಶುಲ್ಕ ಇರುತ್ತದೆ. ಶುಲ್ಕವನ್ನು ಪಾವತಿಸಬೇಕು. ಜಮೀನಿನ ಹಳೆಯ ದಾಖಲೆಗಳಿಗೆ ಅಪ್ಲೈ ಮಾಡಿ ೭ ದಿನಗಳಲ್ಲಿ ಸರ್ವೇ ಆಫೀಸ್ ಗೆ ಹೋಗಿ ಜಮೀನಿನ ಹಳೆಯ ದಾಖಲೆಗಳನ್ನು ಪಡೆಯಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಿ ಮತ್ತು ತಪ್ಪದೆ ಎಲ್ಲಾ ರೈತರಿಗೆ ತಿಳಿಸಿ.
'ಕೆನರಾ ಬ್ಯಾಂಕ್' ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ!