ಪೋಸ್ಟ್ ಆಫೀಸ್ ಆರ್ ಡಿ : ಪೋಸ್ಟ್ ಆಫೀಸ್ ನಲ್ಲಿ ಬಂತು ಹೊಸ ಯೋಜನೆ 10,000 ಹೂಡಿಕೆ ಮಾಡಿ 16 ಲಕ್ಷ 50 ಸಾವಿರ ಪಡೆಯಿರಿ ..!
ಪೋಸ್ಟ್ ಆಫೀಸ್ ನಲ್ಲಿ RD ಖಾತೆಯನ್ನು ತೆರೆಯುವ ವಿಧಾನ ಮತ್ತು ನಿಯಮಗಳು ..!
ಪೋಸ್ಟ್ ಆಫೀಸ್ ಈ ಯೋಜನೆ ಅಡಿಯಲ್ಲಿ ತಿಂಗಳಿಗೆ 5000 ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ ಸಿಗುವ ಹಣ ಎಷ್ಟು?
ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಮಾಸಿಕ 5,000 ಠೇವಣಿಯನ್ನು 5 ವರ್ಷಗಳಲ್ಲಿ ಅಂದರೆ 60 ಮಾಸಿಕ ಠೇವಣಿಗಳನ್ನು ಪೂರ್ಣಗೊಳಿಸಿದರೆ 3,52,000 ಗಳನ್ನೂ ಪಡೆಯಬಹುದಾಗಿದೆ. ಅಲ್ಲದೆ ಈ ಯೋಜನೆಯನ್ನು ಇನ್ನು 5 ವರ್ಷಗಳ ಕಾಲ ವಿಸ್ತರಣೆಯನ್ನು ಮಾಡುವ ಮೂಲಕ ಒಟ್ಟು ಹತ್ತು ವರ್ಷದವರೆಗೆ ಈ ಯೋಜನೆಯನ್ನು ಮುಂದುವರೆಸಿ ಮಾಸಿಕ 5000 ಠೇವಣಿಯನ್ನು ಮಾಡಿದರೆ 10 ವರ್ಷದಲ್ಲಿ 8 ಲಕ್ಷದ 30 ಸಾವಿರ ಪಡೆಯಬಹುದಾಗಿದೆ.
ಇಂಡಿಯನ್ ಪೋಸ್ಟ್ ಆಫೀಸ್ ಗ್ರಾಹಕರಿಗೆ ಮತ್ತೊಂದು ಹೊಸ ಯೋಜನೆಯನ್ನು ಪರಿಚಯಿಸಿದೆ. ಅಲ್ಲದೆ ಈಗಾಗಲೇ ಗ್ರಾಹಕರಿಗೆ ಹಲವು ಯೋಜನೆಗಳನ್ನು ಪರಿಚಯಿಸಿದ್ದು, ಇದೀಗ ಪೋಸ್ಟ್ ಆಫೀಸ್ ಮತ್ತೊಂದು RD ಹೂಡಿಕೆ ಯೋಜನೆ ಒಂದನ್ನು ಪರಿಚಯಿಸಿದ್ದು ಇದು ಹಲವು ರೀತಿಯಲ್ಲಿ ಲಾಭವನ್ನು ನೀಡುತ್ತಿದೆ. ಪೋಸ್ಟ್ ಆಫೀಸ್ RD ಯೋಜನೆಯ ಮೂಲಕ ತಿಂಗಳಿಗೆ ರೂ 1000, 5000 ಮತ್ತು 10 ಸಾವಿರ ಹೂಡಿಕೆಯನ್ನು ಪ್ರಸ್ತುತ ಠೇವಣಿದಾರರಿಗೆ 6.7% ಬಡ್ಡಿ ದರವನ್ನು ನೀಡುತ್ತಿದೆ. ಏಪ್ರಿಲ್ 1 ರಿಂದ ಜಾರಿಗೆ ಬಂದಿರುವ ಈ ಯೋಜನೆಯಲ್ಲಿ ಕನಿಷ್ಠ 100 ರಿಂದ 10,000 ವರೆಗೆ ಹೂಡಿಕೆ ಮಾಡಬಹುದಾಗಿದೆ. ಪೋಸ್ಟ್ ಆಫೀಸ್ RD ಯೋಜನೆಯಲ್ಲಿನ ಠೇವಣಿಗಳ ಖಾತೆಯನ್ನು ತೆರೆದ ದಿನಾಂಕ ದಿಂದ 5 ವರ್ಷಗಳಲ್ಲಿ 60 ಮಾಸಿಕ ಠೇವಣಿಗಳ ನಂತರ ಪೂರ್ಣಗೊಳ್ಳುತ್ತದೆ. ಒಂದು ವೇಳೆ ನೀವು ಈ ಯೋಚನೆಯನ್ನು ಮುಂದುವರಿಸಬೇಕು ಎಂದುಕೊಂದಿದ್ದಲ್ಲಿ ಪೋಸ್ಟ್ ಆಫೀಸ್ ವೆಬ್ ಸೈಟ್ ಪ್ರಕಾರ ಖಾತೆದಾರರು ಸಂಬಂಧಿಸಿದ ಅಂಚೆ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಖಾತೆಯನ್ನು ಇನ್ನು ಐದು ವರ್ಷಗಳವರೇ ವಿಸ್ತರಿಸಲು ಅನುಮತಿಯನ್ನು ನೀಡಲಾಗಿದೆ.
ಈ ಯೋಜನೆ ಅಡಿಯಲ್ಲಿ ತಿಂಗಳಿಗೆ 10,000 ಠೇವಣಿ ಮಾಡಿದರೆ ಐದು ವರ್ಷದಲ್ಲಿ ಸಿಗುವ ಹಣ ಎಷ್ಟು ?
ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಮಾಸಿಕ 10,000 ಹೂಡಿಕೆಯನ್ನು ಮಾಡಿದರೆ 5 ವರ್ಷದಲ್ಲಿ ಅಂದರೆ 60 ಮಾಸಿಕ ಠೇವಣಿಗಳ ನಂತರ 7 ಲಕ್ಷದ 20 ಸಾವಿರ ಪಡೆಯಬಹುದಾಗಿದೆ. ಅಲ್ಲದೆ ಈ ಯೋಜನೆಯನ್ನು ಇನ್ನು ಐದು ವರ್ಷಗಳವರೆಗೆ ಅಂದರೆ 120 ಠೇವಣಿಗಳವರೆಗೆ ಯೋಜನೆಯನ್ನು ಮುಂದುವರೆಸಿದರೆ ಸುಮಾರು 16 ಲಕ್ಷದ 50,000 ಪಡೆಯಬಹುದಾಗಿದೆ.