ಭಾರತೀಯ ನೌಕಾಪಡೆಗೆ ಸೇರಲು ಬಯಸುತ್ತಿರುವವರಿಗೆ ಗುಡ್ ನ್ಯೂಸ್ ..! ಭಾರತೀಯ ನೌಕಾಪಡೆಯಿಂದ ಹುದ್ದೆಗಳ ಭರ್ತಿಗಾಗಿ ಅರ್ಜಿ ಅಹ್ವಾನ ...

ಭಾರತೀಯ ನೌಕಾಪಡೆಗೆ ಸೇರಲು ಬಯಸುತ್ತಿರುವವರಿಗೆ ಗುಡ್ ನ್ಯೂಸ್ ..! ಭಾರತೀಯ ನೌಕಾಪಡೆಯಿಂದ ಹುದ್ದೆಗಳ ಭರ್ತಿಗಾಗಿ ಅರ್ಜಿ ಅಹ್ವಾನ ...








             ದೇಶದ ರಕ್ಷಣಾ  ಪಡೆಗಳಲ್ಲಿ ಒಂದಾದ ಭಾರತೀಯ ನೌಕಾಪಡೆಯಲ್ಲಿ ಕೆಲವು ಹುದ್ದೆಗಳು ಖಾಲಿ ಇದ್ದು ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಭಾರತೀಯ ನೌಕ ಪಡೆಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಭಾರತ ದೇಶದ ನೌಕಾಪಡೆಯಲ್ಲಿ ಖಾಲಿ ಇರುವ SSC ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈಗಾಗಲೇ ವಿದ್ಯಾಭ್ಯಾಸ ಮುಗಿಸಿ ಭಾರತೀಯ ನೌಕಾಪಡೆ ಅಥವಾ ವಾಯುಪಡೆಗಳಿಗೆ ಸೇರಬೇಕು  ಎಂದುಕೊಂಡಿರುವವರು ಅದರಲ್ಲೂ Be, B.com, BSC, MBA, BTech, Mtech ಪದವಿಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ಈ ಭಾರತೀಯ ಸೌಕಾಪಾಡೆ ಹುದ್ದೆಗೆ ಈಗಲೇ ಅರ್ಜಿ  ಸಲ್ಲಿಸಬಹುದಾಗಿದೆ.


ಈಗಾಗಲೇ ದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ದೇಶದ ಗಡಿ ಕಾಯಲು ಸೈನಿಕನಾಗಬೇಕು ಅಥವಾ ದೇಶಕ್ಕಾಗಿ ಸೇವೆ ಸಲ್ಲಿಸುವ ಯಾವುದಾದರು ಒಂದು ವೃತ್ತಿಯಲ್ಲಿ ಸೇರಬೇಕು ಎಂಬ ಕನಸು ಕಟ್ಟಿರುತ್ತಾರೆ. ಅಲ್ಲದೆ ಸೈನಿಕ ಹುದ್ದೆಗಳಿಗೆ ಮತ್ತು ಈ ರೀತಿಯ ಭಾರತೀಯ ನೌಕಾಪಡೆ ಹುದ್ದೆಗಳಿಗೆ ಸೇರಲು ಅವಕಾಶಗಳನ್ನು ಕಾಯುತ್ತಿರುವ ಅಂತಹ ಅಭ್ಯರ್ಥಿಗಳಿಗೆ ಇದೀಗ ಭಾರತೀಯ ನೌಕಾಪಡೆಯಿಂದ ಕೆಲವು ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ಆಸಕ್ತಿವುಳ್ಳ ಅಭ್ಯರ್ಥಿಗಳು ಇದಕ್ಕೆ ಆನ್ಲೈನ್ ಅರ್ಜಿ ಸಲ್ಲಿಸಬಹುದು.




ಒಟ್ಟು 242 ಹುದ್ದೆಗಳು ಖಾಲಿ ಇದ್ದು ಹುದ್ದೆಯ ಹೆಸರು ಈಗಾಗಲೇ ಹೇಳಿದ ಹಾಗೆ SSC ಆಫೀಸರ್ ಹುದ್ದೆಯಾಗಿರುತ್ತದೆ.  ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪದವಿ ಪಡೆದಿರುವ ಅಭ್ಯರ್ಥಿಗಳು ವಿದ್ಯಾರ್ಹತೆಗೆ ತಕ್ಕ ಅಧಿಕಾರವನ್ನು ಪಡೆಯಲು ಇದು ಕೊನೆಯ ಅವಕಾಶವಾಗಿರುತ್ತದೆ ಆಸಕ್ತ ಹೊಂದಿದ್ದು ಭಾರತೀಯ ನೌಕಾಪಡೆಗೆ ಸೇರಲು ಅರ್ಜಿಯನ್ನು ಸಲ್ಲಿಸಬಹುದು.


ಭಾರತೀಯ ನೌಕಾಪಡೆ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ನೇಮಕಾತಿ ವಿಧಾನ, ವಯಸ್ಸಿನ ಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ ಬಗ್ಗೆ ತಿಳಿಯೋಣ..?




ದೇಶದ ರಕ್ಷಣಾ ಪಡೆಗಳಲ್ಲಿ ಒಂದಾದ ಭಾರತೀಯ ನೌಕಾಪಡೆಯಲ್ಲಿ ಇರುವ 242 SSC ಆಫೀಸರ್ ಹುದ್ದೆಗಳ ಭರ್ತಿಗಾತಿ ಅರ್ಜಿಯನ್ನು ಆಹ್ವಾನಿಸಲಾಗಿದೆ.. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 29 ಏಪ್ರಿಲ್ 2023 ಪ್ರಾರಂಭ ದಿನಾಂಕವಾಗಿದ್ದು 14 ಮೇ 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನೇಮಕಾತಿಯ ವಿಧಾನವು ಅರ್ಹ ಅಭ್ಯರ್ಥಿಗಳ ಪಟ್ಟಿ ಮತ್ತು SSB ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ, ವಯಸ್ಸಿನ ಮಿತಿ 1997 ರಿಂದ 2005 ವರ್ಷದ ನಡುವೆ ಜನಿಸಿರುವ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 

             ಅಲ್ಲದೆ ಮುಖ್ಯವಾಗಿ ಅವಿವಾಹಿತ ಪುರುಷರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಕೊನೆಯದಾಗಿ ಅರ್ಜಿ ಸಲ್ಲಿಸುವ ವಿಧಾನ ಅರ್ಜಿಯನ್ನು ಆನ್ಲೈನ್ ನಲ್ಲಿ ಸಲ್ಲಿಸಬೇಕು.









ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು