ರಾಜ್ಯದಲ್ಲಿ ನಾಳೆ 34 ಕೇಂದ್ರಗಳಲ್ಲಿ ಮತ ಎಣಿಕೆಗೆ ಸಿದ್ಧತೆ: ಚುನಾವಣಾ ಆಯೋಗದಿಂದ ಈಗಾಗಲೇ ಸಕಲ ಸಿದ್ಧತೆ ! 2615 ಅಭ್ಯರ್ಥಿಗಳ ಹಣೆಬರಹ ನಿರ್ಧಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭ । ಮಧ್ಯಾಹ್ನದ ವೇಳೆಗೆ ಚುನಾವಣಾ ಫಲಿತಾಂಶ ಫೈನಲ್ :

ರಾಜ್ಯದಲ್ಲಿ ನಾಳೆ  34  ಕೇಂದ್ರಗಳಲ್ಲಿ ಮತ ಎಣಿಕೆಗೆ ಸಿದ್ಧತೆ:
ಚುನಾವಣಾ ಆಯೋಗದಿಂದ ಈಗಾಗಲೇ ಸಕಲ ಸಿದ್ಧತೆ ! 2615 ಅಭ್ಯರ್ಥಿಗಳ ಹಣೆಬರಹ ನಿರ್ಧಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭ । ಮಧ್ಯಾಹ್ನದ ವೇಳೆಗೆ ಚುನಾವಣಾ ಫಲಿತಾಂಶ ಫೈನಲ್ :














ಬೆಂಗಳೂರು 16 ನೇ ವಿಧಾನಸಭೆ ಚುನಾವಣೆಯ ಮತ ಎಣಿಕೆಯು ಶನಿವಾರ ರಾಜ್ಯದ 34 ಚುನಾವಣಾ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದ್ದು ಎಣಿಕೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ.
ರಾಜ್ಯದ 58,545 ಮತಗಟ್ಟೆಗಳಲ್ಲಿನ ಮತದಾರರು ಅಖಾಡದಲ್ಲಿರುವ 2615 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆದಿದ್ದು, ಫಲಿತಾಂಶ ಶನಿವಾರ ಪ್ರಕಟವಾಗಲಿದೆ, ಬೆಳಗ್ಗೆ 8 ರಿಂದ ಮತ ಎಣಿಕೆ ಆರಂಭಗೊಳ್ಳಲಿದೆ. ಮಧ್ಯಾಹ್ನದ ವೇಳೆಗೆ ಹಣೆಬರಹ ಹೊರಬೀಳಲಿದೆ. 

       ಈಗಾಗಲೇ ಮತ ಚಲಾಯಿಸಿರುವ ಇವಿಎಂ ಗಳನ್ನು ಪೊಲೀಸ ಕಣ್ಗಾವಲಿನಲ್ಲಿ ಭದ್ರತೆಯ ಕೊಠಡಿಯಲ್ಲಿಡಲಾಗಿದೆ. ಮತಯಂತ್ರಗಳಿರುವ ಸ್ಟ್ರಾಂಗ್ ರೂಮ್ ಗಳಿಗೆ ಸಿಸಿ ಕ್ಯಾಮೆರಾ ನಿಗಾ ಜತೆಗೆ ವ್ಯಾಪಕ ಭದ್ರತೆ  ಒದಗಿಸಲಾಗಿದೆ.




ಮತ ಎಣಿಕೆಯ ಜಿಲ್ಲಾ ಕೇಂದ್ರಗಳು :

ಬೆಳಗಾವಿ ಜಿಲ್ಲೆ-ಆರ್ ಪಿ ಡಿ ಕಾಲೇಜು,

ಬಾಗಲಕೋಟೆ-ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ,

ವಿಜಯಪುರ-ಸೈನಿಕ ಶಾಲೆ ಆವರಣ,

ಯಾದಗಿರಿ-ಸರ್ಕಾರಿ ಪಿಯು ಕಾಲೇಜು,

ಕಲಬುರಗಿ-ಗುಲ್ಬರ್ಗ ವಿಶ್ವವಿದ್ಯಾಲಯ,

ಬೀದರ್ ಬಿವಿಬಿ ಕಾಲೇಜು,

ರಾಯಚೂರು-ಎಸ್ ಆರ್ ಬಿಪಿಎಸ್ ಪಿಯು ಕಾಲೇಜು,

ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು,

ಗದಗ-ಶ್ರೀ ಜಗದ್ಗುರು ತೋಟದಾರ್ಯ ಎಂಜಿನಿಯರಿಂಗ್ ಕಾಲೇಜು, ಧಾರವಾಡ-ಕೃಷಿ ವಿಜ್ಞಾನ ವಿಶ್ವವಿದ್ಯಾಲಯ.


ಉತ್ತರ ಕನ್ನಡ ಜಿಲ್ಲೆ-ಡಾ ಎ.ವಿ.ಬಾಳಿಗ ಕಲೆ ಮತ್ತು ವಿಜ್ಞಾನ ಕಾಲೇಜು ಕುಮಟಾ,

ಹಾವೇರಿ-ಸರ್ಕಾರಿ ಎಂಜಿನಿಯರಿಂಗ್ ಕಾಲೇಜು,

ವಿಜಯನಗರ-ಪ್ರೌಢದೇವರಾಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,
ಹೊಸಪೇಟೆ,

ಬಳ್ಳಾರಿ-ರಾವ್ ಬಹಾದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು,

 ಚಿತ್ರದುರ್ಗ-ಸರ್ಕಾರಿ ವಿಜ್ಞಾನ ಕಾಲೇಜು,

ದಾವಣಗೆರೆ-ಶಿವ ಗಂಗೋತ್ರಿ, ದಾವಣಗೆರೆ ವಿಶ್ವ ವಿದ್ಯಾಲಯ .




ಶಿವಮೊಗ್ಗ ಜಿಲ್ಲೆ-ಸಹ್ಯಾದ್ರಿ ಕಾಲ ಕಾಲೇಜು,

ಉಡುಪಿ-ಸೆಂಟ್ ಸೇಸಲಿಯಾಸ್ ಸಮೂಹ ಸಂಸ್ಥೆ, ಬ್ರಹ್ಮಗಿರಿ,

ಚಿಕ್ಕಮಗಳೂರು-ಐಡಿಎಸ್ ಜಿ ಸರ್ಕಾರಿ ಕಾಲೇಜು,

ತುಮಕೂರು-ಸರ್ಕಾರಿ ಪಾಲಿಟೆಚ್ನಿಕ್, ತುಮಕೂರು ವಿಜ್ಞಾ ವಿಶ್ವವಿದ್ಯಾಲಯ ಮತ್ತು ತುಮಕೂರು ಕಾಲ ವಿಶ್ವವಿದ್ಯಾಲಯ, 

ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು. ಬಿಬಿಎಂಪಿ ಕೇಂದ್ರ-ಬಿಎಂಎಸ್ ಮಹಿಳಾ ಕಾಲೇಜು, ಬಸವನಗುಡಿ,

ಬಿಬಿಎಂಪಿ ಉತ್ತರ-ಮೌಂಟ್ ಕಾರ್ಮೆಲ್ ಕಾಲೇಜು, 

ಬಿಬಿಎಂಪಿ ದಕ್ಷಿಣ-ಎಸ್ ಎಸ್ ಎಂ ಆರ್ ವಿ ಪಿಯು ಕಾಲೇಜು ಜಯ ನಗರ, 

ಬೆಂಗಳುರು ನಗರ-ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, 

ಬೆಂಗಳೂರು ಗ್ರಾ. ಜಿಲ್ಲೆ -ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಶಾಲೆ,

ರಾಮನಗರ -ಸರ್ಕಾರೀ ಎಂಜಿನಿಯರಿಂಗ್ ಕಾಲೇಜು.


ಮಂಡ್ಯ ಜಿಲ್ಲೆ-ಮಂಡ್ಯ ವಿಶ್ವವಿದ್ಯಾಲಯ, 

ದಕ್ಷಿಣ ಕನ್ನಡ-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,  ಸುರತ್ಕಲ್, 

ಕೊಡಗು-ಸೆಂಟ್ ಜೋಸೆಫ್ ಕಾನ್ವೆಂಟ್, 

ಮೈಸೂರು-ಸರ್ಕಾರಿ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು .









ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@










ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು