ಗೆಲುವಿನ ಲೆಕ್ಕಾಚಾರದಲ್ಲಿ ಬಾಜಿ । ಹಣ, ಆಭರಣ, ಮನೆ, ವಾಹನ ಪಣಕ್ಕೆ !
ಬೆಂಗಳೂರು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆ ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿದ್ದು, ಬೆಟ್ಟಿಂಗ್ ಭರಾಟೆ ಜೋರಾಗಿದೆ. ಯಾವ ಅಭ್ಯರ್ಥಿ ಎಷ್ಟು ಸ್ಥಾನ ಪಡೆಯಬಹುದು? ಯಾರು ಮುಖ್ಯಮಂತ್ರಿ ಆಗಬಹುದು? ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವವರು ಯಾರು ? ಎಂದು ಪಕ್ಷ ಮತ್ತು ಅಭ್ಯರ್ಥಿಗಳ ಮೇಲೆ ಅತೀವ ಅಭಿಮಾನ ಹೊಂದಿರುವವರ ಪೈಕಿ ಹಲವರು ನಗದು, ನಿವೇಶನ, ದ್ವಿಚಕ್ರ, ಕಾರು, ಕುರಿ, ಸಾಕು ಪ್ರಾಣಿಗಳು ಒಳಗೊಂದು ವಿವಿಧ ವಸ್ತುಗಳನ್ನು ಅಡವಿಟ್ಟು ಅದುಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.
ಡಿ.ರವಿಶಂಕರ್ ಫೇವರಿಟ್ :
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಬೆಟ್ಟಿಂಗ್ ಶುರುವಾಗಿದೆ. ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾದ ಮೈಸೂರು ಜಿಲ್ಲೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಪರ ಬೆಟ್ಟಿಂಗ್ ಕಟ್ಟಲು ಯುವಕರು ಮುಗಿಬೀಳುತ್ತಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪೂರಕವಾಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಯುವಕನೊಬ್ಬ ಡಿ.ರವಿಶಂಕರ್ ಪರ ಬೆಟ್ಟಿಂಗ್ ಕಟ್ಟಲು ಕೈಯಲ್ಲಿ ಕಂತೆ ಹಣ ಹಿಡಿದು ಮುಂದಾಗಿದ್ದಾರೆ. ಡಿ.ರವಿಶಂಕರ್ ಗೆಲ್ಲುತ್ತಾರೆ, 2 ಲಕ್ಷ ರೂ ಬೆಟ್ಟಿಂಗ್ ಕಟ್ಟುತ್ತೇನೆ. ಬೇಕಿದ್ದರೆ 5 ಲಕ್ಷ ರೂ. ಕಟ್ಟುತ್ತೇನೆ. ಎದುರಾಳಿ ಪರ ಕಟ್ಟುವವರು ಇದ್ದಾರೆ ಬನ್ನಿ ಎಂದು ಸವಾಲು ಹಾಕಿದ್ದಾನೆ.
ಗುಂಡ್ಲು ಪೇಟೆಯಲ್ಲೂ ಜೋರು :
ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಮುದ್ದರಾಮೇಗೌಡ ಎಂಬುವರು ಕಾಂಗ್ರೆಸ್ ಅಭ್ಯರ್ಥಿ ಪರ 3 ಲಕ್ಷ ರೂ. ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದು, ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಶಾಸಕ ನಿರಂಜನ್ ಕುಮಾರ್ ಪುನರ್ ಆಯ್ಕೆ ಆಗುತ್ತಾರೆ. ಎಂದು ತೆರಕನಂಬಿ ಗ್ರಾಮದಲ್ಲಿ ಉದ್ಯಮಿಯೊಬ್ಬರು 15 ಲಕ್ಷ ರೂ ಬಾಜಿ ಕಟ್ಟಲು ಮುಂದಾಗಿದ್ದಾರೆ. ನಿರಂಜನ ಕುಮಾರ ಅತಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದು ಬಿಜೆಪಿ ಪುರಸಭೆ ಸದಸ್ಯ ಕಿರಣ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಪಂಥಾಹ್ವಾನ ನೀಡಿದ್ದಾರೆ. ಐವತ್ತು ಕಾರ್ಯಕರ್ತರು ತಲಾ 2 ಲಕ್ಷ ರೂ. ಹಾಕಿ 1 ಕೋಟಿ ರೂ ಹಣ ಸಂಗ್ರಹಿಸಿದ್ದು, ಕಾಫಿ ಡೇ ಹೋಟೆಲ್ ಸಮೀಪ ಕಾಯುತ್ತಿದ್ದೇವೆ ಎಂದು 1 ಕೋಟಿ ರೂ ನಗದು ಇತ್ತು ಅಹ್ವಾನ ನೀಡುತ್ತಿರುವ ವಿಎಒ ವೈರಲ್ ಆಗಿದೆ.
ಕರಾವಳಿಯಲ್ಲಿ ಬಾಜಿ :
ಕರಾವಳಿಯಲ್ಲೂ ಗೆಲುವಿನ ಲೆಕ್ಕಾಚಾರದ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ. ಪ್ರಮುಖ ಅಭ್ಯರ್ಥಿಗಳು, ಬಿಗ್ ಫೈಟ್ ಕ್ಷೇತ್ರಗಳಲ್ಲಿ ಆಪ್ ಮೂಲಕ ಬೆಟ್ಟಿಂಗ್ ನಡೆಯುತ್ತಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಜುಗಾರಿ ಅಡ್ಡೆಗಳ ಮೇಲೆ ಸಿಬಿಸಿ ಹಾಗೂ ಜಿಲ್ಲಾ ಪೊಲೀಸರು ಕಣ್ಗಾವಲು ಇರಿಸಿದ್ದಾರೆ. ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ಬೆಳ್ತಂಗಡಿಯ ಬಿಜೆಪಿಯ ಹರೀಶ್ ಪುಂಜ ಹಾಗೂ ಕಾಂಗ್ರೆಸ್ ನ ರಕ್ಷಿತ್ ಶಿವರಾಂ. ಬಂಟವಾಳದಲ್ಲಿ ಕಾಂಗ್ರೆಸ್ ನ ರಮಾನಾಥ ರಾಯ್, ಮಂಗಳೂರು ದಕ್ಷಿಣದ ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ, ಜೆಡಿಎಸ್ ಅಭ್ಯರ್ಥಿ ಮೊಹಿಯುದ್ದೀನ್ ಭಾವ, ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ ಖದರ್, ಬಿಜೆಪಿಯ ಸತೀಶ್ ಕುಂಪಲ ಬೆಟ್ಟಿಂಗ್ ಮಾಡುವವರ ಫೇವರಿಟ್ ಗಲಿ. ಲಭ್ಯ ಮಾಹಿತಿ ಪ್ರಕಾರ ಸಟ್ಟಾ ಬಜಾರ್ ಗಳಲ್ಲಿ ಈ ಅಭ್ಯರ್ಥಿಗಳ ಸೋಲು-ಗೆಲುವು, ಪಡೆಯುವ ಮತಗಳ ಮೇಲೆ 25 ಸಾವಿರದಿಂದ 10 ಲಕ್ಷ ರೂ ವರೆಗೆ ಬೆಟ್ಟಿಂಗ್ ವ್ಯವಹಾರ ನಡೆದಿದೆ.
ಪ್ರಾಣಿಗಳು ಪಣಕ್ಕೆ
ಚನ್ನಗಿರಿ ಕಾಂಗ್ರೆಸ್ ಅಭ್ಯರ್ಥಿ ಶಿವಗಂಗಾ ಬಸವರಾಜ್ ಗೆಲ್ಲುತ್ತಾರೆ ಎಂದು ತಾಲೂಕಿನ ನಲ್ಲೂರು ಗ್ರಾಮದ ವ್ಯಕ್ತಿಯೊಬ್ಬ ಎರಡು ಎಕರೆ ಜಮೀನನ್ನು ಪಣಕ್ಕಿಟ್ಟಿರುವುದು ಜಾಲತಾಣದಲ್ಲಿ ವೈರಲ್ ಆಗಿದೆ.
ಪಕ್ಷೇತರ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಮೂರೂ ದಿನಗಳಿಂದ 50 ಲಕ್ಷ ರೂ. ವರೆಗೆ ಬೆಟ್ಟಿಂಗ್ ಮಾಡಿದ್ದಾರೆ. ಗ್ರಾಮಗಳಲ್ಲಿ ಕುರಿ, ಕೋಳಿಗಳನ್ನು ಪಣಕ್ಕಿಡಲಾಗಿದೆ. ಜಗಳೂರು ತಾಲೂಕಿನ ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ತಮ್ಮವರೇ ಗೆಲ್ಲುತ್ತಾರೆ ಎಂಬ ಭರವಸೆಯಿಂದ ಹಣ, ಟಗರುಗಳನ್ನು ಬೆಟ್ಟಿಂಗ್ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Election